Sunday, November 1, 2026
spot_img
More
    spot_img
    HomeLatest newsದಸರಾ ಉದ್ಘಾಟನೆ ವಿಚಾರವಾಗಿ ಬಾನು ಮುಷ್ತಾಕ್‌ ವಿರುದ್ಧ ಮಾತನಾಡಿದ ಪ್ರತಾಪ್‌ ಸಿಂಹ ವಿರುದ್ಧ ತನ್ವೀರ್‌ ಸೇಠ್‌...

    ದಸರಾ ಉದ್ಘಾಟನೆ ವಿಚಾರವಾಗಿ ಬಾನು ಮುಷ್ತಾಕ್‌ ವಿರುದ್ಧ ಮಾತನಾಡಿದ ಪ್ರತಾಪ್‌ ಸಿಂಹ ವಿರುದ್ಧ ತನ್ವೀರ್‌ ಸೇಠ್‌ ಕಿಡಿ

    ಮೈಸೂರು: ಲೇಖಕಿ ಬಾನು ಮುಷ್ತಾಕ್ ಅವರು ಈ ಬಾರಿಯ ದಸರಾ ಉದ್ಘಾಟನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ಮಾಜಿ ಸಂಸದ ಪ್ರತಾಪ್ ಸಿಂಹ ನಡೆಗೆ ಶಾಸಕ ತನ್ವೀರ್‌ ಸೇಠ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾಳ್ಮೆ ಇರಲಿ ಬೆಂಕಿ ಹಚ್ಚಿ ತಾನು ಸುಟ್ಟುಹೋಗುವುದು ಸರಿಯಲ್ಲ. ಈ ರೀತಿ ಹೇಳಿಕೆ ಕೊಡುವವರಿಗೆ ತಾಳ್ಮೆ ಇರಬೇಕು. ಭವಿಷ್ಯದಲ್ಲಿ ಒಳ್ಳೆಯದಾಗಬೇಕಾದರೆ ಬೆಂಕಿ ಹಚ್ಚಿ, ಕಾವಿನಲ್ಲಿ ಸುಟ್ಟು ಹೋಗುವುದು ಸರಿಯಲ್ಲ. ಇತಿಹಾಸ ನಮ್ಮ ಮುಂದೆ ಇದೆ. ಎಸ್.ಎಂ.ಕೃಷ್ಣ, ನಿಸಾರ್ ಅಹಮದ್, ರಾಷ್ಟ್ರಪತಿಗಳು, ಸಾಮಾನ್ಯ ರೈತ ಕೂಡ ದಸರಾ ಉದ್ಘಾಟನೆ ಮಾಡಿದ್ದಾರೆ. ಈಗ ದಸರಾದ ಸಂಪೂರ್ಣ ಹೊಣೆಗಾರಿಕೆಯನ್ನು ಸರ್ಕಾರ ನಡೆಸಿಕೊಂಡು ಬರುತ್ತಿದೆ. ವ್ಯಕ್ತಿಯ ಗೌರವ ನೋಡಿ ಆಹ್ವಾನ ಕೊಡಲಾಗಿದೆ. ಸಾಹಿತ್ಯ ಲೋಕದಲ್ಲಿ ಗುರುತಿಸಿ ಬಾನು ಮುಷ್ತಾಕ್‌ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ನನ್ನಲ್ಲಿರುವ ಭಕ್ತಿ ಯಾರಿಗೂ ತೋರಿಸುವುದಲ್ಲ. ನನ್ನ ನಡತೆಯಷ್ಟೇ ಮುಖ್ಯ. ನಾನು ಮಾಡುವ ಕೆಲಸ ನನಗೆ ತೃಪ್ತಿ ತರಬೇಕು. ಹೇಗಾದರೂ ಮುಂದೆ ಬರಬೇಕು ಎಂದು ಕೆಲವರು ಇಂತಹ ವಿಚಾರ ವಿಚಾರಗಳನ್ನು ಮುನ್ನಲೆಗೆ ತರುತ್ತಾರೆ. ಇದು ಪ್ರಜ್ಞಾವಂತರಿಗೆ ಶೋಭೆ ತರುವುದಿಲ್ಲ. ನಾವೆಲ್ಲರೂ ಸರ್ವಧರ್ಮದ ವ್ಯವಸ್ಥೆಯಲ್ಲಿ ಹೋಗಬೇಕಿದೆ ಎಂದು ಹೇಳಿದರು.

    ಇನ್ನು ಸದನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಆರ್‌ಎಸ್‌ಎಸ್ ಗೀತೆ ಹಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬೇರೆ ರಾಜಕೀಯ ಪಕ್ಷದ ಸಿದ್ಧಾಂತ ಅರ್ಥ ಮಾಡಿಕೊಂಡರೆ ಅದರಲ್ಲಿ ತಪ್ಪೇನಿದೆ? ಡಿಸಿಎಂ ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದರೆ ಅದರ ಅರ್ಥ ಅವರು ಬಿಜೆಪಿ ಪರ ಎಂದಲ್ಲ. ಯಾರು ಕೂಡ ತಮ್ಮ ಪಕ್ಷದ ಸಿದ್ಧಾಂತವನ್ನು ಬಲಿ ಕೊಡಲ್ಲ. ಡಿಸಿಎಂ ಬಗ್ಗೆ ರಾಜಣ್ಣ ಮಾಡಿರುವ ಟೀಕೆಯು ಸರಿ ಇಲ್ಲ. ರಾಜಣ್ಣ ಮಾತನಾಡಿರುವುದನ್ನು ನಾನು ಒಪ್ಪುವುದಿಲ್ಲ. ರಾಜಣ್ಣ ಈ ರೀತಿ ಮಾತಾಡಿ ಮಾತಾಡಿ ತಮಗೆ ತಾವೇ
    ನಷ್ಟ ಅನುಭವಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

    ಇನ್ನು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ರಾಜಕೀಯ ಯಾರು ಮಾಡಬಾರದು. ತನಿಖೆ ಮಾಡಿದ್ದೆ ಸರಿ ತಪ್ಪು ಎನ್ನುವ ಚರ್ಚೆ ಸರಿಯಲ್ಲ. ಮುಸುಕುಧಾರಿಯ ಮಂಪರು ಪರೀಕ್ಷೆಯನ್ನು ಅಗತ್ಯವಾಗಿ ಮಾಡಬೇಕು. ದೊಡ್ಡ ಧಾರ್ಮಿಕ ಸಂಸ್ಥೆ ಮೇಲೆ ಆರೋಪ ಮಾಡಿ ಯಾರು ದೊಡ್ಡವರಾಗಲ್ಲ. ಈ ಪ್ರಕರಣದ ಹಿಂದೆ ಯಾರದ್ದೋ ಕೈವಾಡವಿದೆ. ಸಮಾಜಘಾತುಕ ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಸಮಾಜಘಾತುಕ ಕೆಲಸ ಮಾಡುವವರಿಗೆ ಜಾತಿ, ಧರ್ಮ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮುಸ್ಲಿಮರು ದಸರಾ ಉದ್ಘಾಟಿಸುವುದು ಬೇಡ ಎಂಬ ಚರ್ಚೆ: ಎರಡೂವರೆ ಲಕ್ಷ ಕೋಟಿ ಕೊಟ್ಟವರೂ ಮುಸ್ಲಿಮರೇ ಎಂದ ಲಾಡ್

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search