ಫೆಬ್ರವರಿ 28, ಮಾರ್ಚ್ 1 ಹಾಗೂ ಮಾರ್ಚ್ 2ರಂದು ಹಂಪಿ ಉತ್ಸವ ಕಾರ್ಯಕ್ರಮ ನಡೆಯಲಿದ್ದು, ವಿಜಯನಗರ ಸಾಮ್ರಾಜ್ಯದ ವೈಭವವನ್ನು ಕಣ್ತುಂಬಿಕೊಳ್ಳಲು ವಿಶ್ವದ ಮೂಲೆ ಮೂಲೆಗಳಿಂದ ಪ್ರವಾಸಿಗರು ಹರಿದುಬರಲಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಈ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದು, 500 ಸಿಸಿ ಕ್ಯಾಮೆರಾ, 25 ಕಡೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.
ಇನ್ನು ಹಂಪಿ ಉತ್ಸವದ ಅಂಗವಾಗಿ ಹಂಪಿ ಮದುವಣಗಿತ್ತಿಯಂತೆ ಸಿದ್ದಗೊಂಡಿದ್ದು, ಇಷ್ಟು ದಿನಗಳ ಕಾಲ ನಾಲ್ಕು ವೇದಿಕೆಗಳನ್ನು ಹಾಕುತ್ತಿದ್ದ ಜಿಲ್ಲಾಡಳಿತ ಈ ಬಾರಿ ಐದು ವೇದಿಕೆಗಳನ್ನು ನಿರ್ಮಿಸಿದೆ.
ಹೀಗೆ ಪ್ರವಾಸಿಗರ ಸ್ವರ್ಹ ಹಂಪಿ ಉತ್ಸವಕ್ಕೆ ಸಿದ್ಧವಾಗಿದ್ದು, ವಸತಿ ವಕ್ಫ್ ಸಚಿವ ಜನ ಸಾಮಾನ್ಯರನ್ನು ಉತ್ಸವಕ್ಕ ಆಹ್ವಾನಿಸಲು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ತಾವೇ ಮಾತನಾಡಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಜಮೀರ್ ಉತ್ಸವ ಎನ್ನುವ ಬದಲು ಎಲ್ಲಾ ಬಾರಿಯೂ ಉಸ್ತವ ಎಂದು ಹೇಳಿದ್ದು ನೆಟ್ಟಿಗರು ಕಾಮೆಂಟ್ ಮೂಲಕ ಜಮೀರ್ ಕಾಲೆಳೆದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


