Tuesday, November 3, 2026
spot_img
More
    spot_img
    HomeSportsCricketಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯವನ್ನಾದರೂ ಗೆಲ್ಲಲು ಬ್ಯಾಟ್ಸ್‌ಮನ್‌ ಕೂರಿಸಿ ಈ ಬೌಲರ್ ಆಡಿಸಿ ಎಂದ ಮಾಜಿ...

    ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯವನ್ನಾದರೂ ಗೆಲ್ಲಲು ಬ್ಯಾಟ್ಸ್‌ಮನ್‌ ಕೂರಿಸಿ ಈ ಬೌಲರ್ ಆಡಿಸಿ ಎಂದ ಮಾಜಿ ಕ್ರಿಕೆಟಿಗ

    ಬೆಂಗಳೂರು: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಭಾರತ ಸದ್ಯ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ಈಗಾಗಲೇ ಸೋತಿದೆ. ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯ ಹಾಗೂ ಅಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯಗಳಲ್ಲಿ ಸೋತಿರುವ ಭಾರತ ಇಂದು ( ಅಕ್ಟೋಬರ್‌ 25 ) ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

    ಹೀಗೆ ಮೊದಲ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ ಇಂದಿನ ಪಂದ್ಯದಲ್ಲಾದರೂ ಗೆದ್ದು ವೈಟ್‌ವಾಷ್‌ ಮುಖಭಂಗದಿಂದ ಪಾರಾಗಬೇಕಾಗಿದ್ದು, ಇದಕ್ಕೆ ಭಾರತದ ಮಾಜಿ ಬೌಲರ್‌ ವರುಣ್‌ ಆರನ್‌ ಸಲಹೆಯೊಂದನ್ನು ನೀಡಿದ್ದಾರೆ.

    ಭಾರತದ ಯಾವುದಾದರೂ ಓರ್ವ ಬ್ಯಾಟ್ಸ್‌ಮನ್‌ನನ್ನು ತಂಡದಿಂದ ಹೊರಗಿಟ್ಟು ಕುಲ್‌ದೀಪ್‌ ಯಾದವ್‌ರನ್ನು ಕಣಕ್ಕಿಳಿಸಿ ಎಂದು ವರುಣ್‌ ಕೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ವರುಣ್‌ ಕುಲ್‌ದೀಪ್‌ ಯಾದವ್‌ ಮೊದಲ ಪಂದ್ಯದಿಂದಲೇ ತಂಡದಲ್ಲಿರಬೇಕಿತ್ತು. ಆಸ್ಟ್ರೇಲಿಯಾ ನೆಲದಲ್ಲಿ ಕೇವಲ ಇಬ್ಬರು ವೇಗಿಗಳನ್ನು ಇಟ್ಟುಕೊಂಡು ಆಡುವುದು ಸಾಧ್ಯವಾಗದ ಕಾರಣ ಓರ್ವ ಬ್ಯಾಟ್ಸ್‌ಮನ್‌ನನ್ನು ತಂಡದಿಂದ ಹೊರಗಿಡಲೇಬೇಕಿದೆ. ಆದರೆ ಕುಲ್‌ದೀಪ್‌ ವಿಕೆಟ್‌ ತಂದುಕೊಡುವ ಆಟಗಾರನಾಗಿದ್ದಾರೆ. ತಂಡ ರನ್‌ ಗಳಿಸದೇ ಇದ್ದಾಗ ಅದಕ್ಕೆ ತಕ್ಕನಾದ ವಿಕೆಟ್‌ ಪಡೆದು ಸರಿದೂಗಿಸಬಲ್ಲ ಆಟಗಾರನಾಗಿದ್ದಾರೆ ಎಂದಿದ್ದಾರೆ.

    ಅವನ ಬ್ಯಾಟಿಂಗ್‌ ನಿಧಾನ ಏಷ್ಯಾಕಪ್‌ಗೆ ಬೇಡ ಎಂದಿದ್ದ ಸೂರ್ಯ; ಕ್ಯಾರೆ ಎನ್ನದೇ ಆ ಆಟಗಾರನಿಗೆ ಅವಕಾಶ ಕೊಟ್ಟಿದ್ದ ಬಿಸಿಸಿಐ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search