ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿದ್ದಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಮುಸುಕುದಾರಿ ಸಿ.ಎನ್. ಚಿನ್ನಯ್ಯ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿರುವ ಮಾಹಿತಿ ತಿಳಿದು ಬಂದಿದ್ದು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾನೆಂದು ಕೇಳಿ ಬಂದಿವೆ.
ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದವನಾಗಿರುವ ಚಿನ್ನಯ್ಯ ಎರಡು ಮದುವೆಗಳನ್ನಾಗಿದ್ದು, ಮೊದಲನೇ ಪತ್ನಿ ರತ್ನಮ ಮಂಡ್ಯದವರಾಗಿದ್ದು, ಎರಡನೇ ಪತ್ನಿ ಮಲ್ಲಿಗೆ ತಮಿಳುನಾಡಿನ ಸತ್ಯಮಂಗಲ ಬಳಿಯ ಚಿಕ್ಕರಸಂಪಾಳ್ಯದವರು ಎಂದು ಹೇಳಲಾಗಿದೆ.
ಎರಡನೇ ಪತ್ನಿಯ ಮನೆಯಲ್ಲಿದ್ದ ಚಿನ್ನಯ್ಯ, ಅದೇ ಗ್ರಾಮದಲ್ಲಿ ನಿರ್ಮಿಸಲಾಗಿರುವ ಚರ್ಚಿಗೆ ಭೇಟಿ ನೀಡುತ್ತಿದ್ದ ಮತ್ತು ಸತ್ಯಮಂಗಳದ ಚರ್ಚಿಗೂ ಭೇಟಿ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಚರ್ಚಿನ ಫಾದರ್ ಕೂಡ ಖಚಿತಪಡಿಸಿದ್ದು ಚಿನ್ನಯ್ನ ತಮ ಚರ್ಚಿಗೆ ಭೇಟಿ ನೀಡುತ್ತಿದ್ದರು ಎಂದು ಖಚಿತಪಡಿಸಿದ್ದಾರೆ. ಅದೇ ಗ್ರಾಮದ ಜನರು ಕೂಡ ಚಿನ್ನಯ್ಯ ಚರ್ಚಿಗೆ ಬರುತ್ತಿದ್ದುದ್ದನ್ನು ಖಚಿತಪಡಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


