ರಾಜ್ಯವನ್ನೇ ಬೆಚ್ಚಿಬೀಳಿಸಿದ ಭೀಕರ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಬಾಯಿಗೆ ಜೆಲಾಟಿನ್ ಕಡ್ಡಿಯನ್ನು ತುರುಕಿ ಸ್ಫೋಟಿಸಿ ಕೊಲೆ ಮಾಡಿದ್ದಾನೆ. ನಂತರ ಇದನ್ನು ಮೊಬೈಲ್ ಸ್ಫೋಟ ಎಂದು ಬಿಂಬಿಸಲು ಯತ್ನಿಸಿದ್ದಾನೆ.
ಹುಣಸೂರು ತಾಲ್ಲೂಕಿನ ಗೆರಸನಹಳ್ಳಿ ಗ್ರಾಮದ 20 ವರ್ಷದ ರಕ್ಷಿತಾ ಮೃತ ದುರ್ದೈವಿ. ಪಿರಿಯಾಪಟ್ಟಣದ ಬಿಳಿಕೆರೆ ಗ್ರಾಮದ ಸಿದ್ದರಾಜು ಕೊಲೆಗೈದ ಆರೋಪಿ. ರಕ್ಷಿತಾ ಕೇರಳದ ವ್ಯಕ್ತಿಯನ್ನು ಮದುವೆಯಾಗಿದ್ದರೂ, ಸಿದ್ದರಾಜು ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ತಿಳಿದುಬಂದಿದೆ.
ರಕ್ಷಿತಾಳನ್ನು ಸಾಲಿಗ್ರಾಮದ ಭೇರ್ಯ ಗ್ರಾಮದ ಬಳಿ ಇರುವ ಕಪ್ಪಡಿ ಜಮೀನಿಗೆ ಕರೆಸಿಕೊಂಡಿದ್ದ ಸಿದ್ದರಾಜು, ಅಲ್ಲಿಂದ ಲಾಡ್ಜ್ಗೆ ಕರೆದೊಯ್ದಿದ್ದಾನೆ. ಲಾಡ್ಜ್ ಕೊಠಡಿಯಲ್ಲಿಯೇ ಆಕೆಯ ಬಾಯಿಗೆ ಸ್ಫೋಟಕ ಕಡ್ಡಿಯನ್ನು ಇಟ್ಟು ಸ್ಫೋಟಿಸಿ ಹತ್ಯೆ ಮಾಡಿದ್ದಾನೆ.
ಹತ್ಯೆ ಮಾಡಿದ ನಂತರ, ಸಿದ್ದರಾಜು ಕೂಡಲೇ “ಮೊಬೈಲ್ ಬ್ಲಾಸ್ಟ್” ಎಂದು ಲಾಡ್ಜ್ ಸಿಬ್ಬಂದಿ ಬಳಿ ಕೂಗಿದ್ದಾನೆ. ಆದರೆ, ಅನುಮಾನಗೊಂಡ ಸಿಬ್ಬಂದಿ ಪರಿಶೀಲಿಸಿದಾಗ ಕೊಠಡಿಯಲ್ಲಿ ಯಾವುದೇ ಮೊಬೈಲ್ ಅವಶೇಷಗಳು ಕಂಡುಬಂದಿಲ್ಲ. ಬ್ಲಾಸ್ಟ್ ಆದ ಮೊಬೈಲ್ ಬಗ್ಗೆ ಪ್ರಶ್ನಿಸಿದಾಗ, ಆತ ಅದನ್ನು ಕಿಟಕಿಯಿಂದ ಹೊರಗೆ ಬಿಸಾಡಿದ್ದಾಗಿ ಸುಳ್ಳು ಹೇಳಿದ್ದಾನೆ. ಆತನ ಗೊಂದಲಮಯ ಹೇಳಿಕೆಗಳಿಂದ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರ ಬಳಿ ಸಿದ್ದರಾಜು ಸತ್ಯ ಒಪ್ಪಿಕೊಂಡಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಫೋರೆನ್ಸಿಕ್ ತಜ್ಞರು ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಧಾರವಾಡದಲ್ಲಿ ಹೃದಯಾಘಾತದಿಂದ ಐಐಟಿ ವಿದ್ಯಾರ್ಥಿ ಸಾವು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


