Tuesday, July 7, 2026
spot_img
More
    spot_img
    HomeLatest newsಹಳದಿ ಮಾರ್ಗದ ಮೆಟ್ರೊ ಪ್ರಯಾಣಿಕರಿಗೆ ಗುಡ್‌ನ್ಯೂಸ್;‌ 6 ಗಂಟೆ ಅಲ್ಲ ಬೇಗನೆ ಆರಂಭವಾಗಲಿದೆ ರೈಲು ಸೇವೆ

    ಹಳದಿ ಮಾರ್ಗದ ಮೆಟ್ರೊ ಪ್ರಯಾಣಿಕರಿಗೆ ಗುಡ್‌ನ್ಯೂಸ್;‌ 6 ಗಂಟೆ ಅಲ್ಲ ಬೇಗನೆ ಆರಂಭವಾಗಲಿದೆ ರೈಲು ಸೇವೆ

    ಬೆಂಗಳೂರು: ಹಳದಿ ಮಾರ್ಗ ಉದ್ಘಾಟನೆಯಾದ ದಿನದಿಂದಲೂ ಈ ಮಾರ್ಗದ ಮೆಟ್ರೊಗೆ ಜನರು ಫುಲ್‌ಮಾರ್ಕ್ಸ್‌ ಕೊಟ್ಟಿದ್ದು, ಹೆಚ್ಚಾಗಿ ಕೆಲಸವಲಂಬಿಗಳೇ ಪ್ರಯಾಣಿಸುವ ಕಾರಣ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ.

    Advertisement

    ಹೀಗಾಗಿ ಬೆಳಗಿನ ಸಮಯದಲ್ಲಿ ಈ ಮಾರ್ಗದಲ್ಲಿ ನಿರೀಕ್ಷೆಗೂ ಮೀರಿದ ಜನಸಂದಣಿ ಇರಲಿದೆ. ಈ ನಿಟ್ಟಿನಲ್ಲಿ ಬೆಳಗ್ಗೆ ಪ್ರಯಾಣಿಕರ ಸಂಖ್ಯೆಗೆ ತಕ್ಕಹಾಗೆ ರೈಲುಗಳಿಲ್ಲದೇ ಜನ ಹೈರಾಣಾಗಿದ್ದಾರೆ.

    ಈ ಕಾರಣ ಇತ್ತೀಚೆಗೆ ಆರ್‌.ವಿ ಮೆಟ್ರೊ ನಿಲ್ದಾಣದ ಬಳಿ ಇತ್ತೀಚೆಗಷ್ಟೆ ಪ್ರಯಾಣಿಕರು ಪ್ರತಿಭಟನೆ ನಡೆಸಿ ಹೆಚ್ಚುವರಿ ಮೆಟ್ರೊ ರೈಲುಗಳನ್ನು ಓಡಿಸುವಂತೆ ಮನವಿ ಮಾಡಿಕೊಂಡಿದ್ದರು.

    ಇದರಿಂದ ಎಚ್ಚೆತ್ತ ಬಿಎಂಆರ್‌ಸಿಎಲ್‌ ಸೋಮವಾರಗಳಂದು ಎರಡು ಹೆಚ್ಚುವರಿ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ನೂತನ ರೈಲುಗಳು ಬೆಳಗ್ಗೆ 5.05 ಹಾಗೂ 5.35ಕ್ಕೆ ಆರ್‌. ವಿ ರಸ್ತೆ ಮತ್ತು ಬೊಮ್ಮಸಂದ್ರ ನಿಲ್ದಾಣಗಳಿಂದ ಹೊರಡಲಿವೆ. ಉಳಿದ ದಿನಗಳಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ರೈಲು ಆರಂಭವಾಗಲಿದೆ ಮತ್ತು ಭಾನುವಾರಗಳಂದು 7 ಗಂಟೆಗೆ ಸೇವೆ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

    ಇನ್ನು ಎಲ್ಲ ಮಾರ್ಗಗಳಲ್ಲೂ ಬೆಳಗ್ಗೆ 5 ಗಂಟೆಗೆ ಮೆಟ್ರೊ ಸೇವೆಗಳು ಆರಂಭವಾದರೆ ಹಳದಿ ಮಾರ್ಗದಲ್ಲಿ ಮಾತ್ರ 6 ಗಂಟೆ ಬಳಿಕ ಮೆಟ್ರೊ ಓಡುತ್ತಿತ್ತು. ಈ ಕಾರಣದಿಂದಾಗಿ ಜನಸಂದಣಿ ಇರುತ್ತಿತ್ತು. ಅದರಲ್ಲೂ ವಾರಾಂತ್ಯದ ಬಳಿಕ ಬರುವ ಸೋಮವಾರದಂದು ಈ ಮಾರ್ಗದ ಪ್ರಯಾಣ ಬಹಳ ಕಷ್ಟಕರವಾಗಿತ್ತು. ಸದ್ಯ ಹೆಚ್ಚುವರಿ ರೈಲುಗಳ ಘೋಷಣೆಯಾಗಿರುವುದು ಈ ಸಮಸ್ಯೆಯನ್ನು ಎಷ್ಟರ ಮಟ್ಟಕ್ಕೆ ಪರಿಹರಿಸಲಿದೆ ನೋಡಬೇಕಿದೆ.

    ಲಾರಾ, ಕೊಹ್ಲಿ, ಸಚಿನ್‌ಗಿಂತಲೂ ಆಸ್ಟ್ರೇಲಿಯಾದ ಈ ಆಟಗಾರ ಬೆಸ್ಟ್‌ ಎಂದ ಪಾಂಟಿಂಗ್ ಕಂಡು ನಕ್ಕ ನೆಟ್ಟಿಗರು; ವಿಡಿಯೊ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    ಬೆಂಗಳೂರು: ಡೇ ಕೇರ್‌ನಲ್ಲಿ ಮಕ್ಕಳಿಗೆ ಹಿಂಸೆ, ಐವರು ಮಹಿಳೆಯರ ವಿರುದ್ಧ ಎಫ್‌ಐಆರ್

    ಕ್ಯಾಪ್‌ಜೆಮಿನಿ ಕ್ಯಾಂಪಸ್‌ನ ಡೇ ಕೇರ್‌ನಲ್ಲಿ ಪುಟ್ಟ ಮಕ್ಕಳಿಗೆ ಹಿಂಸೆ ನೀಡಿದ ಆರೋಪದ ವಿಡಿಯೊ ವೈರಲ್; ಐವರು ಮಹಿಳಾ ಆರೈಕೆದಾರರ ವಿರುದ್ಧ ಪ್ರಕರಣ ದಾಖಲು.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading