ಮಹೇಶ್ ಶೆಟ್ಟಿ ತಿಮರೋಡಿಯ ಮನೆಯ ಮೇಲೆ ವಿಶೇಷ ತನಿಖಾ ದಳ ಮಂಗಳವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ.ಚಿನ್ನಯ್ಯನ ಹೇಳಿಕೆಯ ಆಧಾರದ ಮೇಲೆ ಕೋರ್ಟ್ನಿಂದ ಸರ್ಚ್ ವಾರಂಟ್ ಪಡೆದು, ತಿಮರೋಡಿಯ ಉಜಿರೆಯಲ್ಲಿರುವ ನಿವಾಸಕ್ಕೆ ಎಸ್ಐಟಿ ತೆರಳಿದೆ.
ಬೆಳಗ್ಗೆ 9:30 ರ ಸುಮಾರಿಗೆ ಜಿತೇಂದ್ರ ದಯಾಮ ಸೇರಿದಂತೆ ಹಲವು ಅಧಿಕಾರಿಗಳ ತಂಡವು ತಿಮರೋಡಿಯ ಮನೆಗೆ ಎಂಟ್ರಿಕೊಟ್ಟಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮಂಗಳೂರು, ಪುತ್ತೂರು ಮತ್ತು ಬಂಟ್ವಾಳ ಪೊಲೀಸರನ್ನು ಕರೆಸಿ ಬಿಗಿ ಭದ್ರತೆ ಒದಗಿಸಲಾಗಿದೆ.
ದೂರುದಾರ ತಾನು ತಿಮರೋಡಿಯ ಮನೆಯಲ್ಲಿ ತಂಗಿದ್ದೆ, ಅಲ್ಲಿ ಒಂದು ಕೊಠಡಿಯನ್ನು ನೀಡಲಾಗಿತ್ತು ಎಂದು ಹೇಳಿದ್ದಾನೆ. ತನ್ನ ಬಟ್ಟೆ, ಬ್ಯಾಗ್ಗಳನ್ನು ಆ ಕೊಠಡಿಯಲ್ಲಿ ಇಟ್ಟಿದ್ದು, ಮೊಬೈಲ್ ಬಳಸಿರಲಿಲ್ಲ, ತನ್ನ ಫೋನ್ ತಿಮರೋಡಿಯವರ ಬಳಿಯಿತ್ತು ಎಂದು ಒಪ್ಪಿಕೊಂಡಿದ್ದಾನೆ. ಈ ಹೇಳಿಕೆಯ ಆಧಾರದ ಮೇಲೆ, ಎಸ್ಐಟಿ ತಿಮರೋಡಿಯ ಮನೆಯಲ್ಲಿ ಚಿನ್ನಯ್ಯ ತಂಗಿದ್ದ ಕೊಠಡಿಯ ಮಹಜರು ಮಾಡಲು ಮತ್ತು ಆತನ ಮೊಬೈಲ್ ವಶಪಡಿಸಿಕೊಳ್ಳಲು ದಾಳಿ ನಡೆಸಿತು.
ಉಜಿರೆಯಲ್ಲಿರುವ ತಿಮರೋಡಿ ನಿವಾಸದ ಪರಿಶೀಲನೆ ನಡೆಸಿದಾಗ, ಚಿನ್ನಯ್ಯ ಬಳಸುತ್ತಿದ್ದ ಮೊಬೈಲ್ ಫೋನ್ ಪತ್ತೆಯಾಗಿದೆ. ಈ ಮೊಬೈಲ್ನಿಂದ ಚಿನ್ನಯ್ಯ ಹಲವು ವಿಡಿಯೋಗಳನ್ನು ಮಾಡಿರುವುದಾಗಿ ಈ ಹಿಂದೆ ಹೇಳಿಕೆ ನೀಡಿದ್ದನು. ಈ ದಾಳಿಯಿಂದ ಪ್ರಕರಣದ ತನಿಖೆಗೆ ಹೊಸ ತಿರುವು ಸಿಕ್ಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


