Saturday, September 19, 2026
spot_img
More
    spot_img
    HomeLatest newsಹೆಲ್ತಿಯೂ, ಟೇಸ್ಟಿಯೂ ಆದ ರಾಗಿ ಕಾಫಿ; ನಿಮ್ಮ ದಿನದ ಹೊಸ ಎನರ್ಜಿ ಡ್ರಿಂಕ್ ಒಮ್ಮೆ ಟ್ರೈ...

    ಹೆಲ್ತಿಯೂ, ಟೇಸ್ಟಿಯೂ ಆದ ರಾಗಿ ಕಾಫಿ; ನಿಮ್ಮ ದಿನದ ಹೊಸ ಎನರ್ಜಿ ಡ್ರಿಂಕ್ ಒಮ್ಮೆ ಟ್ರೈ ಮಾಡಿ

    ರಾಗಿ ಕಾಫಿ ಎಂಬ ಹೆಸರನ್ನು ಕೇಳಿದ ತಕ್ಷಣ ನಿಮ್ಮಲ್ಲಿ ಕುತೂಹಲ ಮೂಡಬಹುದು ಇದು ಏನು ವಿಶಿಷ್ಟವಾಗಿದೆ? ಅಥವಾ ಇದನ್ನೊಮ್ಮೆ ಟ್ರೈ ಮಾಡ್ಬೇಕು ಅನಿಸುತ್ತೆ! ಎಂಬ ಯೋಚನೆ ಬರಬಹುದು.
    ಈ ರಾಗಿ ಕಾಫಿ ಕಾಣಲು ಆಕರ್ಷಕವಾಗಿದ್ದು, ಕೇವಲ 5 ನಿಮಿಷಗಳಲ್ಲಿ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಇದನ್ನು ಒಂದೊಮ್ಮೆ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೂ ಲಾಭ, ಬಾಯಿಗೂ ರುಚಿ!ಕಾಫಿ ಪ್ರಿಯರು ಖಂಡಿತ ಈ ಹೆಲ್ತಿ ಆಯ್ಕೆಯನ್ನು ಒಮ್ಮೆಯಾದರೂ ಟ್ರೈ ಮಾಡಲೇಬೇಕು.ರಾಗಿ ಕಾಫಿ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ, ವಿಶೇಷವಾಗಿ ಮಧುಮೇಹ ರೋಗಿಗಳಿಗಾಗಿ ಇದು ತುಂಬಾ ಉಪಯುಕ್ತವಾಗಿದೆ. ಇದರಲ್ಲಿ ಇರುವ ಪಾಲಿಫಿನಾಲ್ಗಳು ಮತ್ತು ನಾರಿನಾಂಶ ದೇಹದ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತವೆ. ರಾಗಿ ಕಾಫಿ ಕುಡಿಯುವುದರಿಂದ ದೇಹದ ತೂಕವನ್ನು ನಿಯಂತ್ರಿಸಲು ಸಹಾಯವಾಗುತ್ತದೆ, ಏಕೆಂದರೆ ಇದು ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ ಮತ್ತು ಹಸಿವನ್ನು ಕಡಿಮೆ ಮಾಡುತ್ತದೆ,ರಾಗಿ ಕಾಫಿ ಒಂದು ಆರೋಗ್ಯಕರ, ಪೌಷ್ಟಿಕತೆಯುತ ಮತ್ತು ಸುಲಭವಾಗಿ ತಯಾರಿಸಬಹುದಾದ ಪಾನೀಯವಾಗಿದ್ದು, ಇದನ್ನು ಪ್ರತಿದಿನದ ಆಹಾರಕ್ರಮದಲ್ಲಿ ಸೇರಿಸುವುದು ಆರೋಗ್ಯಕ್ಕೆ ಬಹುಮುಖ್ಯವಾಗಿದೆ ಯಾರೆಲ್ಲಾ ಬಾಡಿ ಹೀಟ್ ಆಗುತ್ತದೆ ಎಂಬ ಕಾರಣದಿಂದ ಕಾಫಿಯನ್ನು ಬಿಟ್ಟುಬಿಟ್ಟಿದ್ದೀರೋ, ಅವರಿಗೂ ಇದು ಒಳ್ಳೆಯ ಪರ್ಯಾಯ ಮಾರ್ಗ.ನೀವೂ ಕಾಫಿ ಪ್ರಿಯರಾಗಿದ್ದಲ್ಲಿ ರಾಗಿ ಕಾಫಿ ಒಮ್ಮೆ ಟ್ರೈ ಮಾಡಿ ತುಂಬಾ ಚೆನ್ನಾಗಿರುತ್ತದೆ.

    Advertisement

    ರಾಗಿ ಕಾಫಿ ಬೇಕಾಗುವ ಪದಾರ್ಥಗಳು:

    ರಾಗಿ ಹಿಟ್ಟು – 1 ಟೀಸ್ಪೂನ್

    ನೀರು – 1 ಕಪ್

    ಹಾಲು – ½ ಕಪ್ (ಐಚ್ಛಿಕ)

    ಇನ್‌ಸ್ಟಂಟ್ ಕಾಫಿ ಪುಡಿ – 1 ಟೀಸ್ಪೂನ್

    ಬೆಲ್ಲ ಅಥವಾ ನಾಟಿ ಸಕ್ಕರೆ – ರುಚಿಗೆ ತಕ್ಕಷ್ಟು

    ಏಲಕ್ಕಿ ಪುಡಿ – ಚಿಟಿಕೆ (ಐಚ್ಛಿಕ)

    ತಯಾರಿಸುವ ವಿಧಾನ:

    ಒಂದು ಪಾತ್ರೆಯಲ್ಲಿ 1-2 ಟೀಸ್ಪೂನ್ ರಾಗಿ ಹಿಟ್ಟು ಮತ್ತು ಸ್ವಲ್ಪ ನೀರು ಅಥವಾ ಹಾಲು ಸೇರಿಸಿ ಚೆನ್ನಾಗಿ ಕಲಸಿ.

    ಇದನ್ನು ಮಧ್ಯಮ ಉರಿಯಲ್ಲಿ ಇಟ್ಟು, ನಿರಂತರವಾಗಿ ಕದಡಿ .ಮಿಶ್ರಣ ಗಟ್ಟಿಯಾಗುತ್ತಿದ್ದಂತೆ, ಬೇಕಾದಷ್ಟು ಹಾಲು ಅಥವಾ ನೀರು ಸೇರಿಸಿ, ಸಕ್ಕರೆ ಅಥವಾ ಬೆಲ್ಲ ಹಾಕಿ ಕರಗುವವರೆಗೆ ಕುದಿಸಿ.

    ಐಚ್ಛಿಕವಾಗಿ ಸ್ವಲ್ಪ ಏಲಕ್ಕಿ ಪುಡಿ ಮತ್ತು ಕಾಫಿ ಪುಡಿ ಸೇರಿಸಬಹುದು.ಕೊನೆಗೆ ಸ್ವಲ್ಪ ಉಪ್ಪು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ.ರಾಗಿ ಕಾಫಿ ಸಿದ್ಧ. ಇದನ್ನು ಬಿಸಿ ಅಥವಾ ತಣ್ಣಗೆ ಕುಡಿಯಬಹುದು.

    ಅದು ಕರಗಿದ ನಂತರ ಬಿಸಿಯಾಗಿರುವಾಗಲೇ ಒಂದು ಬೌಲ್‌ನಲ್ಲಿ ಹಾಕಿಕೊಂಡು ಸ್ಪೂನ್‌ನಲ್ಲಿ ಅಥವಾ ನೇರವಾಗಿ ಇದನ್ನು ನೀವು ಕುಡಿಯಬಹುದು. ಇದು ನಾರ್ಮಲ್ ಕಾಫಿಗಿಂತ ಸ್ವಲ್ಪ ದಪ್ಪವಾಗಿರುತ್ತದೆ.ಬಿಸಿ ಇಷ್ಟವಿಲ್ಲ ಎಂದಾದರೆ ನೀವು ಇದನ್ನು ಫ್ರಿಜ್‌ನಲ್ಲಿಟ್ಟು ತಣಿಸಿ ಕೂಡ ಕುಡಿಯಬಹುದು.

    Green Coffee: ತೂಕ ಇಳಿಸಲು ಗ್ರೀನ್ ಟೀ ಅಲ್ಲ ಈ ಗ್ರೀನ್ ಕಾಫಿ ಸಾಕು! ವಾರದೊಳಗೆ ಸ್ಲಿಮ್ ಆಗುವುದು ಗ್ಯಾರಂಟಿ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading