ಬೆಂಗಳೂರು: ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ 5 ಐರಾವತ ಕ್ಲಬ್ ಕ್ಲಾಸ್ ವಾಹನಗಳು ನಿನ್ನೆ ( ಜುಲೈ 25 ) ಅಧಿಕೃತವಾಗಿ ಕೆಎಸ್ಆರ್ಟಿಸಿಗೆ ಸೇರ್ಪಡೆಯಾಗಿವೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹಸಿರು ನಿಶಾನೆ ತೋರಿದ ಈ ಬಸ್ಗಳು ಬೆಂಗಳೂರು-ತಿರುಪತಿ, ಮಂಗಳೂರು-ಬೆಂಗಳೂರು-02 ಹಾಗೂ ಮೈಸೂರು-ಮಂತ್ರಾಲಯ-02 ಮಾರ್ಗಗಳಲ್ಲಿ ಪ್ರಯಾಣಿಕರ ಸಂಚಾರಕ್ಕೆ ಲಭ್ಯವಿರಲಿವೆ.
ಏನಿದರ ವಿಶೇಷತೆ?
- 15 ಮೀಟರ್ ಉದ್ದವಿದ್ದು 51 ಆಸನಗಳು 2/2 ಸಂರಚನೆ ಹೊಂದಿರುತ್ತವೆ.
- ಶಕ್ತಿಯುತ ಹಾಲೋಟನ್ ಹೆಡ್ಲೈಟ್ ಮತ್ತು ಡೇಟೈಮ್ ರನ್ನಿಂಗ್ ಲೈಟ್ಸ್
- ವಾಯುಗತಿ ಶಾಸ್ತ್ರದ ವಿನ್ಯಾಸವು ಉತ್ತಮ ಇಂಧನ ದಕ್ಷತೆ ಒಳಗೊಂಡಿದೆ
- ನೂತನ ಆವಿಷ್ಠಾರದ ಎಂಜಿನ್ ಸುಧಾರಿತ ಇಂಧನ ದಕ್ಷತೆ ಹೊಂದಿರುತ್ತದೆ
- ವಿಶಾಲ ಒಳಾವರಣ. ಎತ್ತರದಲ್ಲಿ ಶೇ.5.6 ಏಲಿಕೆ, ಆರಾಮದಾಯಕ ಪ್ರಯಾಣ
- ಹಳೆಯ ಬಸ್ಗಿಂತ 20%ನಷ್ಟು ಹೆಚ್ಚು ಸಾಮರ್ಥ್ಯದ ದೊಡ್ಡ ಲಗೇಜ್ ಸ್ಥಳ
- ಮೊಬೈಲ್ ಚಾರ್ಚಿಂಗ್ ಪಾಯಿಂಟ್, ಯುಎಸ್ಬಿ ವ್ಯವಸ್ಥೆ ಹೊಂದಿಸಲಾಗಿದೆ
- ಆತ್ಯಾಧುನಿಕ ಮತ್ತು ದೊಡ್ಡದಾದ ಹವಾನಿಯಂತ್ರಿತ ಏರ್ ಡಕ್ಟ್ ವ್ಯವಸ್ಥೆ,
- ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಫೈರ್ ಅಲಾರ್ಮ್
- ಬೆಂಕಿ ಅಪಘಾತಗಳ ಸಂದರ್ಭದಲ್ಲಿ ನೀರನ್ನು ಸಿಂಪಡಿಸಲು ಪೈಪುಗಳು
ಕರ್ನಾಟಕದಲ್ಲಿ ಎದ್ದಿದೆ ʼಸು ಫ್ರಮ್ ಸೋʼ ಸುನಾಮಿ; ಮಿತಿಮೀರಿದ ಬೇಡಿಕೆಗೆ ನಾಳೆ ಮುಂಜಾನೆಯೂ ಪ್ರದರ್ಶನ, ಸೋಲ್ಡ್ಔಟ್!
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


