ಬೆಂಗಳೂರು : ವಾಣಿಜ್ಯ ಉದ್ದೇಶಕ್ಕಾಗಿ ಬೋರ್ವೆಲ್ ಕೊರೆಯುವುದಕ್ಕೆ ಬರುವ ಮಾರ್ಚ್ವರೆಗೆ ದಂಡ ವಿಧಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಸರ್ಕಾರದ ಅಂತರ್ಜಲ ಪ್ರಾಧಿಕಾರದ ಪರಿಸರಾತ್ಮಕ ಪರಿಹಾರ ನಿಯಮಾವಳಿಗಳ ಪ್ರಕಾರ ನಿರಪೇಕ್ಷಣಾ ಪತ್ರವಿಲ್ಲದೇ ವಾಣಿಜ್ಯ ಉದೇಶಕ್ಕಾಗಿ ಬೋರ್ವೆಲ್ ಕೊರೆಯುವವರಿಗೆ ಭಾರೀ ದಂಡ ವಿಧಿಸಲಾಗುತ್ತದೆ.
ಪ್ಯಾಕೇಜ್ನಲ್ಲಿ ಕುಡಿಯುವ ಉದ್ದೇಶಕ್ಕಾಗಿ ಸುರಕ್ಷಿತ ವಲಯಗಳಲ್ಲಿನ ಅಂತರ್ಜಲವನ್ನು ಬಳಸಿದರೆ ಅಂತಹವರಿಗೆ ಪ್ರತಿ ಕ್ಯೂಬಿಕ್ ಮೀಟರ್ಗೆ 12 ರೂಪಾಯಿಯಿಂದ 30 ರೂಪಾಯಿ ದಂಡವಿದೆ. ಇನ್ನಿತರ ವಲಯಗಳಲ್ಲಿ ಈ ದಂಡದ ಪ್ರಮಾಣ 120 ರೂಪಾಯಿವರೆಗೆ ಇದ್ದು ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
ಅದೇ ಕೈಗಾರಿಕೆಗಳು, ಮೂಲಭೂತಸೌಕರ್ಯ ಅಭಿವೃದ್ಧಿ ಮತ್ತು ಗಣಿಗಾರಿಕೆಯ ಚಟುವಟಿಕೆಗಳಿಗಾಗಿ ಬೋರ್ವೆಲ್ ನೀರು ಬಳಸಿದರೆ ಅಂತಹವರಿಗೆ ಪ್ರತಿ ಕ್ಯೂಬಿಕ್ ಮೀಟರ್ ನೀರು ಬಳಕೆಗೆ 15 ರೂಪಾಯಿಯಿಂದ 200 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಆದರೆ, ಕೇಂದ್ರದ ಈ ನಿಯಮವನ್ನು ಜಾರಿಗೊಳಿಸದಿರಲು ನಿರ್ಧರಿಸಿರುವ ರಾಜ್ಯ ಸರ್ಕಾರ 2026ರ ಮಾರ್ಚ್ವರೆಗೆ ಯಾವುದೇ ದಂಡ ವಿಧಿಸದಿರಲು ನಿಶ್ಚಯಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಮಾರ್ಚ್ 31ರವರೆಗೆ ಕೇಂದ್ರದ ನಿಯಮಗಳು ರಾಜ್ಯದಲ್ಲಿ ಜಾರಿಯಾಗುವುದಿಲ್ಲ
ದೇಶದ ಹಲವು ರಾಜ್ಯಗಳು ಕೇಂದ್ರದ ಅಂತರ್ಜಲ ಪ್ರಾಧಿಕಾರದ ನಿಯಮಗಳನ್ನು ಜಾರಿಗೊಳಿಸಬೇಕೇ? ಬೇಡವೇ? ಎಂಬಪರಾಮರ್ಶೆಯಲ್ಲಿ ತೊಡಗಿವೆ. ಆದ್ದರಿಂದ ಕರ್ನಾಟಕದಲ್ಲಿ ಈ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮುನ್ನ ನಿರಪೇಕ್ಷಣಾ ಪತ್ರವನ್ನು ನೀಡಲು ಅನುಸರಿಸಬೇಕಾದ ಮಾರ್ಗಗಳನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದೆ. ಹಾಗಾಗಿ ಮಾರ್ಚ್ 2026ರವರೆಗೆ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ ಎನ್ನುತ್ತವೆ ಸಣ್ಣ ನೀರಾವರಿ ಇಲಾಖೆಯ ಉನ್ನತ ಮೂಲಗಳು.
ಮನೆಯಲ್ಲಿಯೇ ಆಯುಷ್ಮಾನ್ ಕಾರ್ಡ್ ಪಡೆಯುವ ಸರಳ ಮಾರ್ಗ: ಅರ್ಜಿ ಪ್ರಕ್ರಿಯೆ, ದಾಖಲೆಗಳು ಮತ್ತು ಸಂಪೂರ್ಣ ಮಾಹಿತಿ
ಎಐ ಕೃಷಿ ಕನ್ನಡ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


