Saturday, September 19, 2026
spot_img
More
    spot_img
    HomeTop Story2024ರ ಕೊನೆಯ ಹಿಟ್ ಕೊಟ್ರಾ ಕಿಚ್ಚ? ಮ್ಯಾಕ್ಸ್ ಫಸ್ಟ್ ಶೋ ನೋಡಿದವರ ರಿವ್ಯೂ ಇಲ್ಲಿದೆ

    2024ರ ಕೊನೆಯ ಹಿಟ್ ಕೊಟ್ರಾ ಕಿಚ್ಚ? ಮ್ಯಾಕ್ಸ್ ಫಸ್ಟ್ ಶೋ ನೋಡಿದವರ ರಿವ್ಯೂ ಇಲ್ಲಿದೆ

    ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ಮ್ಯಾಕ್ಸ್ ಇಂದು ( ಡಿಸೆಂಬರ್ 25 ) ಭರ್ಜರಿ ಬಿಡುಗಡೆ ಕಂಡಿದ್ದು, ಬೆಳಗ್ಗೆ 6 ಗಂಟೆಯಿಂದಲೇ ಪ್ರದರ್ಶನಗಳು ಆರಂಭಗೊಂಡಿವೆ.

    Advertisement

    ಚಿತ್ರಕ್ಕೆ ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳಿದ್ದು, ತಮಿಳಿನ ಎಸ್ ತನು ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನವಿದೆ. ನಾಯಕಿಯರಾಗಿ ಸಂಯುಕ್ತ ಹೊರನಾಡು ಹಾಗೂ ವರಲಕ್ಷ್ಮಿ ಶರತ್ ಕುಮಾರ್ ನಟಿಸಿದ್ದಾರೆ.

    ವಿಕ್ರಾಂತ್ ರೋಣ ಬಳಿಕ ಸುದೀಪ್ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿರುವ ಚಿತ್ರ ಇದಾಗಿದ್ದು ಎರಡೂವರೆ ವರ್ಷಗಳ ಬಳಿಕ ಬಂದ ಸುದೀಪ್ ಅಭಿಮಾನಿಗಳ ನಿರೀಕ್ಷೆ ಮುಟ್ಟಿದ್ರಾ? ಸಿನಿ ರಸಿಕರಿಗೆ ಚಿತ್ರ ಇಷ್ಟವಾಯ್ತಾ? ಎಂಬುದಕ್ಕೆ ಉತ್ತರ ಕೊಡುತ್ತಿವೆ ಫಸ್ಟ್ ಶೋ ಚಿತ್ರ ನೋಡಿ ಬಂದವರು ಹಂಚಿಕೊಂಡಿರುವ ವಿಮರ್ಶೆಗಳು. ಹಾಗಿದ್ರೆ ಚಿತ್ರ ನೋಡಿ ಬಂದವರು ಸಾಮಾಜಿಕ ಜಾಲತಾಣದಲ್ಲಿ ಮ್ಯಾಕ್ಸ್ ಕುರಿತು ಯಾವ ರೀತಿಯ ವಿಮರ್ಶೆಗಳನ್ನು ನೀಡಿದ್ದಾರೆ ನೋಡೋಣ ಬನ್ನಿ..

    ಕಿಚ್ಚನ ಸಿನಿಮಾ ಬಗ್ಗೆ ರಾಕಿಂಗ್‌ ಸ್ಟಾರ್‌ ಫ್ಯಾನ್‌ ಹೇಳಿದ್ದೇನು?
    ಮ್ಯಾಕ್ಸ್‌ ಚಿತ್ರದ ಮೊದಲ ಪ್ರದರ್ಶನ ವೀಕ್ಷಿಸಿರುವ ಯಶ್‌ ಅಭಿಮಾನಿಯೊಬ್ಬರು ಚಿತ್ರದ ಬಗ್ಗೆ “ಮ್ಯಾಕ್ಸ್‌ ಒಂದು ವೇಗದ ಮಾಸ್‌ ಎಂಟರ್‌ಟೈನರ್‌ ಆಗಿದ್ದು, ಮೊದಲಾರ್ಧವನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ ಮತ್ತು ದ್ವಿತೀಯಾರ್ಧದಲ್ಲಿ ಮನರಂಜನೆಯ ರಸದೌತಣವನ್ನು ಬಡಿಸಲಾಗಿದೆ. ಸಸ್ಪೆನ್ಸ್‌ ಚೆನ್ನಾಗಿ ಕೆಲಸ ಮಾಡಿದ್ದು, ಚಿತ್ರದುದ್ದಕ್ಕೂ ಥ್ರಿಲ್ಲಿಂಗ್‌ನಿಂದ ಕೂಡಿದೆ. ಕಿಚ್ಚ ಸುದೀಪ್‌ ದ ಶೋಮ್ಯಾನ್‌” ಎಂದು ಬರೆದುಕೊಂಡಿದ್ದಾರೆ.

    ತಮಿಳು ಸಿನಿರಸಿಕನ ಅಭಿಪ್ರಾಯವೇನು?
    ಮ್ಯಾಕ್ಸ್‌ ಚಿತ್ರ ವೀಕ್ಷಿಸಿದ ತಮಿಳು ಸಿನಿ ರಸಿಕ “ಮ್ಯಾಕ್ಸ್‌ಗೆ 5ಕ್ಕೆ 4 ಸ್ಟಾರ್‌ ನೀಡಿದ್ದಾರೆ. ಅಲ್ಲದೇ ಮ್ಯಾಕ್ಸ್‌ ತಮಿಳಿನ ಕೈದಿ ಚಿತ್ರದ ರೀತಿಯ ಕ್ಲೈಮ್ಯಾಕ್ಸ್‌ ಹೊಂದಿದ್ದು, ಚಿತ್ರಕಥೆ ಅಚ್ಚುಕಟ್ಟಾಗಿದೆ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ವಿಜಯ್‌ ಕಾರ್ತಿಕೇಯ ಉದಯೋನ್ಮುಖ ನಿರ್ದೇಶಕ ಎಂಬುವುದನ್ನು ನಂಬಲಸಾಧ್ಯ. ಟ್ವಿಸ್ಟ್‌ ಹಾಗೂ ಟರ್ನ್‌ಗಳು ಸಖತ್ತಾಗಿವೆ. ಅಜಿನೀಶ್‌ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಬಗ್ಗೆ ಮಾತನಾಡುವ ಹಾಗೇ ಇಲ್ಲ” ಎಂದು ಬರೆದುಕೊಂಡಿದ್ದಾರೆ.

    ತೆಲುಗು ಪ್ರೇಕ್ಷಕ ಹೇಳಿದ್ದೇನು?
    ಮ್ಯಾಕ್ಸ್‌ ಚಿತ್ರವನ್ನು ವೀಕ್ಷಿಸಿದ ತೆಲುಗು ಪ್ರೇಕ್ಷಕ ಚಿತ್ರವನ್ನು ಬ್ಲಾಕ್‌ಬಸ್ಟರ್‌ ಎಂದು ಬರೆದುಕೊಂಡಿದ್ದಾರೆ. ಚಿತ್ರಕಥೆ, ಬರವಣಿಗೆ, ಸುದೀಪ್‌ ನಟನೆ, ಸಹ ಕಲಾವಿದರ ನಟನೆ, ಅಜನೀಶ್‌ ಲೋಕನಾಥ್‌ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಎಲ್ಲವೂ ಚೆನ್ನಾಗಿದೆ. ಕೆಲವು ಟ್ವಿಸ್ಟ್‌ಗಳು ಚೆನ್ನಾಗಿದ್ದು, ದ್ವಿತೀಯಾರ್ಧದಲ್ಲಿ ಕೊಟ್ಟಿರುವ ಎಮೋಷನಲ್‌ ಟಚ್‌ ಸಹ ಕೆಲಸ ಮಾಡಿದೆ. ಚಿತ್ರವನ್ನು ಮಿಸ್‌ ಮಾಡಕೊಳ್ಳಬೇಡಿ ಎಂದು ಹೊಗಳಿದ್ದಾರೆ.

    ಎಲ್ಲೆಡೆ ಪಾಸಿಟಿವ್ ರೆಸ್ಪಾನ್ಸ್:‌ ಇನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ವಿಮರ್ಶೆಗಳನ್ನು ಗಮನಿಸಿದರೆ ಬಹುತೇಕ ಎಲ್ಲಾ ವಿಮರ್ಶೆಗಳೂ ಸಹ ಪಾಸಿಟಿವ್‌ ಆಗಿವೆ. ಒಟ್ಟಿನಲ್ಲಿ ಮ್ಯಾಕ್ಸ್ ಈ ವರ್ಷಾಂತ್ಯದ ಬ್ಲಾಕ್‌ಬಸ್ಟರ್‌ ಆಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳು ಇವೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading