Tuesday, November 3, 2026
spot_img
More
    spot_img
    HomeSportsCricket7 ಸಿಕ್ಸರ್‌, 15 ಬೌಂಡರಿ, ಶತಕ ಚಚ್ಚಿ ಅಬ್ಬರಿಸಿದ ಎಬಿಡಿ; 12 ಓವರ್‌ಗೆ ಇಂಗ್ಲೆಂಡ್‌ ವಿರುದ್ಧ...

    7 ಸಿಕ್ಸರ್‌, 15 ಬೌಂಡರಿ, ಶತಕ ಚಚ್ಚಿ ಅಬ್ಬರಿಸಿದ ಎಬಿಡಿ; 12 ಓವರ್‌ಗೆ ಇಂಗ್ಲೆಂಡ್‌ ವಿರುದ್ಧ ಗೆದ್ದು ಬೀಗಿದ ಸೌತ್‌ಆಫ್ರಿಕಾ

    ಲೈಸ್‌ಸ್ಟರ್: ಗ್ರೇಸ್‌ ರೋಡ್‌ ಕ್ರೀಡಾಂಗಣದಲ್ಲಿ ನಿನ್ನೆ ( ಜುಲೈ 24 ) ನಡೆದ ವಿಶ್ವ ಚಾಂಪಿಯನ್‌ಶಿಪ್‌ ಆಫ್‌ ಲೆಜೆಂಡ್ಸ್‌ 2025ರ ಎಂಟನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಇಂಗ್ಲೆಂಡ್‌ ಚಾಂಪಿಯನ್ಸ್ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 152 ರನ್‌ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 153 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಎಬಿಡಿ ಅಬ್ಬರದ ನೆರವಿನಿಂದ ಕೇವಲ 12.2 ಓವರ್‌ಗಳಲ್ಲೇ ಗೆದ್ದು ಬೀಗಿದೆ.

    ಇಂಗ್ಲೆಂಡ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮಸ್ಟರ್ಡ್‌ 39 ರನ್‌ ಗಳಿಸಿದರೆ, ರವಿ ಬೊಪಾರಾ 7 ರನ್‌ ಕಲೆಹಾಕಿದರು. ಇನ್ನುಳಿದಂತೆ ಮೊಯಿನ್‌ ಅಲಿ 10, ಸಮಿತ್‌ ಪಟೇಲ್‌ 24, ಇಯಾನ್‌ ಮಾರ್ಗನ್‌ 20, ಇಯಾನ್‌ ಬೆಲ್‌ 7, ಟಿ ಆಂಬ್ರೋಸ್‌ ಅಜೇಯ 19, ಪ್ಲಂಕೆಟ್‌ ಅಜೇಯ 13 ರನ್‌ ಬಾರಿಸಿದರು.

    ದಕ್ಷಿಣ ಆಫ್ರಿಕಾ ಪರ ಪಾರ್ನೆಲ್‌ ಹಾಗೂ ಇಮ್ರಾನ್‌ ತಾಹಿರ್‌ ತಲಾ 2 ವಿಕೆಟ್‌, ಒಲಿವಿಯರ್‌ ಹಾಗೂ ಕ್ರಿಸ್‌ ಮೊರಿಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ದಕ್ಷಿಣ ಆಫ್ರಿಕಾ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಹಶೀಮ್‌ ಆಮ್ಲಾ ಹಾಗೂ ಎಬಿ ಡಿವಿಲಿಯರ್ಸ್ ಕಣಕ್ಕಿಳಿದರು. ಆಮ್ಲಾ 25 ಎಸೆತಕ್ಕೆ ಅಜೇಯ 29 ರನ್‌ ಗಳಿಸಿದರೆ, ಅಬ್ಬರಿಸಿದ ಎಬಿ ಡಿವಿಲಿಯರ್ಸ್‌ 51 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 15‌ ಬೌಂಡರಿ ಸಹಿತ ಅಜೇಯ 116 ರನ್‌ ಚಚ್ಚಿದರು.

    ವಾಣಿಜ್ಯ ಉದ್ದೇಶಕ್ಕಾಗಿ ಬೋರ್‌ವೆಲ್‌ ಕೊರೆಸುವವರಿಗೆ ಗುಡ್‌ನ್ಯೂಸ್;‌ ಇಲ್ಲ ದಂಡ

    ಎಐ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search