ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು (ಫೆಬ್ರವರಿ 27) ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್‌ನ 12ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಜೈಂಟ್ಸ್ 6 ವಿಕೆಟ್‌ಗಳ ಭರ್ಜರಿ ಗೆಲುವು ಕಂಡಿದೆ.
ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳನ್ನು ಗೆದ್ದು ಶುಭಾರಂಭ ಮಾಡಿದ್ದ ಆರ್‌ಸಿಬಿ ಈ ಸೋಲಿನ ಮೂಲಕ ಹ್ಯಾಟ್ರಿಕ್ ಸೋಲನ್ನು ಅನುಭವಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್‌ಗಳ ವೈಫಲ್ಯದಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 125 ರನ್ ಕಲೆಹಾಕಿ ಗುಜರಾತ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 126 ರನ್‌ಗಳ ಗುರಿಯನ್ನು ನೀಡಿತು.
ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಗುಜರಾತ್ ಜೈಂಟ್ಸ್ 16.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿದೆ.
ಆರ್‌ಸಿಬಿ ಇನ್ನಿಂಗ್ಸ್: ಸ್ಮೃತಿ ಮಂಧಾನ 10, ವ್ಯಾಟ್ ಹಾಡ್ಜ್ 4, ಆಲಿಸ್ ಪೆರ್ರಿ ಡಕ್‌ಔಟ್, ರಾಘ್ವಿ ಬಿಸ್ತ್ 22, ಕನಿಕಾ ಅಹುಜ 33, ರಿಚಾ ಘೋಷ್ 9, ಕಿಮ್ ಗಾರ್ತ್ 14, ಜಾರ್ಜಿಯಾ ವಾರೆಹಮ್ ಅಜೇಯ 20 ಹಾಗೂ ಸ್ನೇಹ್ ರಾಣಾ ಅಜೇಯ 1 ರನ್ ಕಲೆಹಾಕಿದರು.
ಗುಜರಾತ್ ಪರ ತನುಜಾ ಕನ್ವರ್ ಹಾಗೂ ಡಿಯೇಂದ್ರ ಡಾಟಿನ್ ತಲಾ 2 ವಿಕೆಟ್ ಪಡೆದರೆ, ಆಶ್ಲಿ ಗಾರ್ಡನರ್ ಹಾಗೂ ಕಾಶ್ವಿ ಗೌತಮ್ ತಲಾ ಒಂದೊಂದು ವಿಕೆಟ್ ಪಡೆದರು.
ಗುಜರಾತ್ ಜೈಂಟ್ಸ್ ಇನ್ನಿಂಗ್ಸ್: ತಂಡದ ಪರ ಬೆತ್ ಮೂನಿ 17, ದಯಾಳನ್ ಹೇಮಲತಾ 11, ಹರ್ಲಿನ್ ಡಿಯೊಲ್ 5, ಆಶ್ಲಿ ಗಾರ್ಡನರ್ 58, ಫ್ಯೋಬ್ ಲಿಚ್‌ಫೀಲ್ಡ್ ಅಜೇಯ 30 ಹಾಗೂ ಡಿಯೇಂದ್ರ ಡಾಟಿನ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಆರ್‌ಸಿಬಿ ಪರ ರೇಣುಕಾ ಸಿಂಗ್ ಹಾಗೂ ಜಾರ್ಜಿಯಾ ವಾರೆಹಮ್ ತಲಾ ಒಂದೊಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


