ಕೆಲವು ಬೈಕ್ ಸವಾರರು ಗುಂಡ್ಯ ಅರಣ್ಯ ಪ್ರದೇಶದೊಳಗೆ ನುಗ್ಗಿದ್ದಲ್ಲದೇ ನೀರಿನಲ್ಲಿ ಬೈಕ್ ಓಡಿಸಿ ಅದನ್ನು ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ನೆಟ್ಟಿಗರು ಟೀಕಿಸಿದ್ದಾರೆ.
ಬೈಕ್ ಸವಾರರು ಇಷ್ಟು ಸಲುಗೆ ಪಡೆದುಕೊಂಡಿದ್ದು, ಅರಣ್ಯ ಪ್ರದೇಶಕ್ಕೆ ಪ್ರವೇಶ ನೀಡಿದವರು ಯಾರು ಎಂಬ ಪ್ರಶ್ನೆ ಎದ್ದಿದೆ. ಅಲ್ಲದೇ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದರೂ ಕ್ರಮವನ್ನೇಕೆ ಕೈಗೊಂಡಿಲ್ಲ ಎಂಬ ಆಕ್ರೋಶ ಸಹ ವ್ಯಕ್ತವಾಗಿದೆ.
ಗುಂಡ್ಯ ಅರಣ್ಯ ಪ್ರದೇಶ ಪ್ರಾಣಿಗಳ ತಾಣವೂ ಆಗಿದ್ದು, ಇಂತಹ ಕಿಡಿಗೇಡಿಗಳಿಂದ ಅಪಾಯ ಸಂಭವಿಸುವ ಸಾಧ್ಯತೆಗಳಿವೆ. ಅಲ್ಲದೇ ಈ ರೀತಿ ವಿಡಿಯೊ ಹಂಚಿಕೊಳ್ಳುವುದು ಇತರರನ್ನೂ ಇಂತಹ ಕೃತ್ಯವೆಸಗಲು ಪ್ರೇರಣೆ ನೀಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ಎರಡೇ ದಿನಕ್ಕೆ ಮುಗ್ಗರಿಸಿದ ಪವನ್ ʼಹರಿಹರ ವೀರಮಲ್ಲುʼ; ಶೋ ಕಿತ್ತುಕೊಂಡ ಕನ್ನಡದ ಹೊಸಬರ ಚಿತ್ರ!
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


