ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮೂಲಂಗಿ ಗ್ರಾಮದಲ್ಲಿ ತಾಯಿಯೇ ತನ್ನ ಮಗುವನ್ನು ಕತ್ತುಹಿಸುಕಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ತಾಯಿ ನಾಲ್ಕನೇ ಬಾರಿಯೂ ಹೆಣ್ಣುಮಗು ಜನಿಸಿತು ಎಂಬ ಕಾರಣಕ್ಕೆ ಹಸುಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಗ್ರಾಮದ ಅಶ್ವಿನಿ ಹಳಕಟ್ಟಿ ಹಂತಕಿ.
ಈಗಾಗಲೇ 3 ಹೆಣ್ಣುಮಕ್ಕಳಿದ್ದು, ಮುದಕವಿ ಆರೋಗ್ಯ ಕೇಂದ್ರದಲ್ಲಿ ನವೆಂಬರ್ 23ರಂದು ಮತ್ತೆ ಹೆಣ್ಣುಮಗು ಜನಿಸಿದೆ. ಇದರಿಂದ ಬೇಸರವಾಗಿದ್ದ ಆಕೆ ಮಗುವಿನ ಕತ್ತು ಹಿಸುಕಿ ಕೊಂದಿದ್ದಾಳೆ. ಮಗು ಉಸಿರಾಡುತ್ತಿಲ್ಲ ಎಂದು ನಾಟಕವಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ವೈದ್ಯಾಧಿಕಾರಿಗಳು ಮಗು ಉಸಿರುಗಟ್ಟಿ ಮೃತಪಟ್ಟಿದೆ ಎಂದು ಅನುಮಾನಗೊಂಡು ಕೂಡಲೇ ರಾಮದುರ್ಗ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಡಿವೈಎಸ್ಪಿ ಚಿದಂಬರ ಮಡಿವಾಳರ, ಸುರೇಬಾನ ಪಿಎಸ್‌ಐ ಶಿವಾಜಿ ಪವಾರ ತನಿಖೆ ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ತಾಯಿಯೇ ತನ್ನ ಮಗುವನ್ನು ಕೊಂದಿದ್ದಾಳೆ ಎಂಬ ಅಂಶ ಹೊರಬಿದ್ದಿದೆ.
ವಿಧಾನಸೌಧದ ಮುಂದೆಯೇ ಗುಂಪು ಕಟ್ಟಿಕೊಂಡು ಹೊಡೆದಾಟ ನಡೆಸಿದ ವಲಸಿಗರು; ವಿಡಿಯೊ ವೈರಲ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


