Tuesday, November 3, 2026
spot_img
More
    spot_img
    HomeLatest newsಆನ್ ಲೈನ್ ನಲ್ಲಿ ಹೂವು ಖರೀದಿಸಬಹುದು, ಯಾವ ಆಯಪ್ ನಲ್ಲಿ ಸಿಗಲಿದೆ ಗೊತ್ತೆ ?

    ಆನ್ ಲೈನ್ ನಲ್ಲಿ ಹೂವು ಖರೀದಿಸಬಹುದು, ಯಾವ ಆಯಪ್ ನಲ್ಲಿ ಸಿಗಲಿದೆ ಗೊತ್ತೆ ?

    ಆನ್ ಲೈನ್ ನಲ್ಲಿ ಹೂವು ಖರೀದಿಸಬಹುದು, ಯಾವ ಆಯಪ್ ನಲ್ಲಿ ಸಿಗಲಿದೆ ಗೊತ್ತೆ ?

    ಮೊಬೈಲ್ ಆಯಪ್‌ ಮೂಲಕ ಖರೀದಿದಾರರು ಕುಳಿತಲ್ಲಿಂದಲೇ ಉತ್ತಮ ದರದಲ್ಲಿ ಹೂವುಗಳನ್ನು ಬಿಡ್ ಮಾಡಬಹುದು. ಹೂವು ಖರೀದಿಯ ನಂತರ, ಆನ್‌ಲೈನ್‌ನಲ್ಲಿ ಹಣ ಪಾವತಿಸಿ, ಹೂವುಗಳನ್ನು ತರಿಸಿಕೊಳ್ಳಬಹುದು. ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರ (ifab)ವು ಮೊಬೈಲ್ ಆಯಪ್ ಆಧಾರಿತ ನೂತನ ಆನ್‌ಲೈನ್ ಸೇವೆಯನ್ನು ಆರಂಭಿಸಿದೆ.

    2002ರ ಮೇ 1ರಂದು ಆರಂಭವಾದ ಐಫ್ಯಾಬ್‌ವು ಬೆಳೆಗಾರರು ಮತ್ತು ಖರೀದಿದಾರರಿಗೆ ಮಧ್ಯವರ್ತಿಗಳ ಹಾವಳಿಯಿಲ್ಲದೆ ಗುಣಮಟ್ಟದ ಹೂವುಗಳ ಮಾರಾಟ ಮತ್ತು ಖರೀದಿ ವ್ಯವಸ್ಥೆ ಕಲ್ಪಿಸುತ್ತದೆ. ಪ್ರಸ್ತುತ 400 ರೈತರು ಮತ್ತು 300 ಖರೀದಿದಾರರು ಸದಸ್ಯರಾಗಿದ್ದಾರೆ.

    ಈಗಾಗಲೇ ಶೇ.40ರಷ್ಟು ಖರೀದಿದಾರರು ಆನ್‌ಲೈನ್‌ನಲ್ಲಿ ಖರೀದಿ ಮಾಡುತ್ತಿದ್ದಾರೆ. ಗುಣಮಟ್ಟದ ಹೂವುಗಳನ್ನು ಪ್ರಮಾಣೀಕರಿಸುವ ವ್ಯವಸ್ಥೆ ಇದೆ, ಇದಕ್ಕಾಗಿ ತಜ್ಞರ ತಂಡವಿದೆ.ಸಾಮಾನ್ಯ ದಿನಗಳಲ್ಲಿ 5-6 ಲಕ್ಷ ಹೂವುಗಳು ಮಾರಾಟವಾಗುತ್ತವೆ.

    ಐಫ್ಯಾಬ್‌(ifb)ನಲ್ಲಿ ಮಾರಾಟವಾಗುವ ಹೂವುಗಳಲ್ಲಿ ಗುಲಾಬಿ, ಕ್ರಿಸಾಂತ ಮಮ್‌, ಜಿಪ್ಸೊಫಿಲಾ, ಲಿಮೋನಿಯಂ, ಆರ್ಕಿಡ್‌, ಸೂರ್ಯಕಾಂತಿ ಇತ್ಯಾದಿ ಹೂವುಗಳು ದೊರೆಯುತ್ತವೆ. ಮೊಬೈಲ್ ಆಯಪ್ ನಲ್ಲಿ ಪ್ರತಿದಿನ ಹೂವಿನ ದರವನ್ನು ನೋಡಬಹುದು, ಹೂವುಗಳನ್ನು ಬಿಡ್ ಮಾಡಬಹುದು ಮತ್ತು ತಮಗಿಷ್ಟವಾದ ಹೂವುವನ್ನು ಖರೀದಿಸಬಹುದು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search