Sunday, March 22, 2026
spot_img
More
    spot_img
    HomeBreaking Newsಚಿತ್ರದುರ್ಗದಲ್ಲಿ ಭೀಕರ ಬಸ್ ದುರಂತ;ಸೀಬರ್ಡ್ ಬಸ್-ಲಾರಿ ಭೀಕರ ಡಿಕ್ಕಿ, 17 ಮಂದಿ ಸಜೀವ ದಹನ!

    ಚಿತ್ರದುರ್ಗದಲ್ಲಿ ಭೀಕರ ಬಸ್ ದುರಂತ;ಸೀಬರ್ಡ್ ಬಸ್-ಲಾರಿ ಭೀಕರ ಡಿಕ್ಕಿ, 17 ಮಂದಿ ಸಜೀವ ದಹನ!

    ಹಿರಿಯೂರು (ಚಿತ್ರದುರ್ಗ): ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿದ್ದ ಜನರಿಗೆ ಈ ಘಟನೆ ಆಘಾತ ತಂದಿದ್ದು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಖಾಸಗಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ 17ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ.

    ಘಟನೆ ನಡೆದದ್ದು ಹೇಗೆ?
    ನೆನ್ನೆ ರಾತ್ರಿ (ಡಿ. 25) ನಸುಕಿನ 3 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ದುರಂತ ನಡೆದಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್’ ಸಂಸ್ಥೆಯ ಸ್ಲೀಪರ್ ಕೋಚ್ ಬಸ್‌ಗೆ, ಹಿರಿಯೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಲಾರಿಯು ಡಿವೈಡರ್ ಹಾರಿ ಬಂದು ಎದುರಿನಿಂದ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

    ಸಜೀವ ದಹನವಾದ ಪ್ರಯಾಣಿಕರು
    ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ಗೆ ತಕ್ಷಣ ಬೆಂಕಿ ಹತ್ತಿಕೊಂಡಿದೆ. 32 ಆಸನಗಳ ಸಾಮರ್ಥ್ಯದ ಈ ಬಸ್ಸಿನಲ್ಲಿ ಒಟ್ಟು 29 ಪ್ರಯಾಣಿಕರಿದ್ದರು (15 ಮಹಿಳೆಯರು, 14 ಪುರುಷರು). ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ 17 ಮಂದಿ ಬಸ್ಸಿನ ಒಳಗೇ ಮೃತಪಟ್ಟಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕ ಹೊರಜಿಗೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುರಂತದಲ್ಲಿ ಲಾರಿ ಚಾಲಕ ಕುಲದೀಪ್ ಕೂಡ ಸಾವನ್ನಪ್ಪಿದ್ದಾರೆ.

    ಚಿತ್ರದುರ್ಗ ಎಸ್.ಪಿ. ರಂಜಿತ್, ಡಿವೈಎಸ್ಪಿ ಶಿವಕುಮಾರ್ ಮತ್ತು ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.

    ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಹಿರಿಯೂರು, ಶಿರಾ ಮತ್ತು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಗನ ಶ್ರೀ, ರಕ್ಷಿತಾ ಮತ್ತು ರಶ್ಮಿ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

    ಅಪಘಾತದ ತೀವ್ರತೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 30 ಕಿ.ಮೀ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಆಂಬುಲೆನ್ಸ್ ಸ್ಥಳಕ್ಕೆ ತಲುಪಲು ಹರಸಾಹಸ ಪಡಬೇಕಾಯಿತು.

    ಪ್ರಯಾಣಿಕರ ವಿವರ
    ಬಸ್ಸಿನಲ್ಲಿದ್ದವರ ಪೈಕಿ 25 ಜನರು ಗೋಕರ್ಣದವರಾಗಿದ್ದು, ಇಬ್ಬರು ಕುಮಟಾ ಹಾಗೂ ಇಬ್ಬರು ಶಿವಮೊಗ್ಗದವರಾಗಿದ್ದರು. ಮಂಜುನಾಥ್, ಸಂಧ್ಯಾ, ಶಶಾಂಕ್, ದಿಲೀಪ್ ಸೇರಿದಂತೆ ಅನೇಕರು ಪ್ರವಾಸದ ಸಂಭ್ರಮದಲ್ಲಿದ್ದಾಗಲೇ ಈ ವಿಧಿ ಸಂಭವಿಸಿದೆ.

    ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಕರ್ನೂಲ್ ಬಳಿ ಸಂಭವಿಸಿದ ಬಸ್ ಅಪಘಾತದಲ್ಲಿ 20 ಜನರು ಸಾವನ್ನಪ್ಪಿದ್ದರು. ಆ ಘಟನೆಯ ನೆನಪು ಮಾಸುವ ಮುನ್ನವೇ ಕರ್ನಾಟಕದಲ್ಲಿ ಇಂತದ್ದೇ ಮತ್ತೊಂದು ಬೆಂಕಿ ಅವಘಡ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಪ್ರೀತಿ ಮತ್ತು ಸಾಮರಸ್ಯದ ಸಂಕೇತ ‘ಕ್ರಿಸ್‌ಮಸ್’: ಈ ಪವಿತ್ರ ದಿನದ ಮತ್ತು ಇತಿಹಾಸ ಮತ್ತು ಆಚರಣಾ ವಿಧಾನ ತಿಳಿಯಿರಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್! ರೂಪಾಯಿ ಕುಸಿತ—ಮೊದಲ ಬಾರಿಗೆ ₹93 ದಾಟಿದ ಡಾಲರ್, ಆರ್ಥಿಕತೆಗೆ ಶಾಕ್!

    “ರೂಪಾಯಿ ಕುಸಿತ 93” ಇದೀಗ ದೇಶದ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತೀಯ ರೂಪಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ₹93 ಗಡಿ...

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading