Wednesday, November 4, 2026
spot_img
More
    spot_img
    HomeLatest newsಮೈಸೂರಿಗೆ ಮಹಾರಾಜರಿಗಿಂತ ಸಿದ್ದರಾಮಯ್ಯ ಕೊಡುಗೆ ಜಾಸ್ತಿ ಎಂದ ಯತೀಂದ್ರಗೆ ʼHM' ಎಂದು ಬೈದ ವಿಶ್ವನಾಥ್‌

    ಮೈಸೂರಿಗೆ ಮಹಾರಾಜರಿಗಿಂತ ಸಿದ್ದರಾಮಯ್ಯ ಕೊಡುಗೆ ಜಾಸ್ತಿ ಎಂದ ಯತೀಂದ್ರಗೆ ʼHM’ ಎಂದು ಬೈದ ವಿಶ್ವನಾಥ್‌

    ಮೈಸೂರು: ನಗರದಲ್ಲಿ ಕಾಂಗ್ರೆಸ್‌ ಸರ್ಕಾರ ನಡೆಸಿದ ಸಾಧನಾ ಸಮಾವೇಶದ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಸಿದ್ದರಾಮಯ್ಯ ಪುತ್ರ, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಮೈಸೂರು ಮಹಾರಾಜರನ್ನು ಉಲ್ಲೇಖಿಸುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

    ಮೈಸೂರಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೊಟ್ಟಂತಹ ಅನುದಾನಗಳನ್ನು ಬಿಟ್ಟರೆ ಇನ್ಯಾವ ಅನುದಾನಗಳೂ ಸಹ ಬಂದಿಲ್ಲ. ಹಾಗಾಗಿ ನಾಲ್ವಡಿ ಕೃಷ್ಣರಾಜ್‌ ಒಡೆಯರ್‌ ಮೈಸೂರಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಅದಕ್ಕಿಂತ ಹೆಚ್ಚು ಅಥವಾ ಅದರಷ್ಟೇ ಕೊಡುಗೆಯನ್ನು ನಮ್ಮ ಸರ್ಕಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕೊಟ್ಟಿದೆ. ಹಾಗಾಗಿ ಸಾಧನಾ ಸಮಾವೇಶದ ಕುರಿತು ವಿಪಕ್ಷಗಳು ಮಾಡುವುದು ಬರೀ ಟೊಳ್ಳು ಟೀಕೆ ಎಂದಿದ್ದರು.

    ಈ ಹೇಳಿಕೆ ಬಗ್ಗೆ ಇದೀಗ ಎಚ್‌ ವಿಶ್ವನಾಥ್‌ ಪ್ರತಿಕ್ರಿಯೆ ನೀಡಿದ್ದು, ಯತೀಂದ್ರ ವಿರುದ್ಧ ಹರಿಹಾಯ್ದಿದ್ದಾರೆ. ಅವರ ಅಪ್ಪ ನೋಡಿದರೆ ನಾನು ದೇವರಾಜ ಅರಸ್‌ಗಿಂತ ದೊಡ್ಡವನು ಎನ್ನುತ್ತಾನೆ. ಐದು ಕೆಜಿ ಅಕ್ಕಿ ಕೊಟ್ಟುಬಿಟ್ಟರೆ ದೇವರಾಜ್‌ ಅರಸ್‌ ಆಗಿಬಿಡ್ತಾರಾ? ಈತ ನೋಡಿದರೆ ಮಹಾರಾಜರಿಗಿಂತ ನಮ್ಮ ಕೊಡುಗೆ ಹೆಚ್ಚು ಎನ್ನುತ್ತಾನೆ. ಆತನಿಗೆ ಅಹಂಕಾರ ಎನ್ನುವುದು ರಕ್ತದಲ್ಲೇ ಬಂದುಬಿಟ್ಟಿದೆ. ಅವರ ಕುಟುಂಬದಲ್ಲೇ ಅದು ಇದೆ. ಅವರು ಬರುತ್ತಾ ಮನುಷ್ಯ ವಿರೋಧಿಗಳಾಗುತ್ತಿದ್ದಾರೆ ಎಂದು ಕಿಡಿಕಾರಿದರು. ಅಲ್ಲದೇ ಈ ರೀತಿಯ ಹೇಳಿಕೆಗಳನ್ನು ನೀಡುವವರನ್ನು ನಮ್ಮ ಮೈಸೂರಿನ ಆಡು ಭಾಷೆಯಲ್ಲಿ ಎಚ್‌ಎಂ ಅಂತೀವಿ… ಹುಚ್‌ ಮುಂಡೇದು ಅಂತ ಎಂದು ವಿಶ್ವನಾಥ್‌ ಟಾಂಗ್‌ ಕೊಟ್ಟಿದ್ದಾರೆ.

    ಎರಡೇ ದಿನಕ್ಕೆ ಮುಗ್ಗರಿಸಿದ ಪವನ್‌ ʼಹರಿಹರ ವೀರಮಲ್ಲುʼ; ಶೋ ಕಿತ್ತುಕೊಂಡ ಕನ್ನಡದ ಹೊಸಬರ ಚಿತ್ರ!

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search