ಇತ್ತೀಚೆಗಷ್ಟೆ ಮುಕ್ತಾಯಗೊಂಡ ಕಳೆದ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ಎತ್ತಿ ಹಿಡಿಯಿತು.
ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ನಾಯಕನಾಗಿ ಟೆಸ್ಟ್ ಸೋಲಿಲ್ಲದ ತಮ್ಮ ವಿಶೇಷ ದಾಖಲೆಯನ್ನು ಮುಂದುವರಿಸಿದರು. ಅತ್ತ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮೊದಲ ಐಸಿಸಿ ಫೈನಲ್ ಸೋಲನ್ನು ಕಂಡರು.
ಈ ಪಂದ್ಯದ ಮುಕ್ತಾಯದ ಸಮಯಕ್ಕೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿಹೆಚ್ಚು ಗೆಲುವು ಕಂಡ ನಾಯಕರ ಪಟ್ಟಿ ಬಿಡುಗಡೆಯಾಗಿದ್ದು, ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ 34 ಪಂದ್ಯಗಳಲ್ಲಿ 20 ಪಂದ್ಯಗಳನ್ನು ಗೆಲ್ಲುವುದರ ಮೂಲಕ ಪ್ರಥಮ ಸ್ಥಾನದಲ್ಲಿದ್ದಾರೆ. 30 ಪಂದ್ಯಗಳಲ್ಲಿ 18 ಪಂದ್ಯಗಳನ್ನು ಗೆಲ್ಲಿಸಿರುವ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಎರಡನೇ ಸ್ಥಾನದಲ್ಲಿದ್ದಾರೆ.
22 ಪಂದ್ಯಗಳಲ್ಲಿ 14 ಪಂದ್ಯಗಳನ್ನು ಗೆಲ್ಲಿಸಿರುವ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ, 24 ಪಂದ್ಯಗಳಲ್ಲಿ 12 ಪಂದ್ಯಗಳನ್ನು ಗೆಲ್ಲಿಸಿರುವ ರೋಹಿತ್ ಶರ್ಮಾ ನಾಲ್ಕನೇ ಸ್ಥಾನ, 34 ಪಂದ್ಯಗಳಲ್ಲಿ 12 ಪಂದ್ಯಗಳನ್ನು ಗೆಲ್ಲಿಸಿರುವ ಜೋ ರೂಟ್ ಐದನೇ ಸ್ಥಾನ, 10 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಗೆಲ್ಲಿಸಿರುವ ಟೆಂಬಾ ಬವುಮಾ ಆರನೇ ಸ್ಥಾನ ಹಾಗೂ 32 ಪಂದ್ಯಗಳಲ್ಲಿ 9 ಪಂದ್ಯ ಗೆಲ್ಲಿಸಿರುವ ಕಾರ್ಲಸ್ ಬ್ರೇಥ್‌ವೇಟ್ ಏಳನೇ ಸ್ಥಾನದಲ್ಲಿದ್ದಾರೆ.
ಸಿಗಂದೂರು ಸೇತುವೆ ಮೇಲೆ ನಡೆದ ಲೋಡ್ ಟೆಸ್ಟಿಂಗ್
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


