ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಹಲವು ಶಾಸಕರ ಉಚ್ಚಾಟನೆ ಬಳಿಕವೂ ಆಂತರಿಕ ಕಲಹದ ಸನ್ನಿವೇಶಗಳು ಕಂಡುಬರುತ್ತಿದ್ದು, ಇದರ ನಡುವೆ ಬಿವೈ ವಿಜಯೇಂದ್ರ ಹಾಗೂ ಪಕ್ಷದ ಹಲವು ಮುಖಂಡರು ಅಶ್ವಥ್ ನಾರಾಯಣ್ ಅವರ ನಿವಾಸದಲ್ಲಿ ವಿಶೇಷ ಸಭೆ ನಡೆಸಿದ್ದಾರೆ.
ರಾಜಕೀಯ ವಲಯದಲ್ಲಿ ಇದು ಬಿಜೆಪಿ ಪಕ್ಷದಲ್ಲಿರುವ ಆಂತರಿಕ ಭಿನ್ನಮತದ ಶಮನಕ್ಕಾಗಿ ನಡೆದ ಸಭೆ ಎಂದೇ ಹೇಳಲಾಗುತ್ತಿದ್ದು, ಇದರ ಕುರಿತು ಸಭೆ ಮುಕ್ತಾಯಗೊಂಡ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.
ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಖಾರಜೋಳರವರು, ಸುನಿಲ್ ಕುಮಾರ್, ಸಿಟಿ ರವಿ, ಅರವಿಂದ್ ಲಿಂಬಾವಳಿ, ಅಶ್ವಥ್ ನಾರಾಯಣ್, ರವಿಕುಮಾರ್ ಹಾಜರಿದ್ದರು. ಇದು ಭಿನ್ನಮತ ಶಮನದ ಸಭೆಯಲ್ಲ. ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ತಿಳಿದು ಅವರ ವಿರುದ್ಧ ಯಾವ ರೀತಿ ಹೋರಾಟಗಳನ್ನು ಮಾಡಬೇಕು ಎಂಬುದನ್ನು ಹಿರಿಯರ ಸಮ್ಮುಖದಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು ಎಂದರು.
ಒಂಬತ್ತು – ಹತ್ತು ತಂಡಗಳನ್ನು ಮಾಡಿ ಜಿಲ್ಲಾ ಮಟ್ಟದಲ್ಲಿ ಪ್ರವಾಸಗಳನ್ನು ಮಾಡಿ, ಜಿಲ್ಲೆಯ ಸಮಸ್ಯೆಗಳನ್ನೂ ತೆಗೆದುಕೊಂಡು ಜಿಲ್ಲಾ ಕೇಂದ್ರಗಳಲ್ಲೂ ಹೋರಾಟಗಳನ್ನು ರೂಪಿಸಲು ಚರ್ಚೆ ನಡೆಯಿತು ಇದು ಆಂತರಿಕ ಭಿನ್ನಮತ ಶಮನದ ಸಭೆಯಲ್ಲ ಎಂದು ವಿಜಯೇಂದ್ರ ತಿಳಿಸಿದರು.
ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಸೇರಬಹುದು; ಎಂಬಿ ಪಾಟೀಲ್ ಮಾರ್ಮಿಕ ಹೇಳಿಕೆ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


