Wednesday, November 4, 2026
spot_img
More
    spot_img
    HomeEntertainmentಎರಡೇ ದಿನಕ್ಕೆ ಮುಗ್ಗರಿಸಿದ ಪವನ್‌ ʼಹರಿಹರ ವೀರಮಲ್ಲುʼ; ಶೋ ಕಿತ್ತುಕೊಂಡ ಕನ್ನಡದ ಹೊಸಬರ ಚಿತ್ರ!

    ಎರಡೇ ದಿನಕ್ಕೆ ಮುಗ್ಗರಿಸಿದ ಪವನ್‌ ʼಹರಿಹರ ವೀರಮಲ್ಲುʼ; ಶೋ ಕಿತ್ತುಕೊಂಡ ಕನ್ನಡದ ಹೊಸಬರ ಚಿತ್ರ!

    ನಿನ್ನೆ ( ಜುಲೈ 24 ) ಶುಕ್ರವಾರ ರಾಜ್ಯಾದ್ಯಂತ ಕನ್ನಡ ಸೇರಿ ಹಲವು ಭಾಷೆಗಳ ಚಿತ್ರಗಳು ಬಿಡುಗಡೆಯಾದವು. ಕಳೆದ ವಾರವಷ್ಟೇ ಬಿಡುಗಡೆಯಾದ ಎಕ್ಕ ಚಿತ್ರದ ಮೂಲಕ ಚೇತರಿಸಿಕೊಂಡಿದ್ದ ಕನ್ನಡ ಚಿತ್ರರಂಗಕ್ಕೆ ನಿನ್ನೆ ಬಿಡುಗಡೆಯಾದ ಹರಿಹರ ವೀರಮಲ್ಲು ಶೋ ಪಡೆದುಕೊಂಡು ಹಿನ್ನಡೆ ಉಂಟುಮಾಡಬಹುದು ಎನ್ನಲಾಗಿತ್ತು.

    ಅದೇ ರೀತಿ ಬಿಡುಗಡೆಯ ದಿನ ಹೆಚ್ಚು ಪ್ರದರ್ಶನಗಳನ್ನೂ ಸಹ ಬೆಂಗಳೂರಿನಲ್ಲಿ ಹರಿಹರ ವೀರಮಲ್ಲು ಪಡೆದುಕೊಂಡಿತ್ತು. ಆದರೆ ಎರಡನೇ ದಿನ ಚಿತ್ರದ ಹಣೆಬರಹವೇ ಬದಲಾಗಿಹೋಗಿದೆ. ಬೆಂಗಳೂರಿನಲ್ಲಿ ಶೋಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದ್ದು, ಹೊಸಬರ ಚಿತ್ರ ʼಸು ಫ್ರಮ್‌ ಸೋʼ ಪವನ್‌ ಸಿನಿಮಾದ ಶೋಗಳನ್ನು ಕಿತ್ತುಕೊಂಡಿದೆ.

    ಇನ್ನು ಈ ಬದಲಾವಣೆಗೆ ಕಾರಣ ʼಸು ಫ್ರಮ್‌ ಸೋʼ ಚಿತ್ರ ಪಡೆದುಕೊಳ್ಳುತ್ತಿರುವ ಪಾಸಿಟಿವ್‌ ವಿಮರ್ಶೆ ಹಾಗೂ ಹರಿಹರ ವೀರಮಲ್ಲು ಪಡೆದುಕೊಂಡ ಅಷ್ಟಕ್ಕಷ್ಟೇ ವಿಮರ್ಶೆ. ಸು ಫ್ರಮ್‌ ಸೋ ಚಿತ್ರ ವೀಕ್ಷಿಸಿ ಹೊರಬಂದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಚೆನ್ನಾಗಿದೆ ಎಂಬ ವಿಮರ್ಶೆಗಳೇ ಚಿತ್ರವನ್ನು ಕೈಹಿಡಿದು ಮೇಲೆತ್ತಿದೆ. ಜನರು ಚಿತ್ರಮಂದಿರದತ್ತ ಕಾಲಿಟ್ಟಿದ್ದಾರೆ. ಹೀಗಾಗಿ ಚಿತ್ರ ಶೋಗಳನ್ನು ಗಿಟ್ಟಿಸಿಕೊಂಡಿದೆ.

    ಇನ್ನು ಇಂದು ( ಜುಲೈ 25 ) ಸಂಜೆ 7 ಗಂಟೆ ಸಮಯಕ್ಕೆ ಈ ದಿನದ ಮುಂಬರುವ ಶೋಗಳ ಪೈಕಿ ಬೆಂಗಳೂರು ನಗರದಲ್ಲಿ ಯಾವ ಚಿತ್ರ ಎಷ್ಟು ಫಾಸ್ಟ್‌ ಫಿಲ್ಲಿಂಗ್‌ ಅಥವಾ ಹೌಸ್‌ಫುಲ್‌ ಆಗಿವೆ ಎಂಬ ಮಾಹಿತಿ ಮುಂದಿದೆ..

    ಸೈಯಾರಾ ( ಹಿಂದಿ ) – 80
    ತಲೈವನ್‌ ತಲೈವಿ ( ತಮಿಳು ) – 48
    ಸು ಫ್ರಮ್‌ ಸೋ ( ಕನ್ನಡ ) – 44
    ಹರಿಹರ ವೀರಮಲ್ಲು – 23
    ಮಹಾವತಾರ್‌ ನರಸಿಂಹ – 16
    ಎಫ್‌ 1 – 20
    ಎಕ್ಕ – 2

    ಹೆಲ್ತ್ ಫ್ರೆಂಡ್ಲಿ ಬ್ರೇಕ್‌ಫಾಸ್ಟ್: ಮೃದುವಾದ ಓಟ್ಸ್ ಇಡ್ಲಿ ಟ್ರೈ ಮಾಡಿ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search