ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಆರೋಪದ ಆಧಾರದ ಮೇಲೆ ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆ ನಡೆಸುತ್ತಿರುವಾಗಲೇ ಇತ್ತ ಬೆಂಗಳೂರಿನಲ್ಲಿ ಪತ್ರಕರ್ತರೇ ಬರೆದಿರುವ ʼಧರ್ಮಸ್ಥಳ ದೌರ್ಜನ್ಯಗಳು ಇತಿಹಾಸ ಮತ್ತು ವರ್ತಮಾನʼ ಕಿರುಹೊತ್ತಿಗೆ ಬಿಡುಗಡೆಗೊಂಡಿದೆ.
ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಇಂದು ( ಸೆಪ್ಟೆಂಬರ್ 25 ) ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ‘ನ್ಯಾಯ ಸಮಾವೇಶ’ವನ್ನು ಮಾಜಿ ಸಂಸದೆ, ಹೋರಾಟಗಾರ್ತಿ ಸುಭಾಷಿನಿ ಅಲಿ ಉದ್ಘಾಟನೆ ಮಾಡಿದರು. ಈ ಸಮಯದಲ್ಲಿ ಧರ್ಮಸ್ಥಳದಿಂದ ದೌರ್ಜನ್ಯಕ್ಕೆ ಈಡಾದ ಸಂತ್ರಸ್ಥರ ಕುಟುಂಬಗಳ ಸದಸ್ಯರು ಜತೆಗಿದ್ದರು. ಇದೇ ವೇಳೆ, ಪತ್ರಕರ್ತರ ಅಧ್ಯಯನ ಕೇಂದ್ರ ಹೊರತಂದಿರುವ ‘ಧರ್ಮಸ್ಥಳ ದೌರ್ಜನ್ಯಗಳು’ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.
ವಿವಿಧ ಮಾಧ್ಯಮಗಳು ಹಾಗೂ ಆನ್‌ಲೈನ್ ಮಾಧ್ಯಮಗಳಲ್ಲಿ ಯಾವುದೇ ಜಾತಿ, ಧರ್ಮ, ಸ್ಥಳದ ಗುಂಪುಗಾರಿಕೆಗೆ ಒಳಗಾಗದೇ ನಿಷ್ಠೆಯಿಂದ ಸೇವೆ ಸಲ್ಲಿಸಿ ಯಶಸ್ಸು ಸಾಧಿಸಿ ಇತರರಿಗೆ ಮಾದರಿಯಾದ ಪತ್ರಕರ್ತರ ಗುಂಪೊಂದು ಈ ಕಿರುಹೊತ್ತಿಗೆಯನ್ನು ಬರೆದಿರುವುದು ವಿಶೇಷವೆನಿಸಿದೆ ಹಾಗೂ ಓದುಗರಲ್ಲಿ ಕುತೂಹಲ ಕೆರಳಿಸಿದೆ. ಪತ್ರಕರ್ತರಾದ ಪ್ರಶಾಂತ್ ಹುಲ್ಕೋಡು, ನವೀನ್ ಸೂರಿಂಜೆ, ಸುದೀಪ್ತೋ ಮೊಂಡಲ್ ಹಾಗೂ ಅನೀಷಾ ಶೇಟ್ ಈ ಕಿರುಹೊತ್ತಿಗೆಯ ಲೇಖಕರಾಗಿದ್ದಾರೆ.
ಧಾರ್ಮಿಕತೆಗೆ ನಲುಗಿದ ಜನರಿಗೆ, ಅವರ ದನಿಯಾಗಿ ಹೋರಾಡುತ್ತಿರುವ ಎಲ್ಲಾ ಸಂಗಾತಿಗಳಿಗೆ ಈ ಕಿರುಹೊತ್ತಿಯನ್ನು ಅರ್ಪಿಸಿರುವ ಈ ತಂಡ ಧರ್ಮಸ್ಥಳದ ಹಿನ್ನೆಲೆ, ಹೆಗ್ಗಡೆ ಕುಟುಂಬಕ್ಕೆ ಅಧಿಕಾರ ಬಂದದ್ದೇಗೆ, ಜೈನ ಧರ್ಮದ ಮರುವ್ಯಾಖ್ಯಾನ : ಸ್ವತಂತ್ರ ಭಾರತದಲ್ಲಿ ಧರ್ಮಸ್ಥಳ, ಧರ್ಮಸ್ಥಳದಲ್ಲಿ ಭೂಕಬಳಿಕೆ ಮತ್ತು ಕಮ್ಯೂನಿಸ್ಟರ ಹೋರಾಟ, ದಲಿತರ ಮೀಸಲು ಭೂಮಿ ಕಬಳಿಕೆ, ಸರ್ಕಾರಿ ಜಮೀನುಗಳ ಗುಳುಂ ವ್ಯವಹಾರಗಳು, ಶುದ್ಧಹಸ್ತರಲ್ಲದ ಧರ್ಮಾಧಿಕಾರಿ ಹೆಗ್ಗಡೆ: ಹೈಕೋರ್ಟ್ , ದಲಿತ ಕಾರ್ಮಿಕರ ಮನೆ ಹಕ್ಕು ಮತ್ತು ಸಂಬಳ, ಗ್ರಾಮೀಣಾಭಿವೃದ್ಧಿ ಹೆಸರಿನಲ್ಲಿ ‘ಮೀಟರ್ ಬಡ್ಡಿ ದಂಧೆ’, ಧರ್ಮಸ್ಥಳದ ಕ್ರಿಮಿನಲ್ ಚಟುವಟಿಕೆಗಳು, ಧರ್ಮಕ್ಷೇತ್ರದಲ್ಲಿ ಸಂವಿಧಾನದ ಭಕ್ಷಕರು ಎಂಬ ಹತ್ತು ತಲೆಬರಹಗಳಡಿ ಧರ್ಮಸ್ಥಳದ ಅಕ್ರಮಗಳ ಸರಮಾಲೆಯನ್ನು 40 ಪುಟಗಳಲ್ಲಿ ಬಿಚ್ಚಿಟ್ಟಿದ್ದಾರೆ.
ಈ ಕಿರುಹೊತ್ತಿಗೆ ಮೂಲಕ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಕ್ರಮಗಳ ಚಿತ್ರಣ ಪ್ರಕರಣದ ಆಸಕ್ತರಿಗೆ ಇನ್ನಷ್ಟು ಸ್ಪಷ್ಟವಾಗಿ ತಿಳಿದುಬರಲಿದೆ.
ವಿವಾಹದ ನಂತರ ಹಿಂದೂ ಮಹಿಳೆಯ ಗೋತ್ರ ಬದಲಾವಣೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


