ಬಿಗ್‌ಬಾಸ್ ಕನ್ನಡ ಸೀಸನ್ 11ರ ಮುಕ್ತಾಯದ ಹಂತಕ್ಕೆ ಬಂದಿದ್ದು ಇಂದು (ಜನವರಿ 26) ಗ್ರ್ಯಾಂಡ್ ಫಿನಾಲೆ ಜರುಗುತ್ತಿದೆ. ನಿನ್ನೆ ಟಾಪ್ 6ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಭವ್ಯಾ ಗೌಡ ಎಲಿಮಿನೇಟ್ ಆದ ಬಳಿಕ ಮನೆಯಲ್ಲಿ ಹನುಮಂತು, ತ್ರಿವಿಕ್ರಮ್, ಉಗ್ರಂ ಮಂಜು, ಮೋಕ್ಷಿತಾ ಹಾಗೂ ರಜತ್ ಈ ಐವರು ಉಳಿದುಕೊಂಡಿದ್ದರು.
ಇಂದು ಬೆಳಗ್ಗೆ 11 ಗಂಟೆಯಿಂದಲೇ ಗ್ರ್ಯಾಂಡ್ ಫಿನಾಲೆ ಚಿತ್ರೀಕರಣ ಶುರುವಾಗಿದ್ದು, ಭವ್ಯಾ ಗೌಡ ಬಳಿಕ ಉಗ್ರಂ ಮಂಜು ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇನ್ನು ಉಗ್ರಂ ಮಂಜು ಅಥವಾ ಹನುಮಂತು ಈ ಬಾರಿಯ ಸೀಸನ್‌ನಲ್ಲಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರಗಳನ್ನು ವೀಕ್ಷಕರು ಹಾಕಿದ್ದರು. ಇಷ್ಟರ ಮಟ್ಟಿಗೆ ನಿರೀಕ್ಷೆ ಹುಟ್ಟಿಸಿದ್ದ ಉಗ್ರಂ ಮಂಜು ಎಲಿಮಿನೇಶನ್ ಸದ್ಯ ಪ್ರೇಕ್ಷಕರಿಗೆ ಶಾಕಿಂಗ್ ಎನಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


