ಭಾರತೀಯ ಆಯುರ್ವೇದ ವಿಜ್ಞಾನವು ಆರೋಗ್ಯದ ವಿವಿಧ ಸಮಸ್ಯೆಗಳಿಗೆ ಪರಿಹಾರಗಳನ್ನು ಮಾತ್ರವಲ್ಲದೆ, ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಕೂಡ ವಿವರವಾಗಿ ತಿಳಿಸುತ್ತದೆ. ನಮ್ಮ ಸುತ್ತಲೂ ಸುಲಭವಾಗಿ ದೊರೆಯುವ ವಸ್ತುಗಳಿಂದ ಹಿಡಿದು ಅಪರೂಪವಾಗಿ ಸಿಗುವ ಮೂಲಿಕೆಗಳವರೆಗೆ, ಅವುಗಳ ಪ್ರಯೋಜನಗಳನ್ನು ಆಯುರ್ವೇದದಲ್ಲಿ ವಿವರಿಸಲಾಗಿದೆ.ಅಶ್ವಗಂಧ ಎಂಬ ಈ ಅದ್ಭುತ ಮೂಲಿಕೆಗೆ ಅದರ ವಿಶಿಷ್ಟ ವಾಸನೆಯೇ ಹೆಸರು ತಂದಿದೆ. ಇದರ ವಾಸನೆ ಕುದುರೆಯ ಮೂತ್ರದಂತೆ ಇರುವ ಕಾರಣದಿಂದ ಆಯುರ್ವೇದದಲ್ಲಿ ಇದನ್ನು “ಅಶ್ವಗಂಧ” ಅಥವಾ “ಅಶ್ವದ ಗಂಧ” ಎಂದು ಕರೆಯಲಾಗುತ್ತದೆ. ಅಶ್ವಗಂಧ ಗಿಡದ ಬೇರುಗಳಲ್ಲಿ ಅನೇಕ ಆರೋಗ್ಯ ಪ್ರಯೋಜನಗಳು ಅಡಗಿವೆ. ಇದು ದೇಹದ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ಯೌವನವನ್ನು ಮತ್ತು ಚೈತನ್ಯವನ್ನು ಕಾಪಾಡಲು ಸಹಕಾರಿ.

ಪ್ರತಿದಿನ ಅಶ್ವಗಂಧ ಸೇವಿಸಿದರೆ ಯಾವೆಲ್ಲಾ ಪ್ರಯೋಜನಗಳು ದೊರೆಯುತ್ತವೆ?
*ಅಶ್ವಗಂಧವನ್ನು ಬಿಸಿ ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ದೈಹಿಕ ದೌರ್ಬಲ್ಯ ನಿವಾರಣೆ, ನಿದ್ರೆಯ ಕೊರತೆ ಪರಿಹಾರ ಮತ್ತು ತೂಕ ಹೆಚ್ಚಿಸಲು ಸಹಾಯವಾಗುತ್ತದೆ. ಆಯುರ್ವೇದದಲ್ಲಿ ಅಶ್ವಗಂಧವನ್ನು ಅತ್ಯಂತ ಉಪಯುಕ್ತವಾದ ಮೂಲಿಕೆಯೆಂದು ಪರಿಗಣಿಸಲಾಗಿದ್ದು, ಇದು ದೇಹದ ಸಾಮರ್ಥ್ಯವನ್ನು ಹೆಚ್ಚಿಸುವುದು, ಶಕ್ತಿಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುವ ಗುಣಗಳನ್ನು ಹೊಂದಿದೆ.
*ನಮ್ಮ ಹಿರಿಯರ ಕಾಲದಿಂದಲೂ ಅಶ್ವಗಂಧ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತಿತ್ತು. ಮಧುಮೇಹ (ಡಯಾಬಿಟಿಸ್) ಎಂಬ ದೀರ್ಘಕಾಲದ ಕಾಯಿಲೆಯನ್ನು ನಿಯಂತ್ರಣದಲ್ಲಿಡುವಲ್ಲಿಯೂ ಅಶ್ವಗಂಧ ಪ್ರಮುಖ ಪಾತ್ರವಹಿಸುತ್ತದೆ. ಆಯುರ್ವೇದ ತಜ್ಞರ ಪ್ರಕಾರ, ಅಶ್ವಗಂಧ ಗಿಡಮೂಲಿಕೆಯ ಸಾರವು ರಕ್ತನಾಳಗಳಲ್ಲಿ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಇನ್ಸುಲಿನ್ ಸ್ರವಿಸುವಿಕೆಗೆ ಉತ್ತೇಜನ ನೀಡುತ್ತದೆ. ವಿಶೇಷವಾಗಿ ಟೈಪ್ 2 ಮಧುಮೇಹ ಇರುವವರಿಗೆ ಅಶ್ವಗಂಧದಿಂದ ಉತ್ತಮ ಲಾಭವಾಗುತ್ತದೆ.

*ಅಶ್ವಗಂಧವು ಶತಮಾನಗಳಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತ್ಯುತ್ತಮ ಆಯುರ್ವೇದ ಔಷಧಿಯಾಗಿ ಬಳಕೆಯಾಗುತ್ತಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ಅನೇಕ ರೋಗಗಳಿಂದ ರಕ್ಷಣೆ ಪಡೆಯಲು ಸಹಾಯ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಬಲಿಷ್ಠವಾಗಿದ್ದರೆ, ದೇಹವು ವಿವಿಧ ಸೋಂಕುಗಳು ಮತ್ತು ಕಾಯಿಲೆಗಳನ್ನು ಪರಿಣಾಮಕಾರಿಯಾಗಿ ಎದುರಿಸಬಹುದು.
*ಒಂದು ಚಮಚ ಅಶ್ವಗಂಧ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಬೆಳಗ್ಗೆ ಸಂಜೆ ಸೇವಿಸುವುದರಿಂದ ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿ ಎದುರಾಗುವ ತೊಂದರೆಗಳು ಶಮನವಾಗುತ್ತದೆ.
*ಈ ಅಶ್ವಗಂಧ ಪುಡಿ ದುರ್ಬಲ ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ. ನಿತ್ಯ ಸೇವನೆ ಮಾಡಿದರೆ ನಿದ್ರಾಹೀನತೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಜೊತೆಗೆ, ಕೆಲವು ಅಧ್ಯಯನಗಳ ಪ್ರಕಾರ, ಅಶ್ವಗಂಧವು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳನ್ನು ನಿರ್ವಹಿಸುವಲ್ಲಿ ಸಹಾಯಕವಾಗಬಹುದು.
*ಅಶ್ವಗಂಧವನ್ನು ಸೇವಿಸಲು, ಅದರ ಬೇರನ್ನು ಹಾಲು, ನೀರಿನಲ್ಲಿ ಕುದಿಸಬಹುದು ಅಥವಾ ಪುಡಿ ರೂಪದಲ್ಲಿ ಸೇವಿಸಬಹುದು. ಅಶ್ವಗಂಧದ ಚೂರ್ಣವನ್ನು ಸೇವಿಸುವುದರಿಂದ ಹೊಟ್ಟೆಯು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

*ಹೃದಯವನ್ನು ಆರೋಗ್ಯವಾಗಿಡುವಲ್ಲಿ ಅಶ್ವಗಂಧ ಕೂಡ ತುಂಬಾ ಪರಿಣಾಮಕಾರಿಯಾಗಿದೆ. ಅಧಿಕ ಬಿಪಿ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಯೂ ಇದು ಉತ್ತಮ ಪಾತ್ರ ವಹಿಸುತ್ತದೆ.
*ಸಾಕಷ್ಟು ವಿಶ್ರಾಂತಿ ಪಡೆದಿದ್ದರೂ ದಣಿವು ಮತ್ತು ಆಲಸ್ಯ ಅನುಭವವಾಗುತ್ತಿರುವವರಿಗೆ ಅಶ್ವಗಂಧ ಅತ್ಯುತ್ತಮ ಆಯುರ್ವೇದ ಔಷಧಿ. ಕಾಫಿ ಕುಡಿಯುವುದರಿಂದ ದೇಹಕ್ಕೆ ತಕ್ಷಣದ ಚೈತನ್ಯ ದೊರಕುವಂತೆ, ಅಶ್ವಗಂಧ ಸೇವನೆಯಿಂದ ಸಹ ದೇಹ ಮತ್ತು ಮನಸ್ಸಿಗೆ ಶಕ್ತಿಯನ್ನು ನೀಡುವ ಅನುಭವವನ್ನು ಪಡೆಯಬಹುದು. ಇದು ದೈನಂದಿನ ದಣಿವು ನಿವಾರಣೆ ಹಾಗೂ ಚೈತನ್ಯ ಹೆಚ್ಚಿಸಲು ಸಹಕಾರಿ
ಪ್ರತಿದಿನ ಚುಕ್ಕಿ ಬಾಳೆಹಣ್ಣು ತಿನ್ನುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


