ಪ್ರಸಿದ್ಧ ಕಂಪನಿಗಳ ಪೈಕಿ ಹಲವು ಕಂಪನಿಗಳು ತಮ್ಮ ಹೆಸರನ್ನು ಸಂಪೂರ್ಣವಾಗಿ ತನ್ನ ಲೋಗೊಗಳಲ್ಲಿ ಬಳಕೆ ಮಾಡುವುದಿಲ್ಲ. ಅಲ್ಲದೇ ಉಚ್ಚರಿಸುವುದಕ್ಕೂ ಸಹ ಸುಲಭವಾಗಲಿ ಎನ್ನುವ ಕಾರಣಕ್ಕೆ ತನ್ನ ಕಂಪನಿ ಅಥವಾ ಬ್ರಾಂಡ್ ಹೆಸರಿನ ಪ್ರತಿ ಪದದ ಮೊದಲ ಅಕ್ಷರನ್ನು ತೆಗೆದುಕೊಂಡು ( ಆಂಗ್ಲ ಭಾಷೆಯ ಅಕ್ಷರಗಳು ) ಅವುಗಳನ್ನು ಒಟ್ಟಿಗೆ ಸೇರಿಸಿ ಕರೆಯಲಾಗುತ್ತದೆ.
ಉದಾಹರಣೆಗೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನೇ ತೆಗೆದುಕೊಳ್ಳೋಣ. ಇದೊಂದು ಐಪಿಎಲ್‌ನ ಪ್ರಸಿದ್ಧ ಟೀಮ್. ಐಪಿಎಲ್ ವೀಕ್ಷಕರಿಗೆ ಆರ್‌ಸಿಬಿ ಎಂದರೆ ಥಟ್ ಅಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ನೆನಪಾಗಿಬಿಡುತ್ತದೆ. ಆದರೆ ಇದೇ ಪ್ರಶ್ನೆಯನ್ನು ಕ್ರಿಕೆಟ್ ನೋಡದವರಿಗೆ ಕೇಳಿದರೆ ಅವರಿಗೆ ಉತ್ತರ ತಿಳಿದಿರುವುದಿಲ್ಲ. ಇನ್ನು ಕ್ರಿಕೆಟ್ ನೋಡುವ ಹಾಗೂ ಆರ್‌ಸಿಬಿ ಎಂಬುದು ಒಂದು ತಂಡ ಎಂದು ತಿಳಿದಿರುವ ಕೆಲ ವಿದೇಶಗರಿಗೂ ಇದು ತಿಳಿಯದೇ ಇರಬಹುದು.
ಹೀಗೆ ಒಂದು ಪ್ರಸಿದ್ಧ ಬ್ರಾಂಡ್ ಹೆಸರು ಕೇಳಿದ್ದರೂ ಅದರ ಫುಲ್‌ಫಾರ್ಮ್ ಗೊತ್ತಿಲ್ಲದೇ ಇರುವ ಅನೇಕ ಜನರು ಇದ್ದೇವೆ. ಎಲ್ಲರಿಗೂ ಎಲ್ಲಾ ಬ್ರಾಂಡ್‌ಗಳ ಬಗ್ಗೆ ಗೊತ್ತಿರುವುದಿಲ್ಲ. ಇನ್ನು ಈ ಸುದ್ದಿಯಲ್ಲಿರುವ ಹತ್ತು ಬ್ರಾಂಡ್‌ನ ಎಲ್ಲಾ ಫುಲ್‌ಫಾರ್ಮ್‌ಗಳನ್ನು ತಿಳಿದಿರುವವರೂ ಸಹ ಇರಬಹುದು. ಹೀಗೆ ನಮಗೆಲ್ಲಾ ಯಾವ ಯಾವ ಬ್ರಾಂಡ್‌ಗಳ ಫುಲ್‌ಫಾರ್ಮ್ ಗೊತ್ತು ಎಂಬುದನ್ನು ತಿಳಿಯಲು ಹಾಗೂ ತಿಳಿಯದೇ ಇದ್ದರೆ ತಿಳಿದುಕೊಳ್ಳುವ ಉದ್ದೇಶವಷ್ಟೇ ಈ ಸುದ್ದಿಯ ಉದ್ದೇಶ.
ಹತ್ತು ಸಂಸ್ಥೆ ಅಥವಾ ಬ್ರಾಂಡ್‌ಗಳ ಹೆಸರನ್ನು ಮೊದಲು ಇರಲಿದೆ ಹಾಗೂ ಅವುಗಳ ಫುಲ್‌ಫಾರ್ಮ್ ಮುಂದಿನ ಪಟ್ಟಿಯಲ್ಲಿ ಅದೇ ಅಂಕಿಯ ಮುಂದೆ ಇರಲಿದೆ.
- OYO
- HDFC
- PVR
- TVS
- WIPRO
- SYSKA
- NDTV
- MRF
- PayTM
- AMUL
ಫುಲ್‌ಫಾರ್ಮ್ ಇಲ್ಲಿದೆ
- OYO – ಆನ್ ಯುವರ್ ರೂಮ್
- HDFC – ಹೌಸಿಂಗ್ ಡೆವೆಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಶನ್
- PVR – ಪ್ರಿಯಾ ವಿಲೇಜ್ ರೋಡ್‌ಶೋ
- TVS – ತಿರುಕ್ಕೂರುಂಗುಡಿ ವೇಂಗಾರಾಮ್ ಸುಂದರಮ್
- WIPRO – ವೆಸ್ಟರ್ನ್ ಇಂಡಿಯಾ ಪಾಮ್ ರಿಫೈನ್ಡ್ ಆಯಿಲ್ಸ್ ಲಿಮಿಟೆಡ್
- SYSKA – ಶ್ರೀ ಯೋಗಿ ಸಂತ್ ಕೃಪಾ ಅನಂತ್
- NDTV – ನ್ಯೂ ಡೆಲ್ಲಿ ಟೆಲಿವಿಷನ್
- MRF – ಮದ್ರಾಸ್ ರಬ್ಬರ್ ಫ್ಯಾಕ್ಟರಿ
- PayTM – ಪೇ ಥ್ರೋ ಮೊಬೈಲ್
- AMUL – ಆನಂದ್ ಮಿಲ್ಕ್ ಯುನೈಟೆಡ್ ಲಿಮಿಟೆಡ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


