ನಿನ್ನೆಯಷ್ಟೇ (ಡಿಸೆಂಬರ್ 25) ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಮ್ಯಾಕ್ಸ್ ಬಿಡುಗಡೆಯಾಗಿದ್ದು, ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ರಿಲೀಸ್‌ಗೂ ಮುನ್ನ ದಿನದಿಂದ ಅಡ್ವಾನ್ಸ್ ಬುಕಿಂಗ್‌ನಲ್ಲಿ ವೇಗ ಪಡೆದುಕೊಂಡ ಮ್ಯಾಕ್ಸ್ ಬಿಡುಗಡೆಯ ದಿನ ನಿಜಕ್ಕೂ ಅಬ್ಬರದ ಬುಕಿಂಗ್ ಪಡೆದುಕೊಂಡಿದೆ.
ಮೊದಲ ಪ್ರದರ್ಶನದಲ್ಲಿ ಚಿತ್ರ ನೋಡಿ ಹೊರಬಂದ ಸಿನಿ ರಸಿಕರು ನೀಡಿದ ಪಾಸಿಟಿವ್ ರಿವ್ಯೂಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ಈ ರಿವ್ಯೂಗಳನ್ನು ಆಧರಿಸಿ ಜನರು ಚಿತ್ರಮಂದಿರದತ್ತ ನುಗ್ಗಿದ್ದಾರೆ. ಪರಿಣಾಮ ಸಿನಿಮಾಗೆ ಮೌತ್ ಟಾಕ್ ಪಬ್ಲಿಸಿಟಿ ದೊರಕಿದ್ದು ಮೊದಲ ದಿನ ಗಲ್ಲಾಪೆಟ್ಟಿಗೆಯಲ್ಲೂ ಭರ್ಜರಿ ಬ್ಯುಸಿನೆಸ್ ಆಗಿದೆ.
ಇನ್ನು ಈ ಚಿತ್ರಕ್ಕೆ ತಮಿಳಿನ ನಿರ್ಮಾಪಕ ಕಲೈಪುಲಿ ತನು ಎಂಬುವವರು ಬಂಡವಾಳ ಹೂಡಿದ್ದು, ವಿತರಣೆಯನ್ನು ಕೆಆರ್‌ಜಿ ಸ್ಟುಡಿಯೊಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮಾಡಿದ್ದಾರೆ. ಕಾರ್ತಿಕ್ ಗೌಡ ಚಿತ್ರದ ಬುಕಿಂಗ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಸಿನಿ ರಸಿಕರು ಥಿಯೇಟರ್ ಸಾಮರ್ಥ್ಯಕ್ಕೂ ಮೀರಿ ಆಗಮಿಸುತ್ತಿರುವ ವಿಷಯವನ್ನು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.
“ಉತ್ತರ ಕರ್ನಾಟಕದ ಚಿತ್ರ ಪ್ರದರ್ಶಕರು ಕರೆ ಮಾಡಿ ದೂರದ ಊರುಗಳಿಂದ ಸಿನಿಮಾ ನೋಡಲು ಬಂದಿದ್ದಾರೆ. ಚಿತ್ರಮಂದಿರ ತುಂಬಿದ್ದರೂ ಹೆಚ್ಚುವರಿ ಸೀಟ್‌ಗಳನ್ನು ಹಾಕಿ ಸಿನಿಮಾ ತೋರಿಸುತ್ತಿದ್ದೇವೆ. ಕೆಲವರು ನಿಂತುಕೊಂಡೇ ಸಿನಿಮಾ ನೋಡುತ್ತಿದ್ದಾರೆ. ಇಂತಹ ವಿಷಯ ಕೇಳಿ ತೃಪ್ತಿದಾಯಕ ಎನಿಸಿತು” ಎಂದು ಕಾರ್ತಿಕ್ ಗೌಡ ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


