ಬಿಗ್ಬಾಸ್ ಕನ್ನಡ ಸೀಸನ್ 11 ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಇಂದು (ಜನವರಿ 26) ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ನಡೆಯುತ್ತಿದೆ. 17 ಸ್ಪರ್ಧಿಗಳು ಸ್ಪರ್ಧಿಸಿದ್ದ ಈ ಸೆಣಸಾಟದಲ್ಲಿ ಯಾವ ಸ್ಪರ್ಧಿ ಗೆಲ್ಲಲಿದ್ದಾರೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
ನಿನ್ನೆ ಟಾಪ್ 6 ಸ್ಪರ್ಧಿಯಾಗಿ ಬಿಗ್ಬಾಸ್ನಿಂದ ಭವ್ಯಾ ಗೌಡ ಎಲಿಮಿನೇಟ್ ಆದ ಬಳಿಕ ಟಾಪ್ 5 ಸ್ಪರ್ಧಿಗಳಾಗಿ ಹನುಮಂತು, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಹಾಗೂ ರಜತ್ ಉಳಿದುಕೊಂಡಿದ್ದರು. ಈ ಪೈಕಿ ಇಂದು ಮೊದಲಿಗೆ ಉಗ್ರಂ ಮಂಜು ಎಲಿಮಿನೇಟ್ ಆಗಿ ಐದನೇ ಸ್ಥಾನ ಪಡೆದುಕೊಂಡಿದ್ದು, ಬಳಿಕ ಮೋಕ್ಷಿತಾ ನಾಲ್ಕನೇ ಸ್ಥಾನದೊಂದಿಗೆ ಎಲಿಮಿನೇಟ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮೂಲಕ ಹನುಮಂತು, ರಜತ್ ಹಾಗೂ ತ್ರಿವಿಕ್ರಮ್ ಟಾಪ್ 3 ಸ್ಪರ್ಧಿಗಳಾಗಿ ಉಳಿದುಕೊಂಡಿದ್ದು, ಈ ಪೈಕಿ ಟಾಪ್ 2 ಫೈನಲಿಸ್ಟ್ಗಳಾಗಿ ಯಾರು ಉಳಿದುಕೊಳ್ಳಲಿದ್ದಾರೆ ಹಾಗೂ ಯಾರು ವಿನ್ನರ್ ಆಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


