ಬೆಂಗಳೂರು: ರಾಜ್ಯ ಬಿಜೆಪಿ ( bjp ) ನಾಯಕರ ದೆಹಲಿ ಪ್ರವಾಸ ಜೋರಾಗಿದ್ದು, ಒಬ್ಬರಿಂದೊಬ್ಬರು ದೆಹಲಿಗೆ ಹೋಗಿ ಬರುತ್ತಿದ್ದಾರೆ. ಹೀಗೆ ನಾಯಕರ ದೆಹಲಿ ಟ್ರಿಪ್ ಕಂಡು ರಾಜಕೀಯ ವಲಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿವೆ ಎಂಬ ಚರ್ಚೆಗಳು ಕೇಳಿಬರುತ್ತಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಹ ಇತ್ತೀಚೆಗೆ ದೆಹಲಿಗೆ ಹೋಗಿ ಬಂದಿದ್ದು, ಸದ್ಯ ಅವರೂ ಸಹ ದೆಹಲಿ ಪ್ರವಾಸದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ವೈಯಕ್ತಿಕ ಕೆಲಸಗಳಿಗಾಗಿ ದೆಹಲಿಗೆ ಹೋಗಿದ್ದೆ, ಯಾವುದೇ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.
ಇಷ್ಟು ಬಿಟ್ಟರೆ ಬೇರೇನೂ ಇಲ್ಲ, ಆದರೆ ಇದನ್ನೇ ಇಟ್ಟುಕೊಂಡು ಭಾರೀ ಬೆಳವಣಿಗೆಗಳು ಆಗುತ್ತಿವೆ ಎನ್ನುತ್ತಾರೆ, ಹಾಗೇನೂ ಇಲ್ಲ ಎಲ್ಲವೂಬ ಕಲ್ಪನೆಗಳಷ್ಟೆ ಎಂದರು. ಅಲ್ಲದೇ ಆರ್ ಅಶೋಕ್ ದೆಹಲಿಗೆ ತೆರಳಿದ್ದರ ಕುರಿತು ಅವರು ವಿರೋಧ ಪಕ್ಷದ ನಾಯಕರು ಅವರು ದೆಹಲಿಗೆ ಹೋಬಾರದು ಎಂದು ಇದೆಯಾ ಎಂದು ಕಿಡಿಕಾರಿದರು.
ಇನ್ನು ವಿರೋಧ ಪಕ್ಷದ ನಾಯಕರ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ ಆರ್ ಅಶೋಕ್ ವಿರೋಧ ಪಕ್ಷದ ನಾಯಕರಾಗಿ ಬಹಳ ಪರಿಣಾಮಕಾರಿಯಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಅದರ ತೃಪ್ತಿ ಶಾಸಕರಿಗೂ ಸಹ ಇದೆ. ಆದರೆ ಮಾಧ್ಯಮಗಳಲ್ಲಿ ವಿರೋಧ ಪಕ್ಷದ ನಾಯಕರ ಬದಲಾವಣೆಯಾಗುತ್ತೆ ಎಂದು ನಡೆಯುತ್ತಿರುವ ಚರ್ಚೆಗಳು ಸರಿಯಲ್ಲ ಎಂದರು.
ಎಐ ಅಡ್ವೋಕೇಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ 2 ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆ; ಕೆಎನ್ ರಾಜಣ್ಣ ಸ್ಪೋಟಕ ಹೇಳಿಕೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


