ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ( bjp ) ಎಲ್ಲವೂ ಸರಿಯಿಲ್ಲ ಎಂಬ ಚರ್ಚೆಗಳು ಈ ಹಿಂದಿನಿಂದಲೂ ಸತತವಾಗಿ ನಡೆಯುತ್ತಲೇ ಬರುತ್ತಿವೆ. ಅದರಲ್ಲಿಯೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ ನೇಮಕವಾದಾಗಿನಿಂದ ಆಂತರಿಕ ಭಿನ್ನಮತ ಉಂಟಾಗಿರುವುದು ಸುಳ್ಳಲ್ಲ.
ಅದರ ಫಲವಾಗಿಯೇ ಶಾಸಕರ ಉಚ್ಚಾಟನೆಗಳು ಸಂಭವಿಸಿದ್ದು, ಹೀಗಿದ್ದರೂ ಸಹ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತ ಮಾತುಗಳು ಕೇಳಿಬರುವುದು ನಿಂತಿಲ್ಲ.
ಈ ಚಟುವಟಿಕೆಗಳ ಕುರಿತು ನಿನ್ನೆ ( ಜೂನ್ 25 ) ಪಕ್ಷದ ಹಿರಿಯ ನಾಯಕ ಸದಾನಂದ ಗೌಡ ಮಾತನಾಡಿ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹ ಇರುವುದು ನಿಜ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಇಂದು ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಸದಾನಂದ ಗೌಡರು ಹಿರಿಯರಿದ್ದಾರೆ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ಮಾಡುತ್ತೇನೆ ಎಂದರು. ಅಲ್ಲದೇ ಬೂದಿ ಮುಚ್ಚಿದ ಕೆಂಡದ ಥರ ಇದೆ ಎನ್ನುವ ಹೇಳಿಕೆಯನ್ನು ನಾನು ಒಪ್ಪಿಕೊಳ್ಳುವುದಿಲ್ಲ, ಪ್ರತಿ ಪಕ್ಷದಲ್ಲೂ ಸಣ್ಣ ಅಭಿಪ್ರಾಯಗಳು ಬೇರೆ ಇರುವುದು ಸಹಜ ಎಂದರು. ಇನ್ನು ಕರ್ನಾಟಕ ಮಾತ್ರವಲ್ಲ ಎಲ್ಲೆಡೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗುತ್ತಿದೆ, ಹೀಗಾಗಿ ಅಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಕೇರಳದ ವಯನಾಡಿನಲ್ಲಿ ಧಾರಾಕಾರ ಮಳೆ: ಕಬಿನಿ ಜಲಾಶಯಕ್ಕೆ ಮತ್ತೆ ಹೆಚ್ಚಿದ ಒಳಹರಿವು
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


