ಹಬ್ಬಗಳ ಸೀಸನ್ ಮುಗಿದಿದ್ದರೂ, ವರ್ಷಾಂತ್ಯದ ತಿಂಗಳಾದ ಡಿಸೆಂಬರ್‌ನಲ್ಲಿ ರಜಾ ದಿನಗಳಿಗೆ ಕೊರತೆ ಇಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ಯಾಲೆಂಡರ್ ಪ್ರಕಾರ, 2025ರ ಡಿಸೆಂಬರ್ ತಿಂಗಳಲ್ಲಿ ದೇಶದ ವಿವಿಧೆಡೆ ಬ್ಯಾಂಕುಗಳಿಗೆ ಒಟ್ಟು 18 ದಿನಗಳವರೆಗೆ ರಜೆ (Bank holidays) ಘೋಷಿಸಲಾಗಿದೆ.ಈ 18 ರಜೆಗಳಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಎರಡನೇ/ನಾಲ್ಕನೇ ಶನಿವಾರದ ಸಾಪ್ತಾಹಿಕ ರಜೆಗಳೂ ಸೇರಿವೆ.
ಡಿಸೆಂಬರ್ 25ರಂದು ಬರುವ ಕ್ರಿಸ್ಮಸ್ ಹಬ್ಬಕ್ಕೆ ದೇಶಾದ್ಯಂತ ಬ್ಯಾಂಕುಗಳಿಗೆ ಸಾರ್ವತ್ರಿಕ ರಜೆ ಇರುತ್ತದೆ.ಉಳಿದ ರಜೆಗಳು ವಿವಿಧ ರಾಜ್ಯಗಳಲ್ಲಿನ ಪ್ರಾದೇಶಿಕ ಹಬ್ಬಗಳು ಮತ್ತು ಆಚರಣೆಗಳನ್ನು ಆಧರಿಸಿರುತ್ತದೆ.ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಕಡೆ ಡಿಸೆಂಬರ್ 20ರಿಂದಲೇ ರಜೆಗಳು ಆರಂಭವಾಗುತ್ತವೆ.ಕರ್ನಾಟಕ ರಾಜ್ಯದಲ್ಲಿ, ಸಾಪ್ತಾಹಿಕ ರಜೆಗಳ (ಶನಿವಾರ ಮತ್ತು ಭಾನುವಾರ) ಹೊರತಾಗಿ, ಡಿಸೆಂಬರ್ 25 (ಕ್ರಿಸ್ಮಸ್) ರಂದು ಮಾತ್ರ ಹೆಚ್ಚುವರಿ ಪ್ರಾದೇಶಿಕ ರಜೆ ಇರುತ್ತದೆ.
ಡಿಸೆಂಬರ್ ತಿಂಗಳಲ್ಲಿ ವಿವಿಧೆಡೆ ಬ್ಯಾಂಕ್ ರಜಾದಿನಗಳು
ಡಿ. 1, ಸೋಮವಾರ: ರಾಜ್ಯ ಉದ್ಘಾಟನೆ ದಿನ (ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ರಜೆ)
ಡಿ. 3, ಬುಧವಾರ: ಸೇಂಟ್ ಕ್ಸೇವಿಯರ್ ಫೀಸ್ಟ್ (ಗೋವಾದಲ್ಲಿ ರಜೆ)
ಡಿ. 7: ಭಾನುವಾರದ ರಜೆ
ಡಿ. 12, ಶುಕ್ರವಾರ: ಪಾ ಟೋಗನ್ ನೆಂಗಜಿಂಜ ಸಾಂಗ್ಮ ಪುಣ್ಯತಿಥಿ (ಮೇಘಾಲಯ ರಾಜ್ಯದಲ್ಲಿ ರಜೆ
ಡಿ. 13: ಎರಡನೇ ಶನಿವಾರದ ರಜೆ
ಡಿ. 14: ಭಾನುವಾರ ರಜೆ
ಡಿ. 18, ಗುರುವಾರ: ಉ ಸೋಸೋ ಥಾಮ್ ಪುಣ್ಯತಿಥಿ (ಮೇಘಾಲಯ ರಾಜ್ಯದಲ್ಲಿ ರಜೆ)
ಡಿ. 19, ಶುಕ್ರವಾರ: ಗೋವಾ ವಿಮೋಚನಾ ದಿನ (ಗೋವಾದಲ್ಲಿ ರಜೆ)
ಡಿ. 20, ಶನಿವಾರ: ಲೂಸೂಂಗ್, ನಾಮಸೂಂಗ್ ಉತ್ಸವ (ಸಿಕ್ಕಿಂನಲ್ಲಿ ರಜೆ)
ಡಿ. 21: ಭಾನುವಾರದ ರಜೆ
ಡಿ. 22, ಸೋಮವಾರ: ಲೂಸೂಂಗ್, ನಾಮಸೂಂಗ್ ಉತ್ಸವ (ಸಿಕ್ಕಿಂನಲ್ಲಿ ರಜೆ)
ಡಿ. 24, ಬುಧವಾರ: ಕ್ರಿಸ್ಮಸ್ ಈವ್ (ಮಿಝೋರಾಮ್, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ರಜೆ)
ಡಿ. 25, ಗುರುವಾರ: ಕ್ರಿಸ್ಮಸ್ ಹಬ್ಬ (ಎಲ್ಲೆಡೆ ರಜೆ)
ಡಿ. 26, ಶುಕ್ರವಾರ: ಕ್ರಿಸ್ಮಸ್ ಉತ್ಸವ (ಮಿಝೋರಾಮ್, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ರಜೆ)
ಡಿ. 27: ನಾಲ್ಕನೇ ಶನಿವಾರದ ರಜೆ
ಡಿ. 28: ಭಾನುವಾರದ ರಜೆ
ಡಿ. 30, ಮಂಗಳವಾರ: ಉ ಕಿಯಾಂಗ್ ನಂಗ್ಬಾ ಪುಣ್ಯ ತಿಥಿ (ಮೇಘಾಲಯ ರಾಜ್ಯದಲ್ಲಿ ರಜೆ)
ಡಿ. 31, ಬುಧವಾರ: ಹೊಸ ವರ್ಷಾಚರಣೆ, ಇಮೋಯ್ನು ಇರಾಟ್ಪ (ಮಿಝೋರಾಂ ಮತ್ತು ಮಣಿಪುರ್ ರಾಜ್ಯಗಳಲ್ಲಿ ರಜೆ)
ಕರ್ನಾಟಕದಲ್ಲಿ ಡಿಸೆಂಬರ್‌ನಲ್ಲಿ ಬ್ಯಾಂಕ್ ರಜಾದಿನಗಳು
ಡಿ. 7: ಭಾನುವಾರದ ರಜೆ
ಡಿ. 13: ಎರಡನೇ ಶನಿವಾರದ ರಜೆ
ಡಿ. 14: ಭಾನುವಾರ ರಜೆ
ಡಿ. 21: ಭಾನುವಾರದ ರಜೆ
ಡಿ. 25, ಗುರುವಾರ: ಕ್ರಿಸ್ಮಸ್ ಹಬ್ಬ (ಎಲ್ಲೆಡೆ ರಜೆ)
ಡಿ. 27: ನಾಲ್ಕನೇ ಶನಿವಾರದ ರಜೆ
ಡಿ. 28: ಭಾನುವಾರದ ರಜೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


