ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ ಪ್ರಕರಣದ ಕುರಿತು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ತನಿಖೆ ಆರಂಭಿಸಿದ್ದು, ಸದ್ಯ ದೂರು ನೀಡಿದ್ದ ಸಾಕ್ಷಿ ದೂರುದಾರ ಎಸ್ಐಟಿ ತನಿಖೆಗೆ ಹಾಜರಾಗಿದ್ದಾನೆ.
ಕದ್ರಿಯ ಲೋಕೋಪಯೋಗಿ ತನಿಖಾಧಿಕಾರಿಗಳ ಬಂಗಲೆಯಲ್ಲಿ ಎಸ್ಐಟಿ ತನಿಖಾಧಿಕಾರಿಗಳು ಬೀಡುಬಿಟ್ಟಿದ್ದು, ಅದೇ ಸ್ಥಳಕ್ಕೆ ತನ್ನ ವಕೀಲರ ಜತೆ ದೂರು ಕೊಟ್ಟಿದ್ದ ಅನಾಮಧೇಯ ವ್ಯಕ್ತಿ ಆಗಮಿಸಿದ್ದಾನೆ.
ಈ ಮೂಲಕ ಧರ್ಮಸ್ಥಳ ಸರಣಿ ಕೊಲೆ ಕೇಸ್ನ ತನಿಖೆ ಆರಂಭಗೊಳ್ಳುತ್ತಿದ್ದು ಏನೆಲ್ಲ ಅಂಶ ಬೆಳಕಿಗೆ ಬರಲಿವೆ, ಹೂತಿಟ್ಟ ಅಸ್ತಿಪಂಜರಗಳು ಸಿಗುತ್ತವಾ ಅಥವಾ ಇಲ್ಲವಾ ಎಂಬ ಪ್ರಶ್ನೆ ಹಾಗೂ ಕುತೂಹಲ ಎದ್ದಿದೆ.
ಇನ್ನು ದೂರು ಕೊಟ್ಟ ಅನಾಮಧೇಯ ವ್ಯಕ್ತಿ ಈ ಹಿಂದೆ ಇದೇ ಧರ್ಮಸ್ಥಳದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ. ಆ ವೇಳೆ ಧರ್ಮಸ್ಥಳದಲ್ಲಿ ನಡೆದ ನೂರಾರು ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಶವಗಳನ್ನು ಒತ್ತಾಯದ ಮೇರೆಗೆ ಹೂತಿಟ್ಟಿದ್ದೆ ಎಂದು ಹೇಳಿಕೊಂಡಿದ್ದ. ಅಲ್ಲದೇ ತಾನು ಹೂತಿಟ್ಟಿದ್ದ ಜಾಗವನ್ನು ತೋರಿಸುವುದಾಗಿ ದೂರನ್ನೂ ಸಹ ನೀಡಿದ್ದ.
ಜುಲೈ 11ರಂದು ದೂರು ನೀಡಿದ ಬಳಿಕ ಜುಲೈ 16ರಂದು ತನಿಖೆ ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ಬಂದು ಬರಿಗೈನಲ್ಲಿ ಹಿಂದಿರುಗಿದ್ದ ದೂರುದಾರ ಇಷ್ಟು ದಿನಗಳ ಕಾಲ ಭದ್ರತೆಯ ದೃಷ್ಟಿಯಿಂದ ಕೇರಳದಲ್ಲಿ ಉಳಿದುಕೊಂಡಿದ್ದ.
ಎರಡೇ ದಿನಕ್ಕೆ ಮುಗ್ಗರಿಸಿದ ಪವನ್ ʼಹರಿಹರ ವೀರಮಲ್ಲುʼ; ಶೋ ಕಿತ್ತುಕೊಂಡ ಕನ್ನಡದ ಹೊಸಬರ ಚಿತ್ರ!
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


