ಶಿವಮೊಗ್ಗ: ಕರ್ನಾಟಕದ ಅತಿ ಉದ್ದವಾದ ಒಳನಾಡ ಕೇಬಲ್-ಸ್ಟೇಡ್ ಸೇತುವೆಯಾದ ಸಿಗಂದೂರು ಸೇತುವೆಯ (Sigandoor Bridge) ಲೋಡ್ ಟೆಸ್ಟಿಂಗ್ ಕಾರ್ಯ ಇತ್ತೀಚೆಗೆ ಪ್ರಾರಂಭವಾಗಿದ್ದು, ಇದು ರಾಜ್ಯದ ಸಂಪರ್ಕ ಮತ್ತು ಅಭಿವೃದ್ಧಿಗೆ ಒಂದು ದೊಡ್ಡ ಹೆಜ್ಜೆಯಾಗಿದೆ. 2.25 ಕಿಲೋಮೀಟರ್ ಉದ್ದವನ್ನು ಹೊಂದಿರುವ ಈ ಸೇತುವೆ, ಎಕ್ಸ್‌ಟ್ರಾಡೋಸ್ಡ್ ಬ್ಯಾಲೆನ್ಸ್ ಕ್ಯಾಂಟಿಲೀವರ್ ವಿನ್ಯಾಸದಲ್ಲಿ ನಿರ್ಮಾಣಗೊಂಡಿದ್ದು, 740 ಮೀಟರ್ ಉದ್ದದ ಕೇಬಲ್‌ಗಳೊಂದಿಗೆ ಗರಿಷ್ಠ ದೃಢತೆಯನ್ನು ಒದಗಿಸುತ್ತದೆ. ಈ ಯೋಜನೆಯ ಮೌಲ್ಯ ಒಟ್ಟು ₹423 ಕೋಟಿ ಎಂದು ಅಂದಾಜಿಸಲಾಗಿದ್ದು, 2018ರ ಫೆಬ್ರವರಿ 19ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಿಲಾನ್ಯಾಸಗೊಂಡಿತು.
ಸೇತುವೆಯ ತಾಕತ್ತನ್ನು ಪರೀಕ್ಷಿಸಲು ಇತ್ತೀಚೆಗೆ ಟಿಪ್ಪರ್ ಲಾರಿಗಳ ಮೂಲಕ ಲೋಡ್ ಟೆಸ್ಟಿಂಗ್ ನಡೆಯುತ್ತಿದ್ದು, ಇದು ಸಾರ್ವಜನಿಕರ ಸುರಕ್ಷತೆಗೆ ಮತ್ತು ಸೇತುವೆಯ ದೀರ್ಘಾವಧಿ ಸೇವೆಗೆ ಒಂದು ಭರವಸೆಯಾಗಿದೆ. ಸಂಚಾರ ಸಚಿವ ನಿತಿನ್ ಗಡ್ಕರಿ ಅವರ ಮಾರ್ಗದರ್ಶನದಲ್ಲಿ ಈ ಯೋಜನೆ ಯಶಸ್ವಿಯಾಗುತ್ತಿದ್ದು, ಶಿವಮೊಗ್ಗ ಜಿಲ್ಲೆಯ ಸಂಪರ್ಕವನ್ನು ಬಲಪಡಿಸಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಇತ್ತೀಚಿನ ಭಾರೀ ಮುಂಗಾರು ಮಳೆಯು ಇತರೆ ಒಂದಷ್ಟು ಮೂಲಸೌಕರ್ಯ ಯೋಜನೆಗಳಿಗೆ ತೊಡಕು ಉಂಟು ಮಾಡಿದರೂ, ಸಿಗಂದೂರ ಸೇತುವೆಯ ಕಾಮಗಾರಿ ಮತ್ತು ಟೆಸ್ಟಿಂಗ್ ಕಾರ್ಯ ಮುಂದುವರಿದಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


