Wednesday, November 4, 2026
spot_img
More
    spot_img
    HomeLatest newsಆಬ್‌ ಕಿ ಬಾರ್‌ ಚಾರ್‌ ಸೌ ಪಾರ್;‌ ಮೋದಿ ಮೋದಿ ಹಾಡಿಗೆ ಲೈಕ್ಸ್‌ ಕಡಿಮೆ, ಡಿಸ್‌ಲೈಕ್ಸ್‌...

    ಆಬ್‌ ಕಿ ಬಾರ್‌ ಚಾರ್‌ ಸೌ ಪಾರ್;‌ ಮೋದಿ ಮೋದಿ ಹಾಡಿಗೆ ಲೈಕ್ಸ್‌ ಕಡಿಮೆ, ಡಿಸ್‌ಲೈಕ್ಸ್‌ ಅಷ್ಟಿಷ್ಟಲ್ಲ!

    ಕಳೆದ ಸೆಪ್ಟೆಂಬರ್‌ 22ರಂದು ಟಿ ಸೀರೀಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಮೋದಿಗಾಗಿ ಹಾಡೊಂದು ಬಿಡುಗಡೆಯಾಗಿತ್ತು. ಮೋದಿ ಮೋದಿ ಹೇ ತೋ ಮುಮ್ಕಿನ್‌ ಹೇ ಎಂದು ಆರಂಭವಾಗುವ ಈ ಹಾಡು ಭಕ್ತರ ಪಾಲಿಗೆ ಇಷ್ಟವಾಗಿತ್ತು ಹಾಗೂ ಭಾರೀ ಟೀಕೆಗೂ ಸಹ ಒಳಗಾಗಿತ್ತು. ಆರಂಭದಲ್ಲಿ ಭಾರೀ ಸದ್ದು ಮಾಡಿದ ಈ ಹಾಡನ್ನು ಹಿಂದುಳಿದ ಭಾರತದ ದೃಶ್ಯಗಳನ್ನು ಬಳಸಿ ಮೋದಿ ವಿರುದ್ಧ ಟ್ರೋಲ್‌ ಮಾಡಲು ಬಳಸಲಾಯಿತು.

    ಮೋದಿಯವರ ದೃಷ್ಟಿಕೋನ, ಶ್ರದ್ಧೆ ಹಾಗೂ ನಾಯಕತ್ವವವನ್ನು ಸಂಭ್ರಮಿಸುವ ಸಲುವಾಗಿ ಈ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಬರೆದುಕೊಂಡು ಈ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಮೀಟ್‌ ಬ್ರೋಸ್‌ ಸಂಗೀತದಡಿಯಲ್ಲಿ, ಮೀಟ್‌ ಬ್ರೋಸ್‌, ಆದರ್ಶ್‌ ಶುಕ್ಲಾ ಹಾಗೂ ದಿವ್ಯಾ ಭಟ್‌ ಕಂಠದಲ್ಲಿ ಮೂಡಿಬಂದಿದ್ದ ಈ ಹಾಡಿಗೆ ನದಾನ್‌ ಸಾಹಿತ್ಯ ಬರೆದಿದ್ದರು.

    ಹೀಗೆ ತಯಾರಾದ ಹಾಡಿಗೆ ಮೋದಿ ಅಭಿಮಾನಿಗಳು ತಲೆದೂಗಿದ್ದು ಹಾಡು ಇಷ್ಟವಾದ ಕಾರಣ ಲೈಕ್ ಮಾಡಿದ್ದಾರೆ. ಆದರೆ ಈ ವಿಡಿಯೊಗೆ ಲೈಕ್‌ಗಿಂತ ಹೆಚ್ಚು ಡಿಸ್‌ಲೈಕ್‌ ಬಂದಿವೆ. ಹೌದು, ಯುಟ್ಯೂಬ್‌ನಲ್ಲಿ ವಿಡಿಯೊ ಇಷ್ಟವಾಗದಿದ್ದರೆ ಅದನ್ನು ಡಿಸ್‌ಲೈಕ್‌ ಮಾಡಲು ಆಯ್ಕೆಯನ್ನು ನೀಡಲಾಗಿದೆ. ಆದರೆ ಲೈಕ್ಸ್‌ಗಳನ್ನು ತೋರುವ ಹಾಗೆ ಡಿಸ್‌ಲೈಕ್‌ಗಳನ್ನು ತೋರದ ಯುಟ್ಯೂಬ್‌ ಅದನ್ನು ಮುಚ್ಚಿಟ್ಟಿದೆ.

    ಆದರೆ ಬಳಕೆದಾರರು ಯುಟ್ಯೂಬ್‌ ವಿಡಿಯೊವೊಂದಕ್ಕೆ ಎಷ್ಟು ಡಿಸ್‌ಲೈಕ್‌ ಬಂದಿವೆ ಎಂಬುದನ್ನು ತಿಳಿದುಕೊಳ್ಳಲು ಸಾಕಷ್ಟು ವೆಬ್‌ಸೈಟ್‌ಗಳಿದ್ದು, ಯಾವ ವಿಡಿಯೊನ ಡಿಸ್‌ಲೈಕ್‌ ಬಗ್ಗೆ ಮಾಹಿತಿ ಬೇಕೋ ಆ ವಿಡಿಯೊನ ಲಿಂಕನ್ನು ಯುಟ್ಯೂಬ್‌ ಡಿಸ್‌ಲೈಕ್‌ ವ್ಯೂವರ್‌ ವೆಬ್‌ಸೈಟ್‌ನಲ್ಲಿ ಹಾಕಿ ಚೆಕ್‌ ಮಾಡಬಹುದು.

    ಹೀಗೆ ಮೋದಿ ಮೋದಿ ಹಾಡಿನ ಡಿಸ್‌ಲೈಕ್‌ ಎಷ್ಟಿದೆ ಎಂದು ಹಾಡು ವೈರಲ್‌ ಆದಾಗಿನಿಂದಲೂ ನೆಟ್ಟಿಗರು ಚೆಕ್‌ ಮಾಡುತ್ತಲೇ ಬಂದಿದ್ದು, ದಿನದಿಂದ ದಿನಕ್ಕೆ ಡಿಸ್‌ಲೈಕ್ ಸಂಖ್ಯೆ ಹೆಚ್ಚುತ್ತಲೇ ಇದೆ. ಅಕ್ಟೋಬರ್‌ 25ರ ಸಮಯಕ್ಕೆ ಈ ಹಾಡಿಗೆ 56 ಸಾವಿರ ಲೈಕ್‌ಗಳು ಬಂದಿದ್ದು, 4 ಲಕ್ಷಕ್ಕೂ ಅಧಿಕ ಡಿಸ್‌ಲೈಕ್‌ ಬಂದಿವೆ. ಹೀಗೆ 400K ಡಿಸ್‌ಲೈಕ್‌ ಪಡೆದುಕೊಂಡಿರುವ ಮೋದಿ ಹಾಡಿಗೆ ʼಆಪ್‌ ಕಿ ಬಾರ್‌ ಚಾರ್‌ ಸೌ ಪಾರ್‌ʼ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ 2ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಭಾರತ ತಂಡದಲ್ಲಿ ಬದಲಾವಣೆ; ಕುಲ್‌ದೀಪ್‌ಗಾಗಿ ಈ ಇಬ್ಬರಲ್ಲಿ ಜಾಗ ಬಿಟ್ಟು ಕೊಡುವವರಾರು?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search