ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ಚೆನ್ನಯ್ಯನನ್ನು ಅರೆಸ್ಟ್ ಮಾಡಿ ತೀವ್ರ ತನಿಖೆ ನಡೆಸಿದ್ದಾರೆ. ಚಿನ್ನಯ ಇದು ಹೆಣ್ಣುಮಗಳ ತಲೆ ಬುರುಡೆ ಎಂದು ತಂದುಕೊಟ್ಟಿದ್ದ.ಅದರ ತನಿಖ ನಡೆದು ಇದೀಗ ಈ ಒಂದು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಬುರುಡೆಯನ್ನು ನಾನೇ ಅಗೆದು ತಂದೆ ಎಂದು ಕೋರ್ಟ್ ಮುಂದೆ ಹೇಳಿದ್ದ ಚಿನ್ನಯ್ಯ ಶನಿವಾರದ ವಿಚಾರಣೆ ವೇಳೆ, ‘ನಾನು ಅಗೆದು ತಂದಿಲ್ಲ’ ಎಂದಿದ್ದ. ಈ ಗೊಂದಲಕಾರಿ ಹೇಳಿಕೆ ನೀಡಿದ್ದ.
ಚಿನ್ನಯ್ಯ ತಂದ ಬುರುಡೆಯ ಎಫ್ ಎಸ್ ಎಲ್ ವರದಿ ಅಂಶ ಬಯಲಾಗಿದ್ದು FSL ಪರೀಕ್ಷೆಯಲ್ಲಿ ನಿಜ ಬಯಲಾಗಿದೆ. ಅತ್ಯಾಚಾರ ಮಾಡಿ ಹೂತು ಹಾಕಿದ್ದೇನೆ ಅಂತ ಹೇಳಿದ್ದ ಅದು ಹೆಣ್ಣು ಮಗಳ ತಲೆ ಬುರುಡೆ ಅಂತ ಚಿನ್ನಯ ಹೇಳಿದ್ದ ಆದರೆ ಅದು ಪುರುಷನ ತಲೆ ಬುರುಡೆ ಎಂದು ತಿಳಿದುಬಂದಿದೆ. 25ರಿಂದ 30 ವರ್ಷದ ವ್ಯಕ್ತಿಯ ತಲೆ ಬುರುಡೆ ಎಂದು ವರದಿಯಲ್ಲಿ ತಿಳಿದು ಬಂದಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


