ಬಳ್ಳಾರಿ: ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಪ್ರತಿಷ್ಟಿತ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ ಬೆನ್ನಲ್ಲೇ ಬಿಜೆಪಿಯ ಹಲವು ನಾಯಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಸಂತೋಷ್ ಲಾಡ್ ಅವರು ದಸರಾವನ್ನು ಉದ್ಘಾಟಿಸಬಾರದು ಎಂದು ಸಂವಿಧಾನದಲ್ಲೇನಾದರೂ ಬರೆದಿದ್ದೀಯಾ? ಎಂದು ಟಾಂಗ್ ಕೊಟ್ಟರು.
ಎಲ್ಲದಕ್ಕೂ ಈ ರೀತಿಯ ಅಡ್ಡಗಾಲು ಹಾಕುತ್ತಾರೆ ಎಂದು ಕಿಡಿಕಾರಿದ ಸಂತೋಷ್ ಲಾಡ್ ಇವತ್ತು ದೇಶದ ಅತಿ ದೊಡ್ಡ ದಾನಿ ಯಾರು? ಆಜಿಮ್ ಪ್ರೇಮ್ಜಿ ಅವರು ಯಾವ ಸಮಾಜದವರು? ಅವರು ಬಡವರಿಗಾಗಿ ಎರಡೂವರೆ ಲಕ್ಷ ಕೋಟಿ ದಾನ ಮಾಡಿದ್ದಾರೆ ಎಂದರು.
ಸಂವಿಧಾನದಲ್ಲಿ ಆ ರೀತಿ ಏನೂ ಇಲ್ಲ, ಸರ್ಕಾರ ತೀರ್ಮಾನ ಮಾಡಿದ ಮೇಲೆ ಅದನ್ನು ಸ್ವಾಗತಿಸಬೇಕು ಎಂದು ಸಂತೋಷ್ ಲಾಡ್ ಕಿಡಿಕಾರಿದರು.
ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸುವ ಕುರಿತು ಮೌನ ಮುರಿದ ಪರಮೇಶ್ವರ್
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


