Monday, September 21, 2026
spot_img
More
    spot_img
    HomeLatest newsರೂಪೇಶ್‌ ರಾಜಣ್ಣ ದೊಡ್ಡ ವ್ಯಕ್ತಿ ನಾನು ತಪ್ಪು ಮಾಡಿಬಿಟ್ಟೆ; ಆರೋಪ ಮಾಡಿ ಉಲ್ಟಾ ಹೊಡೆದ ಸರ್ಫರಾಜ್‌...

    ರೂಪೇಶ್‌ ರಾಜಣ್ಣ ದೊಡ್ಡ ವ್ಯಕ್ತಿ ನಾನು ತಪ್ಪು ಮಾಡಿಬಿಟ್ಟೆ; ಆರೋಪ ಮಾಡಿ ಉಲ್ಟಾ ಹೊಡೆದ ಸರ್ಫರಾಜ್‌ ಖಾನ್!

    ಬೆಂಗಳೂರು: ಕನ್ನಡ ಪರ ಹೋರಾಟಗಾರ ರೂಪೇಶ್‌ ರಾಜಣ್ಣ ( rupesh rajanna ) ವಿರುದ್ಧ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್‌ ಖಾನ್‌ ಅವರ ಹೋಂ ಸ್ಟೇ ಕುರಿತಂತೆ ಮಾತನಾಡಿ ಗಂಭೀರ ಆರೋಪವನ್ನು ಹೊರಿಸಿದ್ದರು.

    Advertisement

    ತಾನು ಹೋಂ ಸ್ಟೇಯನ್ನು ಅಕ್ರಮವಾಗಿ ನಿರ್ಮಿಸಿಲ್ಲ, ಎಲ್ಲ ಪರವಾನಗಿ, ಅನುಮತಿ ಪಡೆದ ನಂತರವೇ ಹೋಂಸ್ಟೇ ನಿರ್ಮಿಸಿದ್ದೇನೆ ಎಂದಿದ್ದರು. ಆದರೆ ರೂಪೇಶ್‌ ರಾಜಣ್ಣ ಪಿತೂರಿ ನಡೆಸಿ ಅಕ್ರಮ ಎಂದು ಹೇಳಿದ್ದಾರೆ ಎಂದು ಆರೋಪಿಸಿದ್ದರು. ಈ ಭರದಲ್ಲಿ ರೂಪೇಶ್‌ ರಾಜಣ್ಣ ದುಡ್ಡು ತೆಗೆದುಕೊಂಡು ಕನ್ನಡಪರ ಹೋರಾಟ ಮಾಡುತ್ತಾರೆ ಎಂದೂ ಸಹ ಹೇಳಿದ್ದರು.

    ಈ ಹೇಳಿಕೆ ರೂಪೇಶ್‌ ರಾಜಣ್ಣ ಅವರನ್ನು ಕೆರಳಿಸಿದ್ದು, ಆರೋಪ ಕೇಳಿಬಂದ ದಿನವೇ ಇದರಲ್ಲಿ ತನ್ನ ಪಾತ್ರವಿಲ್ಲ, ಇದನ್ನು ಇತ್ಯರ್ಥ ಮಾಡದೇ ಬಿಡುವುದಿಲ್ಲ, ನೇರವಾಗಿ ಭೇಟಿಯಾಗೋಣ ಎಂದು ಸರ್ಫರಾಜ್‌ ಖಾನ್‌ಗೆ ಸಂದೇಶ ರವಾನಿಸಿದ್ದರು.

    ಅದರಂತೆ ರೂಪೇಶ್‌ ರಾಜಣ್ಣ ಸರ್ಫರಾಜ್‌ ಖಾನ್‌ ಭೇಟಿಯಾಗಿದ್ದು, ಈ ವೇಳೆ ಸರ್ಫರಾಜ್‌ ಖಾನ್‌ ಮನಃಪರಿವರ್ತನೆಯಾಗಿದೆ. ಇದರಲ್ಲಿ ರೂಪೇಶ್‌ ರಾಜಣ್ಣ ಅವರದ್ದು ಯಾವುದೇ ಪಾತ್ರವಿಲ್ಲ ತಾನು ತಪ್ಪಾಗಿ ಅರ್ಥ ಮಾಡಿಕೊಂಡುಬಿಟ್ಟೆ ಎಂದು ಹೇಳಿಕೊಂಡಿದ್ದಾರೆ.

    ರೂಪೇಶ್‌ ರಾಜಣ್ಣ ಅವರ ಕುರಿತು ಬೇರೆಡೆಯಿಂದ ತಪ್ಪಾದ ಮಾಹಿತಿ ಬಂದಿತ್ತು, ಇದೀಗ ಅವರು ಭೇಟಿ ಮಾಡಿ ಅಕ್ರಮ ಎಂದು ಯಾವತ್ತೂ ಹೇಳಿಲ್ಲ ಎಂದು ಮಾತನಾಡಿದ್ದಾರೆ, ನಿಮ್ಮ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಹೇಳಿದ್ದಾರೆ. ಅವರನ್ನು ಭೇಟಿ ಮಾಡಿ ತುಂಬಾ ಖುಷಿಯಾಯಿತು. ಅವರ ಮಾತು ಕೇಳಿ ಅವರು ತುಂಬಾ ದೊಡ್ಡ ವ್ಯಕ್ತಿ ಎನಿಸುತ್ತಿದೆ, ನಾನೇ ಜಾಸ್ತಿ ಮಾತನಾಡಿಬಿಟ್ಟೆ ಎನಿಸುತ್ತಿದೆ ಎಂದರು.

    ಅಲ್ಲದೇ ರೂಪೇಶ್‌ ರಾಜಣ್ಣ ಪರಿಚಯವಿರಲಿಲ್ಲ, ಈಗ ಅವರ ಬಗ್ಗೆ ತಿಳಿಯಿತು, ಇವರು ನನ್ನ ತಮ್ಮ, ಇನ್ನುಮುಂದೆ ಎಲ್ಲ ಕನ್ನಡಪರ ಸಂಘಟನೆಗಳ ಜತೆ ಕೈ ಜೋಡಿಸಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಕೊನೆಗೆ ತಾನು ಹೇಳಿದ್ದ ಎಲ್ಲ ಹೇಳಿಕೆಗಳನ್ನೂ ವಾಪಸ್‌ ತೆಗೆದುಕೊಳ್ಳುತ್ತಿದ್ದೇನೆ ಎಂದೂ ಸಹ ಸರ್ಫರಾಜ್‌ ಖಾನ್‌ ತಿಳಿಸಿದ್ದಾರೆ.

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್‌ ಮಾಡಿ

    ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿಬೆಟ್ಟದಲ್ಲಿ ಸಕಲ ಸಿದ್ಧತೆ; ವಿಶೇಷ ದರ್ಶನ ಟಿಕೆಟ್‌ ಬೆಲೆ ಎಷ್ಟು?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading