ಬೆಂಗಳೂರು: ಆಹಾರದ ,ಗುಣಮಟ್ಟ ಕಾಪಾಡುವ ದೃಷ್ಟಿಯಿಂದ ಭಾರತೀಯ ಆಹಾರ ಸುರಕ್ಷತೆ ಪ್ರಾಧಿಕಾರ ಆಗಾಗ ನಗರದ ಹೊಟೇಲ್‌ಗಳ ಆಹಾರಗಳನ್ನು ಪರೀಕ್ಷೆಗೊಳಪಡಿಸುತ್ತಾ ಇರುತ್ತದೆ.
ಇದೀಗ ಅಂತಹ ಪರೀಕ್ಷೆಯಲ್ಲಿ ಬೆಂಗಳೂರಿನ ಜನಪ್ರಿಯ ಎಂಪೈರ್ ಹೊಟೇಲ್‌ನ ಕಬಾಬ್ ಅಸುರಕ್ಷಿತ ಎಂಬ ಮಾಹಿತಿ ಹೊರಬಿದ್ದಿದ್ದು, ಆಹಾರ ಅಸುರಕ್ಷಿತ ಎಂಬುದು ಸಾಬೀತಾಗುತ್ತಿದ್ದಂತೆ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಇನ್ನು ಬೆಂಗಳೂರಿನ ಆರು ಎಂಪೈರ್ ಬ್ರಾಂಚ್‌ಗಳಲ್ಲಿ ಕಬಾಬ್ ಅಸುರಕ್ಷಿತ ಎಂಬುದು ದೃಢಪಟ್ಟಿದೆ. ಶಿವಾಜಿನಗರ, ಬಸವನಗುಡಿ, ಮಹದೇವಪುರ, ಹೆಬ್ಬಾಳ, ಬೊಮ್ಮನಹಳ್ಳಿ ಎಂಪೈರ್ ಹೊಟೇಲ್‌ಗಳಿಗೆ ಈ ಕುರಿತು ನೋಟಿಸ್ ನೀಡಲಾಗಿದೆ. ಅಸುರಕ್ಷತೆ ಬಗ್ಗೆ ಪ್ರತಿಕ್ರಿಯೆ ಕೇಳಿರುವ ಅಧಿಕಾರಿಗಳು 30 ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ.
ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನಲ್ಲಿ ‘ಸೆಪ್ಟೆಂಬರ್ 10’ ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


