ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಬೇಕು, ಆಕ್ಷೇಪಣೆ ಬಾರದಿದ್ದಲ್ಲಿ ನಿಯಮ ಇಲಾಖೆಯು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಎಸ್ಎಸ್ಎಲ್ಸಿ) ಕಾಯ್ದೆಗೆ ಕರಡು ತಿದ್ದುಪಡಿ ಪ್ರಕಟಿಸಿದ್ದು, 625 ಅಂಕಗಳಿಗೆ ಕನಿಷ್ಠ 206 ಅಂಕಗಳು ಅಂದರೆ ಶೇ.33ರಷ್ಟು ಅಂಕಗಳನ್ನು ಗಳಿಸಿದರೆ ಉತ್ತೀರ್ಣ ಎಂಬ ನಿಯಮ ಅನುಷ್ಠಾನಕ್ಕೆ ಮುಂದಾಗಿದೆ.
ಕರಡು ತಿದ್ದುಪಡಿ ನಿಯಮಗಳನ್ನು ಗುರುವಾರ ಪ್ರಕಟಿಸಿರುವ ಇಲಾಖೆಯು ಮುಂದಿನ 15 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸಿ ಜಾರಿಗೊಳ್ಳಲಿದೆ ಎಂದು ತಿಳಿಸಿದೆ.
ಈ ಮೊದಲು ಅಭ್ಯರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಶೇ.35 ರಷ್ಟು ಅಂಕ ಗಳಿಸುವುದು ಕಡ್ಡಾಯವಾಗಿತ್ತು. ಆದರೆ ಈ ಹಿಂದೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಕನ್ನಡ ಅಥವಾ ಪ್ರಥಮ ಭಾಷೆಗೆ 125 ಅಂಕಗಳ ಬದಲಾಗಿ 100 ಅಂಕಗಳಿಗೆ ಇಳಿಸುವ ಪ್ರಸ್ತಾವವನ್ನು ಕರಡು ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ತಿಳಿದುಬಂದಿದೆ.
ವಾಣಿಜ್ಯ ಉದ್ದೇಶಕ್ಕಾಗಿ ಬೋರ್ವೆಲ್ ಕೊರೆಸುವವರಿಗೆ ಗುಡ್ನ್ಯೂಸ್; ಇಲ್ಲ ದಂಡ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


