Tuesday, November 3, 2026
spot_img
More
    spot_img
    HomeChampions Trophy 2025Champions Trophy 2025: ಇಂಗ್ಲೆಂಡ್‌ಗೆ ಭಾರೀ ಮುಖಭಂಗ; ಅಫ್ಘಾನಿಸ್ತಾನದ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಆಂಗ್ಲರು!

    Champions Trophy 2025: ಇಂಗ್ಲೆಂಡ್‌ಗೆ ಭಾರೀ ಮುಖಭಂಗ; ಅಫ್ಘಾನಿಸ್ತಾನದ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಆಂಗ್ಲರು!

    ಲಾಹೋರ್: ಇಲ್ಲಿನ ಗಡ್ಡಾಫಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಎಂಟನೇ ಪಂದ್ಯ ಇಂಗ್ಲೆಂಡ್ ಹಾಗೂ ಅಘ್ಘಾನಿಸ್ತಾನ ತಂಡಗಳ ನಡುವಿನ ರೋಚಕ ಹಣಾಹಣಿಗೆ ಸಾಕ್ಷಿಯಾಯಿತು.

    ಈ ಪಂದ್ಯದಲ್ಲಿ ಅಫ್ಘಾನಿಸ್ತಾನ 8 ರನ್‌ಗಳ ರೋಚಕ ಜಯ ಸಾಧಿಸಿದ್ದು, ಈ ಪಂದ್ಯವೂ ಸೇರಿದಂತೆ ಟೂರ್ನಿಯಲ್ಲಿ ಸತತ ಎರಡು ಸೋಲುಗಳನ್ನು ಕಂಡ ಇಂಗ್ಲೆಂಡ್ ಟೂರ್ನಿಯಿಂದ ಹೊರಬಿದ್ದಿದೆ.

    ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ ಇಬ್ರಾಹಿಂ ಜದ್ರಾನ್ ಅಬ್ಬರದ 177 ರನ್‌ಗಳ ಭರ್ಜರಿ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 325 ರನ್ ಕಲೆಹಾಕಿ ಇಂಗ್ಲೆಂಡ್‌ಗೆ 326 ರನ್‌ಗಳ ಗುರಿಯನ್ನು ನೀಡಿತ್ತು.

    ಈ ಗುರಿಯನ್ನು ಬೆನ್ನಟ್ಟಲು ತಿಣುಕಾಡಿದ ಇಂಗ್ಲೆಂಡ್ ಅಂತಿಮ ಓವರ್‌ವರೆಗೂ ಬಂದು 49.5 ಓವರ್‌ಗಳಲ್ಲಿ 317 ರನ್‌ಗಳಿಗೆ ಆಲ್‌ಔಟ್ ಆಗಿದೆ.

    ಅಫ್ಘಾನಿಸ್ತಾನದ ಇನ್ನಿಂಗ್ಸ್: ತಂಡದ ಪರ ರಹನ್ಮುಲ್ಲಾ ಗುರ್ಬಝ್ 6 ರನ್ ಹಾಗೂ ಸಿದ್ದಿಕ್ಉಲ್ಲಾ ಅತಲ್ 4 ರನ್ ಗಳಿಸಿ ಔಟ್ ಆದಾಗ ಕೇವಲ 15 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಅಘ್ಘಾನಿಸ್ತಾನ ತಂಡಕ್ಕೆ ಆಸರೆಯಾದದ್ದು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಬ್ರಾಹಿಂ ಜದ್ರಾನ್. ಹೌದು, ಒಂದೆಡೆ ತಂಡದ ವಿಕೆಟ್‌ಗಳು ಉದುರುತ್ತಿದ್ದರೆ, ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಮಾಡಿದ ಜದ್ರಾನ್ 146 ಎಸೆತಗಳಲ್ಲಿ 12 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 177 ರನ್ ಗಳಿಸಿ ತಂಡ ಬೃಹತ್ ಮೊತ್ತ ಕಲೆಹಾಕುವುದಕ್ಕೆ ಪ್ರಮುಖ ಕಾರಣರಾದರು. ಇನ್ನುಳಿದಂತೆ ರಹ್ಮತ್ 4, ಶಾಹಿದಿ 40, ಅಜ್ಮತುಲ್ಲಾ 41, ಮೊಹಮ್ಮದ್ ನಬಿ 40, ಗುಲ್ಬದ್ದೀನ್ ಅಜೇಯ 1 ಹಾಗೂ ರಶೀದ್ ಖಾನ್ ಅಜೇಯ 1 ರನ್ ಕಲೆಹಾಕಿದರು.

    ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 3 ವಿಕೆಟ್, ಲಿಯಾಮ್ ಲಿವಿಂಗ್‌ಸ್ಟನ್ 2 ವಿಕೆಟ್, ಆದಿಲ್ ರಶೀದ್ ಹಾಗೂ ಜೇಮಿ ಓವರ್‌ಟನ್ ತಲಾ ಒಂದೊಂದು ವಿಕೆಟ್ ಪಡೆದರು.

    ಇಂಗ್ಲೆಂಡ್ ಇನ್ನಿಂಗ್ಸ್: ಅಫ್ಘಾನಿಸ್ತಾನದ ವಿರುದ್ಧ ಶತಕ ಬಾರಿಸಿದ ಜೋ ರೂಟ್ ಹೊರತುಪಡಿಸಿ ಇನ್ಯಾವ ಆಟಗಾರನೂ ಸಹ ಬೃಹತ್ ಮೊತ್ತ ಕಲೆಹಾಕಲಿಲ್ಲ. ಬೆನ್ ಡಕೆಟ್, ಜೋಸ್ ಬಟ್ಲರ್ ಹಾಗೂ ಜೇಮಿ ಓವರ್ಟನ್ ಮೂವತ್ತಕ್ಕೂ ಹೆಚ್ಚು ರನ್ ಕಾಣಿಕೆ ನೀಡಿದರೂ ಸಹ ಪಂದ್ಯವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಅಫ್ಘಾನಿಸ್ತಾನದ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಭಾರೀ ಬೆಲೆ ತೆತ್ತಿದೆ.

    ತಂಡದ ಪರ ಫಿಲಿಪ್ ಸಾಲ್ಟ್ 12, ಬೆನ್ ಡಕೆಟ್ 38, ಜೇಮಿ ಸ್ಮಿತ್ 9, ಜೋ ರೂಟ್ 120, ಹ್ಯಾರಿ ಬ್ರೂಕ್ 25, ಜೋಸ್ ಬಟ್ಲರ್ 38, ಲಿಯಾಮ್ ಲಿವಿಂಗ್‌ಸ್ಟನ್ 10, ಜೇಮಿ ಓವರ್ಟನ್ 32, ಜೋಫ್ರಾ ಆರ್ಚರ್ 14, ಆದಿಲ್ ರಶೀದ್ 5 ಹಾಗೂ ಮಾರ್ಕ್ ವುಡ್ ಅಜೇಯ 2 ರನ್ ಕಲೆಹಾಕಿದರು.

    ಅಘ್ಘಾನಿಸ್ತಾನದ ಪರ ಅಜ್ಮತುಲ್ಲಾ ಒಮರ್ಜೈ 5 ವಿಕೆಟ್, ಮೊಹಮ್ಮದ್ ನಬಿ ಎರಡು ವಿಕೆಟ್, ಫಜಲ್‌ಹಕ್ ಫರೂಕಿ, ರಶೀದ್ ಖಾನ್ ಹಾಗೂ ಗುಲ್ಬದಿನ್ ನೈಬ್ ತಲಾ ಒಂದೊಂದು ವಿಕೆಟ್ ಪಡೆದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search