ನಟ ದರ್ಶನ್ ಚಿತ್ರದುರ್ಗದ ತನ್ನದೇ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದು, ಸದ್ಯ ಜಾಮೀನು ಪಡೆದು ಹೊರಬಂದಿದ್ದಾರೆ.
ಇಂದಷ್ಟೇ ಥೈಲ್ಯಾಂಡ್ನಲ್ಲಿ ಡೆವಿಲ್ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಬಂದಿರುವ ದರ್ಶನ್ ಎದೆಯಲ್ಲಿ ಸದ್ಯ ಸುಪ್ರೀಂ ಕೋರ್ಟ್ ಎಲ್ಲಿ ತನ್ನ ಜಾಮೀನನ್ನು ರದ್ದು ಮಾಡಲಿದೆಯೋ ಎಂಬ ಭಯ ಶುರುವಾಗಿದೆ.
ಹೀಗಿರುವಾಗ ಸುಮ್ಮನಿರದ ದರ್ಶನ್ ಅಭಿಮಾನಿಗಳು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದ ನಟಿ ರಮ್ಯಾ ಇನ್ಸ್ಟಾಗ್ರಾಮ್ ಖಾತೆಗೆ ಹೋಗಿ ತಮ್ಮ ವರಸೆ ತೋರಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿದ್ದು, ʼಎಲ್ಲ ಡಿ ಬಾಸ್ ಅಭಿಮಾನಿಗಳಿಗೂ ನನ್ನ ಇನ್ಸ್ಟಾಗ್ರಾಮ್ಗೆ ಸ್ವಾಗತ. ರೇಣುಕಾಸ್ವಾಮಿ ಕುಟುಂಬಕ್ಕೆ ಏಕೆ ನ್ಯಾಯ ಸಿಗಬೇಕು ಎನ್ನುವುದಕ್ಕೆ ನಿಮ್ಮ ಕಾಮೆಂಟ್ಗಳೇ ಸಾಕ್ಷಿʼ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಿಮ್ಮ ನಟ ಜೈಲಿಗೆ ಹೋಗಬೇಕು ಎಂದು ನಟಿ ರಮ್ಯಾ ದರ್ಶನ್ ಫ್ಯಾನ್ಸ್ ಮುಖಕ್ಕೆ ಹೊಡೆದ ಹಾಗೆ ಸ್ಟೋರಿ ಬರೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಎದ್ದಿದೆ ʼಸು ಫ್ರಮ್ ಸೋʼ ಸುನಾಮಿ; ಮಿತಿಮೀರಿದ ಬೇಡಿಕೆಗೆ ನಾಳೆ ಮುಂಜಾನೆಯೂ ಪ್ರದರ್ಶನ, ಸೋಲ್ಡ್ಔಟ್!
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


