ಗುವಾಹಟಿಯ ಬರ್ಸಾಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಂತ್ಯಕ್ಕೆ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 15.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 27 ರನ್ ಕಲೆಹಾಕಿ ಬರೋಬ್ಬರಿ 522 ರನ್‌ಗಳ ಹಿನ್ನಡೆಯೊಂದಿಗೆ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ 489 ರನ್ ಕಲೆಹಾಕುವ ಮೂಲಕ ಅಬ್ಬರಿಸಿದ್ದ ದಕ್ಷಿಣ ಆಫ್ರಿಕಾ ಭಾರತವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 201 ರನ್‌ಗೆ ಆಲ್‌ಔಟ್ ಮಾಡಿ 288 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. ಫಾಲೋಆನ್‌ಗೆ ಅವಕಾಶವಿದ್ದರೂ ಅದನ್ನು ವಿಧಿಸದೇ ತಾನೇ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ ಟ್ರಿಸ್ಟನ್ ಸ್ಟಬ್ಸ್ ಹಾಗೂ ಟೋನಿ ಡಿ ಜೋರ್ಝಿ ಉತ್ತಮ ಜತೆಯಾಟದ ನೆರವಿನಿಂದ 5 ವಿಕೆಟ್‌ಗೆ 260 ರನ್ ಕಲೆಹಾಕಿ ಭಾರತಕ್ಕೆ 549 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.
ಈ ಬೃಹತ್ ಗುರಿಯನ್ನು ಬೆನ್ನಟ್ಟಲು ಮುಂದಾದ ಭಾರತ ಬೇಗನೆ ತನ್ನ ಆರಂಭಿಕರ ವಿಕೆಟ್ ಕಳೆದುಕೊಂದು ಮಗದೊಮ್ಮೆ ಆಘಾತ ಅನುಭವಿಸಿದೆ. ಯಶಸ್ವಿ ಜೈಸ್ವಾಲ್ 13 ರನ್ ಹಾಗೂ ಕೆಎಲ್ ರಾಹುಲ್ 6 ರನ್‌ಗೆ ವಿಕೆಟ್ ಒಪ್ಪಿಸಿದ್ದು, ಮೂರನೇ ವಿಕೆಟ್‌ಗೆ ಜತೆಯಾದ ಸಾಯಿ ಸುದರ್ಶನ್ ಅಜೇಯ 2 ಹಾಗೂ ಕುಲ್‌ದೀಪ್ ಯಾದವ್ ಅಜೇಯ 4 ರನ್ ಕಲೆಹಾಕಿದ್ದಾರೆ.
ಈ ಮೂಲಕ ಭಾರತ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದಲ್ಲದೇ ಈ ಪಂದ್ಯದಲ್ಲಿಯೂ ಭಾರೀ ದೊಡ್ಡ ಅಂತರದಲ್ಲಿ ಸೋಲುವ ಸಾಧ್ಯತೆ ಹೆಚ್ಚಿದ್ದು, ಭಾರೀ ಮುಖಭಂಗಕ್ಕೊಳಗಾಗಲಿದೆ.
ಲಾರಾ, ಕೊಹ್ಲಿ, ಸಚಿನ್‌ಗಿಂತಲೂ ಆಸ್ಟ್ರೇಲಿಯಾದ ಈ ಆಟಗಾರ ಬೆಸ್ಟ್ ಎಂದ ಪಾಂಟಿಂಗ್ ಕಂಡು ನಕ್ಕ ನೆಟ್ಟಿಗರು; ವಿಡಿಯೊ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


