ಬೆಂಗಳೂರು: ಪತಿ ಹಾಗೂ ಪತ್ನಿ ನಡುವೆ ಅಕ್ರಮ ಸಂಬಂಧದ ವಿಚಾರವಾಗಿ ಸಾಲು ಸಾಲು ಪ್ರಕರಣಗಳು ನಡೆಯುತ್ತಲೇ ಬಂದಿದ್ದು, ನಗರದ ಉತ್ತರ ತಾಲೂಕಿನ ಕುದುರೆಗೆರೆಯ ಪ್ರಕರಣ ಹೊಸ ಸೇರ್ಪಡೆಯಾಗಿದೆ.
ಗ್ರಾಮದ ಹರೀಶ್ ಎಂಬಾತ ಮಂಜುಳಾ ಎಂಬಾಕೆಯನ್ನು ದಶಕದ ಹಿಂದೆ ಮದುವೆಯಾಗಿದ್ದರು. ಚೆನ್ನಾಗಿಯೇ ಸಾಗುತ್ತಿದ್ದ ಸಂಸಾರ ಪತ್ನಿಯ ಅಕ್ರಮ ಸಂಬಂಧಕ್ಕೆ ಸಿಲುಕಿ ಹಾಳಾಗಿತ್ತು. ಮಂಜುಳಾ 3 ವರ್ಷಗಳಿಂದ ಸುರೇಶ್ ಎಂಬಾತನ ಜತೆ ಅಕ್ರಮ ಸಂಬಂಧ ಹೊಂದಿದ್ದಳು.
ಪತ್ನಿಯ ಕುರಿತು ವಿಷಯ ತಿಳಿದ ಪತಿ ಹರೀಶ್ ಅಕ್ರಮ ಸಂಬಂಧದ ಕುರಿತು ಪ್ರಶ್ನಿಸಿದಾಗ ಪತ್ನಿ ಮಂಜುಳಾ ಆತನಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾಳೆ.
ಈ ಘಟನೆಯಿಂದ ಮನನೊಂದ ಪತಿ ಹರೀಶ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಬೆಂಕಿ ಹಚ್ಚಿಕೊಂಡ ಮಗನನ್ನು ಕಾಪಾಡಲು ಹೋದ ತಾಯಿ ಅಂಜಿನಮ್ಮಗೆ ಸಹ ಬೆಂಕಿ ತಗುಲಿ ಗಾಯಗಳಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
Disclaimer: ಯಾವುದೇ ಸಮಸ್ಯೆಗೂ ಸಾವೊಂದೇ ಪರಿಹಾರವಲ್ಲ. ಆತ್ಮಹತ್ಯೆಯ ಯೋಚನೆ ಬಂದರೆ ನಿಮ್ಮ ನೆಚ್ಚಿನ ವ್ಯಕ್ತಿ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಿ. ಇಲ್ಲವೇ ಈ ಸಹಾಯವಾಣಿಗೆ ಕರೆಮಾಡಿ: 9152987821
ಬಂಗಾರದ ಬೆಲೆಯಲ್ಲಿ ಭಾರಿ ಜಿಗಿತ;ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಾಗಿದೆ ಗೊತ್ತಾ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


