ನೆಲಮಂಗಲ: ಬೆಂಗಳೂರಿನಿಂದ ನೆಲಮಂಗಲಕ್ಕೆ ಬಿಎಂಟಿಸಿ ಬಸ್ ಮೂಲಕ ಪ್ರಯಾಣಿಸಿ ಇನ್ನೇನು ಬಸ್ ನಿಲ್ದಾಣದಲ್ಲಿ ಬಸ್‌ನಿಂದ ಕೆಳಗಿಳಿಯಬೇಕಿದ್ದ ಯುವಕನೋರ್ವ ಕೂತಲ್ಲಿಯೇ ಹೃದಯಾಘಾತದಿಂದ ಮೃತನಾಗಿರುವ ಘಟನೆ ಸಂಭವಿಸಿದೆ.
ಹೃದಯಾಘಾತಕ್ಕೊಳಗಾದ ಯುವಕನನ್ನು ಕಿರಣ್ (25) ಎಂದು ಗುರುತಿಸಲಾಗಿದ್ದು ಈತನು ತುಮಕೂರು ಜಿಲ್ಲೆಯ ಗುಬ್ಬಿ ಸನಿಹದ ಕೆ.ಜಿ.ಟೆಂಪಲ್ ನಿವಾಸಿಯಾಗಿದ್ದಾನೆ. ತನ್ನ ಸಂಬಂಧಿಕರ ಮನೆಗೆ ಬೆಂಗಳೂರಿನ ಬನಶಂಕರಿಗೆ ಕಳೆದ ಎರಡು ದಿನಗಳ ಹಿಂದೆ ಹೋಗಿದ್ದ ಎನ್ನಲಾಗಿದೆ.
ಆದರೆ ತನ್ನ ಊಳರಿಗೆ ಹೋಗುವ ಸಲುವಾಗಿ ನಗರದ ನಾಗಸಂದ್ರದವರೆಗೂ ಮೆಟ್ರೋದ ಮೂಲಕ ಪ್ರಯಾಣಿಸಿದ್ದ, ನಾಗಸಂದ್ರದಿಂದ ನೆಲಮಂಗಲಕ್ಕೆ ಬಿಎಂಟಿಸಿ ಬಸ್ ಮೂಲಕ ಪ್ರಯಾಣಿಸುತ್ತಿದ್ದ ಈ ಹಂತದಲ್ಲಿ ನೆಲಮಂಗಲ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರುಗಳು ಇಳಿದುಕೊಳ್ಳಲು ಕಂಡಾಕ್ಟರ್ ತಿಳಿಸಿದ್ದು ಎಲ್ಲರೂ ಇಳಿದರೂ ಈತನು ಮಾತ್ರ ಸೀಟಿನಲ್ಲಿ ಕುಳಿತಿರುವುದನ್ನು ಗಮನಿಸಿದ ಕಂಡಾಕ್ಟರ್ ಆತನ ಸನಿಹ ಹೋಗಿ ನೋಡಲು ಆತ ಮೃತಪಟ್ಟಿದ್ದನೆನ್ನಲಾಗಿದೆ.
ತತಕ್ಷಣ ಚಾಲಕನಿಗೆ ತಿಳಿಸಿ ಸರ್ಕಾರಿ ಆಸ್ಪತ್ರೆಗೆ ಬಸ್ಸಿನಲ್ಲಿಯೇ ಕರೆದೊಯ್ದು ದಾಖಲು ಮಾಡಲಾಯಿತು. ಪರೀಕ್ಷಿಸಿದ ವೈದ್ಯರು ಆತನು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಸಂಬಂಧ ನೆಲಮಂಗಲ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮವಹಿಸಿದ್ದಾರೆ.
ಕಳೆದ 4 ವರ್ಷದಲ್ಲಿ ಮೋದಿ ವಿದೇಶ ಪ್ರಯಾಣದ ಖರ್ಚು ಬರೋಬ್ಬರಿ 362 ಕೋಟಿ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


