ನರಗಳ ಸರಿಯಾದ ಕಾರ್ಯನಿರ್ವಹಣೆ ಹಾಗೂ ಕೆಂಪು ರಕ್ತಕಣಗಳ (RBC) ಉತ್ಪತ್ತಿಗೆ ವಿಟಮಿನ್ B12 ಅತ್ಯಂತ ಅಗತ್ಯವಾಗಿರುವ ಪೋಷಕಾಂಶ. ಡಿಎನ್‌ಎ ಸಂಶ್ಲೇಷಣೆಯಲ್ಲಿಯೂ ಇದರ ಪ್ರಮುಖ ಪಾತ್ರವಿದೆ. ದೇಹದಲ್ಲಿ ಇದರ ಕೊರತೆಯಾದರೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ – ಆದರೆ ಈ ಲಕ್ಷಣಗಳು ಬಹುಮಟ್ಟಿಗೆ ನಾವು ಗಮನಿಸದೇ ಇರಬಹುದು.ಆರೋಗ್ಯದ ದೃಷ್ಟಿಕೋಣದಲ್ಲಿ ಯಾವುದೇ ಪೋಷಕಾಂಶಗಳನ್ನು ಅವಹೇಳನೆ ಮಾಡಲಾಗದು. ವಿಟಮಿನ್‌ಗಳ ವಿಷಯದಲ್ಲಿ ಹೇಳಬೇಕಾದರೆ, ವಿಟಮಿನ್ B12 ಮಾನವ ದೇಹಕ್ಕೆ ಅತ್ಯಗತ್ಯ. ಆದರೆ ವಿಟಮಿನ್ ಬಿ12 ಪೋಷಕಾಂಶದ ಕೊರತೆಯಿಂದ ದೇಹದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಸಾಮಾನ್ಯವಾಗಿ ಸಸ್ಯಹಾರಿ ಪದಾರ್ಥಗಳಲ್ಲಿ ಹೆಚ್ಚಾಗಿ ಕಂಡು ಬರುವುದಿಲ್ಲ. ಮಾಂಸಹಾರಿಗಳಲ್ಲಿ ಕಂಡುಬರುವ ವಿಟಮಿನ್ ಬಿ12 ಕೊರತೆಯಿಂದ ಪರಿಹಾರ ಪಡೆಯಲು ಯಾವ ಪದಾರ್ಥಗಳನ್ನು ಸೇವಿಸಬೇಕು ಎಂಬ ಮಾಹಿತಿ ಈ ಕೆಳಗಿನಂತಿದೆ.

ವಿಟಮಿನ್ ಬಿ-12 ಏಕೆ ಮುಖ್ಯ?
ವಿಟಮಿನ್ ಬಿ-12 (Vitamin B12) ದೇಹದಲ್ಲಿ ನಡೆಯುವ ಹಲವು ಪ್ರಮುಖ ಶಾರೀರಿಕ ಪ್ರಕ್ರಿಯೆಗಳಿಗೆ ಅವಶ್ಯಕವಾಗಿರುವ ಒಂದು ಪ್ರಮುಖ ಪೋಷಕಾಂಶವಾಗಿದೆ. ಇದರ ಕೊರತೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀಳಬಹುದು.ವಿಟಮಿನ್ ಬಿ-12 ದೇಹಕ್ಕೆ ಬಹುಮುಖವಾಗಿ ಅಗತ್ಯವಿರುವ ಪೋಷಕಾಂಶ. ಇದರ ಕೊರತೆಯನ್ನು ನಿರ್ಲಕ್ಷ್ಯ ಮಾಡಿದರೆ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ವಿಟಮಿನ್ ಬಿ-12 ಸಮೃದ್ಧ ಆಹಾರಗಳನ್ನು ಸೇವಿಸುವುದು ಮತ್ತು ಕೊರತೆ ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಮುಖ್ಯ
ವಿಟಮಿನ್ ಬಿ-12 ಮುಖ್ಯವಾದ ಕಾರಣಗಳು
*ಕೆಂಪು ರಕ್ತಕಣಗಳ ರಚನೆ: ವಿಟಮಿನ್ ಬಿ-12 ದೇಹದಲ್ಲಿ ಆರೋಗ್ಯಕರ ಕೆಂಪು ರಕ್ತಕಣಗಳ ಉತ್ಪಾದನೆಗೆ ಅವಶ್ಯಕ. ಇದು ರಕ್ತದಲ್ಲಿ ಆಮ್ಲಜನಕವನ್ನು ಅಂಗಾಂಶಗಳಿಗೆ ಸಾಗಿಸಲು ಸಹಾಯ ಮಾಡುತ್ತದೆ. ಇದರ ಕೊರತೆಯಿಂದ ರಕ್ತಹೀನತೆ (ಅನಿಮಿಯಾ) ಉಂಟಾಗಬಹುದು, ಇದರಿಂದ ದೌರ್ಬಲ್ಯ, ಆಯಾಸ ಮತ್ತು ದಣಿವು ಕಾಣಿಸಿಕೊಳ್ಳಬಹುದು.
*ನರವೈಜ್ಞಾನಿಕ ಆರೋಗ್ಯ: ವಿಟಮಿನ್ ಬಿ-12 ನರಕೋಶಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಇದರ ಕೊರತೆಯಿಂದ ನರಗಳಿಗೆ ಹಾನಿಯಾಗಬಹುದು, ಕೈ, ಕಾಲುಗಳಲ್ಲಿ ಸುಳಿ, ಉರಿ ಅಥವಾ ಮರಗಟ್ಟುವಿಕೆ, ನೆನಪು ಹಾಳಾಗುವುದು ಮುಂತಾದ ಸಮಸ್ಯೆಗಳು ಉಂಟಾಗಬಹುದು.
*ಡಿಎನ್ಎ ಸಂಶ್ಲೇಷಣೆ: ವಿಟಮಿನ್ ಬಿ-12 ದೇಹದಲ್ಲಿ ಡಿಎನ್ಎ ನಿರ್ಮಾಣಕ್ಕೆ ಸಹಾಯಕ. ಇದು ಕೋಶಗಳ ಬೆಳವಣಿಗೆ ಮತ್ತು ಪುನರ್ ನಿರ್ಮಾಣಕ್ಕೆ ಅಗತ್ಯ.
*ಹೃದಯ ಆರೋಗ್ಯ: ವಿಟಮಿನ್ ಬಿ-12 ದೇಹದಲ್ಲಿ ಹೋಮೋಸಿಸ್ಟೈನ್ ಎಂಬ ಅಮಿನೋ ಆಮ್ಲದ ಮಟ್ಟವನ್ನು ನಿಯಂತ್ರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹೋಮೋಸಿಸ್ಟೈನ್ ಹೆಚ್ಚು ಇದ್ದರೆ ಹೃದಯದ ಅಪಾಯ ಹೆಚ್ಚಾಗಬಹುದು.ಇತರ ಪ್ರಮುಖ ಕಾರ್ಯಗಳು: ಕೂದಲು, ಉಗುರು, ಚರ್ಮದ ಆರೋಗ್ಯ, ಮೂಳೆ ಆರೋಗ್ಯ ಹಾಗೂ ಇಮ್ಯೂನ್ ವ್ಯವಸ್ಥೆಗೆ ಸಹ ವಿಟಮಿನ್ ಬಿ-12 ಅಗತ್ಯ.

ವಿಟಮಿನ್ ಬಿ 12 ಕೊರತೆಯ ಲಕ್ಷಣಗಳು:
*ನಿರಂತರ ಆಯಾಸ ಮತ್ತು ದೌರ್ಬಲ್ಯ: ದೇಹದಲ್ಲಿ ಶಕ್ತಿ ಕಡಿಮೆಯಾಗುವುದು, ಯಾವಾಗಲೂ ಸುಸ್ತಾಗಿ, ಸೋಮಾರಿತನದ ಭಾವನೆ ಅನುಭವಿಸುವುದು.
*ವಿಟಮಿನ್ ಬಿ12 ಕೊರತೆಯು ಇದ್ದರೆ ಆಗ ಇದರಿಂದ ಪಾದಗಳಲ್ಲಿ ಝಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ ಕಂಡುಬರಬಹುದು. ಇದನ್ನು ಪಿನ್ಸ್ ಮತ್ತು ನೀಡಲ್ಸ್ ಎಂದು ಕರೆಯಲಾಗುತ್ತದೆ
*ಸ್ಮರಣಶಕ್ತಿ ಮತ್ತು ಏಕಾಗ್ರತೆಯ ತೊಂದರೆ: ನೆನಪು ಹಾಳಾಗುವುದು, ಏಕಾಗ್ರತೆ ಕಡಿಮೆಯಾಗುವುದು, ಮೆದುಳಿನ ಮಂಜು ಅನುಭವವಾಗುವುದು.
*ಖಿನ್ನತೆ ಹಾಗೂ ಕಿರಿಕಿರಿ: ಮನೋಭಾವ ಬದಲಾವಣೆ, ಖಿನ್ನತೆ, ಆತಂಕ ಮತ್ತು ಕಿರಿಕಿರಿ ಹೆಚ್ಚಾಗಬಹುದು.
*ಒಣ ಅಥವಾ ಬಿರುಕುಬಿಟ್ಟ ಚರ್ಮವು ಕೂಡ ವಿಟಮಿನ್ ಬಿ12 ಕೊರತೆಯ ಲಕ್ಷಣವಾಗಿದೆ. ದೇಹಕ್ಕೆ ಸರಿಯಾಗಿ ದ್ರವಾಂಶವು ಸಿಗದೆ ಇರುವುದು ಅಥವಾ ಪೋಷಕಾಂಶಗಳು ಸಿಗದೆ ಇರುವುದು ಇದರ ಲಕ್ಷಣವಾಗಿದೆ.
*ತಲೆಸುತ್ತು, ಉಸಿರಾಟದ ತೊಂದರೆ: ರಕ್ತದಲ್ಲಿ ಆಮ್ಲಜನಕದ ಕೊರತೆಯಿಂದ ತಲೆಸುತ್ತು, ಉಸಿರಾಟ ತೊಂದರೆ ಕಾಣಬಹುದು.
*ನಾಲಿಗೆಯಲ್ಲಿ ಉರಿಯೂತ ಅಥವಾ ಊದಿಕೊಳ್ಳುವುದು: ಕೆಲವೊಮ್ಮೆ ನಾಲಿಗೆ ಕೆಂಪಾಗಿ, ನೋವಿನಿಂದ ಕೂಡಿರಬಹುದು.
*ನಡೆಯಲು ತೊಂದರೆ, ಸಮತೋಲನ ಸಮಸ್ಯೆಗಳು: ದೀರ್ಘಕಾಲದ ಕೊರತೆಯು ಸಮತೋಲನ ಕಳೆದುಹೋಗಲು ಕಾರಣವಾಗಬಹುದು.
*ಮೂಡ್ ಸ್ವಿಂಗ್, ಉತ್ಸಾಹದ ಕೊರತೆ: ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮೇಲಿನ ಲಕ್ಷಣಗಳು ಕಾಣಿಸಿದರೆ, ವಿಟಮಿನ್ ಬಿ12 ಕೊರತೆ ಇರಬಹುದೆಂದು ಶಂಕಿಸಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ

ಯಾವೆಲ್ಲಾ ಆಹಾರಗಳಲ್ಲಿ ವಿಟಮಿನ್ ಬಿ12 ಸಮೃದ್ಧವಾಗಿದೆ ಗೊತ್ತೇ?
ಸೋಯಾಬೀನ್, ಸೋಯಾ ಹಾಲು, ತೋಫು, ಹಾಲು, ಮೊಸರು, ಓಟ್ಸ್, ಪನೀರ್, ಬ್ರೊಕೊಲಿ, ಕುಂಬಳಕಾಯಿ, ಮಶ್ರೂಮ್ ಪಾಲಕ್, ಬೀಟ್ರೂಟ್, ಹೆಸರು ಬೇಳೆ, ಕಡಲೆ ಬೇಳೆ, ಅಂಜೂರ, ಸೇಬು, ಬಾಳೆಹಣ್ಣು, ಬ್ಲೂಬೆರ್ರಿ ಮತ್ತು ಕಿತ್ತಳೆ, ಆಲೂಗಡ್ಡೆ, ಕಡಲೆಕಾಯಿ, ಗೋಡಂಬಿ, ಪಿಸ್ತಾ ಮತ್ತು ವಾಲ್ನಟ್ಸ್ ,ಮೀನಿನ ಎಣ್ಣೆ,ಸೋಯಾಬೀನ್ಸ್,ರೈಸ್ ಕೇಕ್ಗಳು,ತುಪ್ಪ,ಮಖಾನಾ,ಓಟ್ಮೀಲ್
ಅಶ್ವಗಂಧದ ಅದ್ಭುತ ಪ್ರಯೋಜನಗಳು: ಗೊತ್ತಾದರೆ ನೀವು ಕೂಡ ದಿನವೂ ಬಳಸುತ್ತೀರಾ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


