Wednesday, September 2, 2026
spot_img
More
    spot_img
    HomeLatest newsಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ತಾರೆ, ಕರ್ನಾಟಕ ಇಬ್ಭಾಗವಾಗುತ್ತೆ; ಸ್ಪೋಟಕ ಭವಿಷ್ಯ ನುಡಿದ ಪ್ರಶಾಂತ್ ಕಿಣಿ

    ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ತಾರೆ, ಕರ್ನಾಟಕ ಇಬ್ಭಾಗವಾಗುತ್ತೆ; ಸ್ಪೋಟಕ ಭವಿಷ್ಯ ನುಡಿದ ಪ್ರಶಾಂತ್ ಕಿಣಿ

    ಬೆಂಗಳೂರು: ರಾಜ್ಯ ಕಂಡ ಯಶಸ್ವಿ ಮುಖ್ಯಮಂತ್ರಿಗಳಲ್ಲಿ ಓರ್ವರಾದ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದು, ಈ ಬಾರಿ ಅವರು 5 ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರಿಯುವುದು ಅನುಮಾನ ಎಂಬ ಮಾತುಗಳು ಅಧಿಕಾರ ಸ್ವೀಕರಿಸಿದ ದಿನದಿಂದಲೂ ಕೇಳಿಬರುತ್ತಲೇ ಇದೆ.

    Advertisement

    ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ, ನವೆಂಬರ್ ಅಷ್ಟರಲ್ಲಿ ಸಿದ್ದರಾಮಯ್ಯ ಪವರ್ ಕಳೆದುಕೊಳ್ಳಲಿದ್ದಾರೆ ಎಂಬ ಹೇಳಿಕೆಗಳು ಸಹ ರಾಜಕೀಯ ನಾಯಕರ ಬಾಯಿಂದ ಬಂದಿದ್ದು, ಇದೀಗ ಡಿಜಿಟಲ್ ಜ್ಯೋತಿಷಿ ಪ್ರಶಾಂತ್ ಕಿಣಿ ಈ ಕುರಿತು ಮಾಡಿರುವ ಟ್ವೀಟ್ ಚರ್ಚೆಗೆ ಕಾರಣವಾಗಿದೆ.

    ಹೌದು, ರಾಜ್ಯ ರಾಜಕೀಯ, ವಿದೇಶಗಳ ಸ್ಥಿತಿಗತಿ ಬಗ್ಗೆ ಆಗಾಗ ಟ್ವೀಟ್ ಮಾಡುವ ಪ್ರಶಾಂತ್ ಕಿಣಿ ‘ರಾಜ್ಯ ಕಾಂಗ್ರೆಸ್ ಎರಡು ಭಾಗವಾಗಲಿದೆ. ಸಿಎಂ ಸಿದ್ದರಾಮಯ್ಯ ಅವರ ಹುದ್ದೆ ಕಳೆದುಕೊಳ್ಳಲಿದ್ದಾರೆ. ರಾಜ್ಯದ ಜನತೆ ಬೆಲೆ ತೆರಲಿದ್ದಾರೆ. ಮೈಸೂರು ಹಲವು ತೊಂದರೆಗಳನ್ನು ಎದುರಿಸಲಿದೆ. ಭವಿಷ್ಯದಲ್ಲಿ ಕರ್ನಾಟಕ ಇಬ್ಭಾಗವಾಗಲಿದೆ’ ಎಂದು ಬರೆದುಕೊಂಡಿದ್ದಾರೆ.

    ಹೀಗೆ ಭವಿಷ್ಯ ನುಡಿದಿರುವ ಟ್ವೀಟ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದ ಜನತೆ ಬೆಲೆ ತೆರಬೇಕಾಗುತ್ತದೆ ಎಂಬ ಸಾಲು ಪ್ರಶಾಂತ್ ಕಿಣಿ ಕಾಂಗ್ರೆಸ್ ವಿರೋಧಿಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದ್ದು, ಈ ರೀತಿಯ ಟ್ವೀಟ್ ಮೂಲಕ ಜ್ಯೋತಿಷ್ಯ ನಂಬುವ ಜನರನ್ನು ದಿಕ್ಕು ತಪ್ಪಿಸುವ ಷಡ್ಯಂತ್ರವಾ ಎಂಬ ಅನುಮಾನ ಸಹ ಮೂಡಿದೆ.

    ಈ ಹಿಂದೆ ದರ್ಶನ್ ಬಿಡುಗಡೆಯಾಗಲಿದ್ದಾರೆ, ಅವರಿಗೆ ಒಳ್ಳೆ ಕಾಲ ಶುರುವಾಗಲಿದೆ ಎಂದು ಟೊಳ್ಳು ಭವಿಷ್ಯ ನುಡಿದಿದ್ದ ಪ್ರಶಾಂತ್ ಕಿಣಿಯ ಈ ಭವಿಷ್ಯ ಏನಾಗಲಿದೆಯೋ ಉತ್ತರ ಸಿಗಲಿದೆ. ಅಲ್ಲದೇ ಇಷ್ಟೆಲ್ಲಾ ಬರೆದುಕೊಂಡಿರುವ ಪ್ರಶಾಂತ್ ಕಿಣಿ ಈ ಘಟನೆಗಳೆಲ್ಲ ಯಾವಾಗ ನಡೆಯಲಿದೆ ಎಂಬುದನ್ನು ತಿಳಿಸದೇ ಇದ್ದು, ಅರೆ ಬೆಂದ ಭವಿಷ್ಯ ಬಿಟ್ಟು ಪೂರ್ಣ ಪ್ರಮಾಣದ ಭವಿಷ್ಯವನ್ನು ತಿಳಿಸಿದ್ದರೆ, ಜನರಿಗೆ ನಿಖರತೆಯಾದರೂ ಸಿಗುತ್ತಿತ್ತು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading