ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸಕ್ತ ವರ್ಷದ ಅಮೆರಿಕ ಮತ್ತು ಫ್ರಾನ್ಸ್ ಸೇರಿದಂತೆ ಐದು ರಾಷ್ಟ್ರಗಳ ಪ್ರವಾಸಕ್ಕೆ 67 ಕೋಟಿ ರೂ. ವೆಚ್ಚವಾಗಿದೆ.
2021ರಿಂದ 2025ರ ಅವಧಿಯಲ್ಲಿ ಪ್ರಧಾನಿ ಅವರು ಕೈಗೊಂಡ ವಿದೇಶಿ ಪ್ರವಾಸದ ಒಟ್ಟು ವೆಚ್ಚ 362 ಕೋಟಿ ರೂ. ತಗುಲಿದೆ ಎಂದು ಕೇಂದ್ರ ಸರ್ಕಾರದ ದತ್ತಾಂಶದಲ್ಲಿ ಪ್ರಕಟಿಸಲಾಗಿದೆ.
ರಾಜ್ಯಸಭೆಯಲ್ಲಿ ಟಿಎಂಸಿ ಸಂಸದ ಡಿರೆಕ್ ಒ ಬ್ರಿಯಾನ್ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಸಚಿವ ಕೀರ್ತಿ ವರ್ಧನ ಸಿಂಗ್, ಪ್ರಧಾನಿ ಮೋದಿ ಈ ವರ್ಷ ಕೈಗೊಂಡ ಫ್ರಾನ್ಸ್ ಪ್ರವಾಸಕ್ಕೆ 25 ಕೋಟಿ ರೂ ಖರ್ಚಾಗಿದೆ. ಆದರೆ ಮಾರಿಷಿಯಸ್, ಸೈಪ್ರಸ್ ಮತ್ತು ಕೆನಡಾ ದೇಶಗಳ ಭೇಟಿಗಳ ಸಂಬಂಧಿಸಿದಂತೆ ಪ್ರವಾಸ ವೆಚ್ಚದ ಮಾಹಿತಿ ಲಭ್ಯವಿಲ್ಲ ಎಂದು ಹೇಳಿದರು.
ದೇವರಾಜ ಅರಸು, ಎಸ್.ಎಂ ಕೃಷ್ಣ ಆಡಳಿತಕ್ಕೂ ಸಿದ್ದರಾಮಯ್ಯ ಆಡಳಿತ ಸಮವಿಲ್ಲ: ಎಂಎಲ್ಸಿ ಎಚ್ ವಿಶ್ವನಾಥ್
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


