ನವದೆಹಲಿ: ಆಪರೇಷನ್ ಸಿಂಧೂ ಕಾರ್ಯಾಚರಣೆ ಮೂಲಕ ಇರಾನ್ ಹಾಗೂ ಇಸ್ರೇಲ್‍ನಿಂದ ಈವರೆಗೂ 4,415 ಭಾರತೀಯರನ್ನು ಕರೆತರಲಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಈ ಕುರಿತು ಮಾಹಿತಿ ನೀಡಿದ್ದಾರೆ.
¿ಆಪರೇಷನ್ ಸಿಂಧು¿ ಕಾರ್ಯಾಚರಣೆ ಮೂಲಕ ಇರಾನ್ನಿಂದ 3,597 ಹಾಗೂ ಇಸ್ರೇಲ್ನಿಂದ 818 ಮಂದಿ ಸೇರಿದಂತೆ ಈವರೆಗೂ 4,415 ಭಾರತೀಯರನ್ನು ಕರೆತರಲಾಗಿದೆ. ಇದಕ್ಕಾಗಿ 19 ವಿಶೇಷ ವಿಮಾನಗಳು ಹಾಗೂ ವಾಯುಪಡೆಯ 3 ವಿಮಾನಗಳನ್ನು ಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗುರುವಾರ ರಾತ್ರಿ 10.30ಕ್ಕೆ ವಿಶೇಷ ವಿಮಾನವು ಯೆರೆವಾನ್, ಅರ್ಮೇನಿಯಾದಿಂದ ನವದೆಹಲಿಗೆ ಬಂದಿಳಿದಿದ್ದು. ಈ ವಿಮಾನದಲ್ಲಿ 173 ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ ಎಂದು ಹೇಳಿದ್ದಾರೆ.
ಇದಲ್ಲದೆ 14 ವಿದೇಶಿ ಪ್ರಜೆಗಳು, ನೇಪಾಳದ 9, ಶ್ರೀಲಂಕಾದ 4 ಮತ್ತು ಭಾರತೀಯ ಪ್ರಜೆಯೊಬ್ಬರ ಇರಾನ್ ಮೂಲದ ಪತ್ನಿಯನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
‘ಮನೆ – ಮನೆಗೆ ಪೊಲೀಸ್ʼ ಯೋಜನೆ ಜಾರಿಗೆ ತಂದ ಗೃಹ ಇಲಾಖೆ; ಏನಿದು ʼಮನೆ ಮನೆಗೆ ಪೊಲೀಸ್ʼ?
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


