ಹೊಸದಿಲ್ಲಿ: ನಗರದ ಲಕ್ಷ್ಮಿ ನಗರದ ಚಿನ್ನದಂಗಡಿಯಲ್ಲಿ ಕಳ್ಳಿಯರು ಮಾಲೀಕರು ಎದುರಿಗೆ ಇದ್ದಾಗಲೇ ತಮ್ಮ ಕೈಚಳಕ ತೋರಿಸಿದ್ದು, ನಕಲಿ ಚಿನ್ನವನ್ನಿಟ್ಟು ಚಿನ್ನದ ಉಂಗುರವನ್ನು ಲಪಟಾಯಿಸಿದ್ದಾರೆ.
ಗ್ರಾಹಕರ ಸೋಗಿನಲ್ಲಿ ಬಂದಿದ್ದ ಯುವತಿ ಹಾಗೂ ಮಹಿಳೆ ಚಿನ್ನ ಖರೀದಿಸುವವರ ಹಾಗೆ ಬೇರೆ ಬೇರೆ ಆಭರಣಗಳನ್ನು ನೋಡಲಾರಂಭಿಸಿದ್ದಾರೆ. ಹೀಗೆ ಅಂಗಡಿ ಮಾಲೀಕರು ಅವರಿಗೆ ಬಾಕ್ಸ್‌ನಲ್ಲಿ ಜೋಡಿಸಿದ್ದ ಉಂಗುರಗಳನ್ನು ನೀಡಿದ್ದು, ಅವುಗಳನ್ನು ಮುಟ್ಟಿ ನೋಡುವ ಹಾಗೆ ನಟಿಸಿದ ಮಹಿಳೆ ಕ್ಷಣಾರ್ಧದಲ್ಲೇ ನಕಲಿ ಉಂಗುರವನ್ನು ಬಾಕ್ಸ್‌ನಲ್ಲಿಟ್ಟು, ಅಸಲಿ ಉಂಗುರವನ್ನು ಕದ್ದು ಪಕ್ಕದಲ್ಲಿ ಕುಳಿತಿದ್ದ ಯುವತಿ ಕೈಗಿಟ್ಟಿದ್ದಾಳೆ.
ಹೀಗೆ ಎದುರಿನಲ್ಲೇ ಇದ್ದ ಇಬ್ಬರು ಮಾಲೀಕರ ಕಣ್ಣಿಗೆ ಮಣ್ಣೆರೆಚಿದ ನಾರಿಯರ ಕೈಚಳಕ ಅಂಗಡಿಯ ಸಿಟಿವಿಟಿಯಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಎಷ್ಟು ಸುಲಭವಾಗಿ ಮಾಲೀಕರನ್ನೇ ಯಾಮಾರಿಸಿದ್ದಾರೆ ಎಂದು ನೆಟ್ಟಿಗರು ವಿಡಿಯೊವನ್ನು ವೈರಲ್ ಮಾಡಿದ್ದಾರೆ.
ಇದು ಉಳಿದ ಚಿನ್ನದ ಅಂಗಡಿ ಮಾಲೀಕರಿಗೆ ನೀತಿಪಾಠವಾಗಿದ್ದು, ಗ್ರಾಹಕರ ಮೇಲೆ ಯಾವಾಗಲೂ ಒಂದು ಕಣ್ಣಿಟ್ಟಿರಬೇಕು ಎಂಬ ಸಂದೇಶವನ್ನು ಸಾರಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


