ಬೆಂಗಳೂರು: ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಸಾಗರ್ ಖಂಡ್ರೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಒಂದನ್ನು ಮಾಡಿದ್ದು, ಔರಂಗಾಬಾದ್ – ತಿರುಪತಿ ಎಕ್ಸ್‌ಪ್ರೆಸ್ ರೈಲು (17621/17622) ಭಾಲ್ಕಿ ನಿಲ್ದಾಣದಲ್ಲೂ ನಿಲುಗಡೆಯಾಗಲಿದೆ ಎಂಬ ಸುದ್ದಿಯನ್ನು ತಿಳಿಸಿದ್ದಾರೆ.
ತಿರುಪತಿಗೆ ತೆರಳುವ ಭಾಲ್ಕಿ ಸುತ್ತ ಮುತ್ತಲಿನ ಪ್ರವಾಸಿಗರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಈ ಮನವಿಯನ್ನು ಸತತ ಪ್ರಯತ್ನದ ಬಳಿಕ ರೈಲ್ವೆ ಇಲಾಖೆ ಸ್ವೀಕರಿಸಿದ್ದು, ತಾತ್ಕಾಲಿಕ ನಿಲುಗಡೆಗೆ ಅನುಮತಿ ನೀಡಿದೆ ಎಂದಿದ್ದಾರೆ.
ಈ ತಾತ್ಕಾಲಿಕ ನಿಲುಗಡೆ ಶಾಶ್ವತ ನಿಲುಗಡೆಯಾಗಿ ಬದಲಾಗಬೇಕೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಭಾಲ್ಕಿ ನಿಲ್ದಾಣದಿಂದ ಈ ರೈಲನ್ನು ಬಳಸಬೇಕಿದೆ. ಹೀಗಾಗಿ ಸಾಗರ್ ಖಂಡ್ರೆ ಭಾಲ್ಕಿ ಸುತ್ತಮುತ್ತಲಿನ ಜನರಿಗೆ ಈ ಮಾರ್ಗವನ್ನು ಬಳಸಲು ಮನವಿ ಮಾಡಿಕೊಂಡಿದ್ದಾರೆ. ಒಂದುವೇಳೆ ನಿರೀಕ್ಷಿತ ಟಿಕೆಟ್‌ಗಳು ಮಾರಾಟವಾಗದೇ ಇದ್ದರೆ ಈ ಯೋಜನೆಯನ್ನು ರೈಲ್ವೆ ಇಲಾಖೆ ಕೈ ಬಿಡಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಹೆಚ್ಚು ಗೆಲುವು ಕಂಡ ನಾಯಕರ ಪಟ್ಟಿ; ನಂಬರ್ 1 ಯಾರು?
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


