Monday, September 21, 2026
spot_img
More
    spot_img
    HomeSportsCricketಭಾರತ vs ಇಂಗ್ಲೆಂಡ್‌ ದ್ವಿತೀಯ ಟೆಸ್ಟ್;‌ ಇಂಗ್ಲೆಂಡ್‌ ತಂಡ ಸೇರಿಕೊಂಡ ಡೇಂಜರಸ್‌ ಆಟಗಾರ!

    ಭಾರತ vs ಇಂಗ್ಲೆಂಡ್‌ ದ್ವಿತೀಯ ಟೆಸ್ಟ್;‌ ಇಂಗ್ಲೆಂಡ್‌ ತಂಡ ಸೇರಿಕೊಂಡ ಡೇಂಜರಸ್‌ ಆಟಗಾರ!

    ಪ್ರಸ್ತುತ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿರುವ ಭಾರತ ಪುರುಷರ ಕ್ರಿಕೆಟ್‌ ತಂಡ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾಗವಹಿಸಿದೆ. ಈಗಾಗಲೇ ಪ್ರಥಮ ಟೆಸ್ಟ್‌ ಪಂದ್ಯ ಮುಕ್ತಾಯಗೊಂಡಿದ್ದು, ಪ್ರವಾಸಿ ಭಾರತ ತಂಡ ಹೀನಾಯ ಸೋಲುಂಡು ಕೆಟ್ಟ ಆರಂಭ ಪಡೆದುಕೊಂಡಿದೆ.

    Advertisement

    ಲೀಡ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಕಳಪೆ ಬೌಲಿಂಗ್‌ ಹಾಗೂ ಕೆಟ್ಟ ಕೆಳ ಕ್ರಮಾಂಕದ ಬ್ಯಾಟಿಂಗ್‌ನಿಂದಾಗಿ ಟೀಮ್‌ ಇಂಡಿಯಾ ಸೋಲನ್ನು ಕಂಡಿದೆ.

    ಇನ್ನು ಎರಡನೇ ಪಂದ್ಯ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಜುಲೈ 2ರಿಂದ 6ರವರೆಗೆ ನಡೆಯಲಿದ್ದು, ಈ ಪಂದ್ಯಕ್ಕೆ ಇಂಗ್ಲೆಂಡ್‌ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಮಾರಕ ಬೌಲರ್‌ ಜೋಫ್ರಾ ಆರ್ಚರ್‌ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಜೋಫ್ರಾ ಆರ್ಚರ್‌ ಈ ಪಂದ್ಯಕ್ಕೆ ಆಗಮಿಸಲಿದ್ದು, ಇದು ಇಂಗ್ಲೆಂಡ್‌ ತಂಡಕ್ಕೆ ದೊಡ್ಡ ಪ್ಲಸ್‌ ಪಾಯಿಂಟ್‌ ಆದರೆ ಭಾರತ ತಂಡಕ್ಕೆ ಹಿನ್ನಡೆಯನ್ನುಂಟುಮಾಡಬಹುದಾದ ಅಂಶವಾಗಿದೆ.

    ಎರಡನೇ ಪಂದ್ಯಕ್ಕೆ ಪ್ರಕಟಗೊಂಡ ಇಂಗ್ಲೆಂಡ್ ತಂಡ: ಸ್ಟೋಕ್ಸ್, ಜೋಫ್ರಾ, ಬಶೀರ್, ಬೆಥೆಲ್, ಬ್ರೂಕ್, ಕಾರ್ಸ್, ಸ್ಯಾಮ್ ಕುಕ್, ಕ್ರಾಲೆ, ಡಕೆಟ್, ಓವರ್ಟನ್, ಪೋಪ್, ರೂಟ್, ಜೇಮಿ ಸ್ಮಿತ್, ಟಂಗ್, ವೋಕ್ಸ್

    ಗೋಧಿ ಮೀಡಿಯಾ ಹಾಗೂ ಮೋದಿ ಸರ್ಕಾರ ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸುತ್ತಿವೆ; ಸಿದ್ದರಾಮಯ್ಯ ಕಿಡಿ

    ಎಐ ಅಡ್ವೋಕೇಟ್‌ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading